ಬ್ರಿಟನ್ : ಪ್ರಧಾನಿ ಹುದ್ದೆಗೆ ಪೈಪೋಟಿ ಇನ್ನೂ ತೀವ್ರಗೊಳ್ಳುತ್ತಿದ್ದು, ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ಅವರನ್ನು ಬೇಡ ಎಂದು ಬ್ರಿಟನ್ ನ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಜಾನ್ಸನ್ ಅವರಿಗೆ ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ರಿಷಿ ಸುನಕ್ ಅವರನ್ನು ದೂಷಿಸಲಾಗುತ್ತಿದ್ದು, ರಿಷಿ ಬ್ರಿಟನ್ ಪ್ರಧಾನಿಯಾಗಬಾರದೆಂದು ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಲ್ಲಿ ಹೇಳಿದ್ದಾರೆ.
ಆದರೆ, ಯಾವುದೇ ಅಭ್ಯರ್ಥಿಗಳನ್ನೂ ಬೆಂಬಲಿಸುವುದಿಲ್ಲ ಅಥವಾ ಚುನಾವಣೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಜಾನ್ಸನ್ ಈಗ ಸೋತಿರುವ ಅಭ್ಯರ್ಥಿಗಳ ಬಳಿ ರಿಷಿ ಬ್ರಿಟನ್ ಪ್ರಧಾನಿಯಾಗಬಾರದು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿ ಹುದ್ದೆಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ನೇಮಕವಾಗಬೇಕೆಂಬುದು ಬೋರಿಸ್ ಅಭಿಪ್ರಾಯವಾಗಿದೆ.