Thursday, January 23, 2025

ನಾಳೆಯಿಂದ ದುನಿಯಾ ಇನ್ನಷ್ಟು ದುಬಾರಿ

ಬೆಂಗಳೂರು : ನಾಳೆಯಿಂದಲೇ ಜಾರಿಯಾಗುತ್ತೆ ಕೇಂದ್ರದ ನೂತನ ಜಿಎಸ್ಟಿ ನೀತಿ ಜಾರಿಯಾಗಲಿದ್ದು, ದಿನಬಳೆಕೆಯ ಹಲವು ವಸ್ತುಗಳು ಹಾಗೂ ಆಹಾರ ವಸ್ತುಗಳ ಮೇಲೂ ಜಿಎಸ್ಟಿ ವಿಧಿಸಲಾಗಿದೆ.

ಜುಲೈ 18 ರಿಂದ ಹೊಸ ದರ ಜಾರಿ ಎಂದು ಜಿಎಸ್ಟಿ ಕೌನ್ಸಿಲ್ ಘೋಷಿಸಿದ್ದಾರೆ. ಹೀಗಾಗಿ ಜನರಿಗೆ ಗಾಯದ ಮೇಲೆ ಬರೆ ಗ್ಯಾರೆಂಟಿಯಾಗಿದೆ.

ಯಾವುದೆಲ್ಲಾ ದುಬಾರಿ ?
ಪ್ಯಾಕ್ ಮಾಡಿದ ಆಹಾರ ವಸ್ತು. ( ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು.)
ಎಲ್ ಇಡಿ ಬಲ್ಬ್, ಎಲ್ ಇಡಿ ಲ್ಯಾಂಪ್, ಸೋಲಾರ್ ವಾಟರ್ ಹೀಟರ್, ಮುದ್ರಣ ಇಂಕ್,
ನಿತ್ಯ 1000 ರೂಗಿಂತ ಕಡಿಮೆ ಇರೋ ಹೋಟೆಲ್ ರೂಂಗೂ 12% ಜಿಎಸ್ಟಿ ಜಾರಿ.
ಚೆಕ್ ಬುಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಅಂಚೆ ಇಲಾಖೆ ಬುಕ್ ಫೋಸ್ಟ್.
ನಿತ್ಯ 5000 ರೂ ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ 5% ಜಿಎಸ್ಟಿ ಜಾರಿ ( ಐಸಿಯು ಹೊರತುಪಡಿಸಿ)
ನಿತ್ಯ 5000 ಗಿಂತ ಹೆಚ್ಚಿನ ಬಾಡಿಗೆ ವಿಧಿಸೋ ಧಾರ್ಮಿಕ ಕೇಂದ್ರಗಳು, ಮಾಸಿಕ 2500 ಕ್ಕೂ ಬಾಡಿಗೆ ವಿಧಿಸೋ ವಾಣಿಜ್ಯವಕೇಂದ್ರಗಳಿಗೂ ಜಿಎಸ್ಟಿ ಜಾರಿ.
ಬ್ಲಡ್ ಬ್ಯಾಂಕ್ಗಳು ವಸತಿ ಉದ್ದೇಶಕ್ಕಾಗಿ ನೀಡಿದ್ದ ಉದ್ಯಮ ಸಂಸ್ಥೆಗಳು ನೀಡಿದ್ದ ವಸತಿ ಕಟ್ಟಡಗಳಿಗೂ ತೆರಿಗೆ ವಿನಾಯಿತಿ ರದ್ದುಗೊಳಿಸಲಾಗಿದೆ.

ನಾಳೆಯಿಂದಲೇ ನೂತನ ಜಿಎಸ್ಟಿ ನೀತಿ ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES