Thursday, January 23, 2025

ಕಾರ್ಖಾನೆ ರಾಸಾಯನಿಕ ತಾಜ್ಯಕ್ಕೆ ಮೀನುಗಳು ಸಾವು

ಬೀದರ್​ : ಜಿಲ್ಲೆಯಲ್ಲಿ ಕೆಮಿಕಲ್ ತ್ಯಾಜ್ಯದಿಂದ ಮೀನುಗಳ ಮಾರಣಹೋಮ ನಡೆದಿದೆ. ಹುಮನಾಬಾದ್ ರಾಸಾಯನಿಕ ಕಾರ್ಖಾನೆಯ ತಾಜ್ಯಕ್ಕೆ ಸಹಸ್ರಾರು ಮೀನುಗಳು ನಾಶವಾಗಿದೆ.

ಹುಮನಾಬಾದ್ ತಾಲೂಕಿನ ಗ್ರಾಮಗಳಾದ ನಿಂಬುರ, ಅಲ್ಲುರ್, ಮದರಗಾಂ ಗ್ರಾಮದ ಹಳ್ಳಗಳಲ್ಲಿ ಮೀನುಗಳು ಸಾವನ್ನಪ್ಪಿವೆ. ಕೈಗಾರಿಕಾ ಪ್ರದೇಶದ ಕೆಮಿಕಲ್ ಕಾರ್ಖಾನೆಯ ತಾಜ್ಯವನ್ನ ಟ್ಯಾಂಕರ್ ಮುಖಾಂತರ ತಂದು ತಡರಾತ್ರಿ ಈ ಗ್ರಾಮಗಳ ಅಕ್ಕಪಕ್ಕ ಸುರಿಯಲಾಗಿದೆ.

ಇನ್ನು, ಹಳ್ಳಕ್ಕೆ ಸೇರಿರುವ ಕೆಮಿಕಲ್ ತ್ಯಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿವೆ. ಇನ್ನು, ಹಳ್ಳದಲ್ಲಿ ನೀರು ಕುಡಿಯವ ಜಾನುವಾರಗಳ ಬಗ್ಗೆ ರೈತರಲ್ಲಿ ಆತಂಕ ಹೆಚ್ಚಿದೆ. ಈ ಕುರಿತು ಪ್ರಕರಣ ದಾಖಲಿಸಿ‌ ಕ್ರಮ ಕೈಗೊಳ್ಳುವಂತೆ ಜನರು ಗ್ರಾಮ ಪಂಚಾಯತಿ ಸದಸ್ಯ ಹರ್ಷಗೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES