ಬೆಂಗಳೂರು : ಒಂದಲ್ಲೊಂದು ಪ್ರತಿಭಟನೆ,ರ್ಯಾಲಿ,ಮೆರವಣಿಗೆ ಹಾಟ್ಸ್ಪಾಟ್ ಆಗಿರುವ ಫ್ರೀಡಂ ಪಾರ್ಕ್ನಲ್ಲಿ ನಡೆಯೋ ಪ್ರತಿಭಟನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಕಾಲೇಜಿಗಳಿಂದ ಒತ್ತಾಯ ಮಾಡಲಾಗಿದೆ.
ಆಂದೋಲನಕ್ಕೆ ಮೀಸಲಾಗಿರುವ ಫ್ರೀಡಂ ಪಾರ್ಕ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುತ್ತಿದ್ಯಾ..? ಸದ್ಯ ಬೆಂಗಳೂರಿನ ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸುವಂತಿಲ್ಲ. ಆದರೆ ಇದೀಗ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ,ಮೆರವಣಿಗೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಹಾಗಾದರೆ ಇನ್ಮುಂದೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ, ಮೆರವಣಿಗೆ,ರ್ಯಾಲಿ,ಬಹಿರಂಗ ಸಭೆಗೆ ಕಡಿವಾಣ ಬೀಳುತ್ತಾ..? ವಿದ್ಯಾರ್ಥಿಗಳ ಭವಿಷ್ಯಕ್ಕೂ ಕುತ್ತು ತರುತ್ತಿದೆ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಒಂದಲ್ಲೊಂದು ಪ್ರತಿಭಟನೆ,ರ್ಯಾಲಿ,ಮೆರವಣಿಗೆ ಹಾಟ್ಸ್ಪಾಟ್ ಆಗಿರೋ ಫ್ರೀಡಂ ಪಾರ್ಕ್, ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಕೇಳೋದಕ್ಕೆ ಆಗುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಹೀಗಾಗಿ ಕೋರ್ಟ್ ಮೆಟ್ಟಿಲೇರಲು ಕಾಲೇಜು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ.
ಇನ್ನು, ಈ ಹಿಂದೆ ಫ್ರೀಡಂ ಪಾರ್ಕ್ ಹೊರತಾಗಿ ಬೇರೆಡೆ ಪ್ರತಿಭಟನೆ ನಿರ್ಬಂಧಿಸಿ ಹೈಕೋರ್ಟ್ ಆದೇಶಿಸಿದೆ. ಆದರೆ ಈಗ ಫ್ರೀಡಂ ಪಾರ್ಕ್ ಸುತ್ತಮುತ್ತ ಜಾಗದಲ್ಲೂ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದೆ. ಫ್ರೀಡಂ ಪಾರ್ಕ್ ಸುತ್ತ ಮುತ್ತ ಮಹಾರಾಣಿ ಕಾಲೇಜು,ಹೋಂ ಸೈನ್ಸ್ ಕಾಲೇಜು ಇವೆ. ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡ್ತಿದ್ದಾರೆ ಜೊತೆಗೆ ಆಗಾಗ ಎಕ್ಸಾಂ ನಡಿತಿರುತ್ತೆ. ಆದ್ರೆ ಫ್ರೀಡಂ ಪಾರ್ಕಲ್ಲಿ ನಡೆಯೋ ಪ್ರತಿಭಟನಾಕಾರರ ಧಿಕ್ಕಾರ, ಘೋಷಣೆಗಳಿಂದ ಪಾಠಕ್ಕೆ ಕಂಟಕವಾಗಲಿದೆ. ಹೀಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯೋ ಪ್ರತಿಭಟನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಕಾಲೇಜಿಗಳಿಂದ ಒತ್ತಾಯಮಾಡಿದ್ದಾರೆ.
ಅದಲ್ಲದೇ, ಈ ಬಗ್ಗೆ ಸರ್ಕಾರದ ಗಮನ ಕ್ಕೆ ತರಲು ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು, ಜೊತೆಗೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ ಕಾಲೇಜಿನ ಆಡಳಿತ ಮಂಡಳಿ ಪ್ರತಿಭಟನೆ ಶಬ್ದದಿಂದಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗ್ತಿದೆ, ಕೂಡಲೆ ಪ್ರತಿಭಟನೆಯನ್ನು ಸ್ಥಳಾಂತರಿಸಿ ಎಂದು ಆಗ್ರಹಿಸಿದ್ದಾರೆ.