ಬೆಂಗಳೂರು : ಚಾಮರಾಜಪೇಟೆ ಬಂದ್ ಮಾಡಿದ್ದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವಾಗಿದೆ. ಚಾಮರಾಜಪೇಟೆ ಜನತಾ ಹೋಟೆಲ್ ಮುಂಭಾಗ, ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ, ಟಿ.ಆರ್.ಮಿಲ್ ಸರ್ಕಲ್, ಮಕ್ಕಳಕೂಟ, ಜಿಂಕೆ ಪಾರ್ಕ್ ಸೇರಿದಂತೆ ಚಾಮರಾಜಪೇಟೆಯ ಒಟ್ಟು 6 ಭಾಗಗಳಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ.
ಮೈದಾನದ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗರಿಕರ ಒಕ್ಕೂಟ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ. ಮೈದಾನ ರಕ್ಷಿಸಿ, ಸರ್ಕಾರಿ ಸ್ವತ್ತು ಎಂದು ಘೋಷಿಸಲು ಒತ್ತಾಯಿಸಿರುವ ನಾಗರಿಕರ ಒಕ್ಕೂಟ, ಬಿಬಿಎಂಪಿಗೆ 15 ದಿನಗಳ ಕಾಲ ಡೆಡ್ ಲೈನ್ ನೀಡಿದೆ. ಅಲ್ಲದೇ, ಸಹಿ ಸಂಗ್ರಹಿಸಿ ಪ್ರಧಾನಮಂತ್ರಿಗೆ ಒಂದು ಪ್ರತಿ ಕಳಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿಗೂ ಇದನ್ನ ತಲುಪಿಸುತ್ತೇವೆ. ಸದ್ಯದಲ್ಲೇ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಮಾಡ್ತೀವಿ. ಇದು ಆಟದ ಮೈದಾನವಾಗಿಯೇ ಉಳಿಯಬೇಕು ಎಂದರು.