Sunday, December 22, 2024

ಟಾಲಿವುಡ್ ಏಜೆಂಟ್​ನ ಮೆಚ್ಚಿದ ಆಲ್ ಇಂಡಿಯಾ ಕಟೌಟ್

ಟಾಲಿವುಡ್ ಬ್ಯಾಚಲರ್ ಪ್ಯಾನ್ ಇಂಡಿಯಾ ಏಜೆಂಟ್ ಆಗಿ ಬಡ್ತಿ ಪಡೆದಿದ್ದಾರೆ. ಇವ್ರ ಇಂಟರ್​ನ್ಯಾಷನಲ್ ಪವರ್.. ಆ್ಯಕ್ಟಿಂಗ್ ಖದರ್​ಗೆ ಇಡೀ ಭಾರತೀಯ ಚಿತ್ರರಂಗ ಸ್ಟನ್ ಆಗಿದೆ. ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಕೂಡ ಬೆನ್ನು ತಟ್ಟಿ ಬೇಷ್ ಅಂದಿದ್ದಾರೆ. ಅದ್ರ ಇನ್​ಸೈಡ್ ಸ್ಟೋರಿ ಇಲ್ಲಿದೆ.

  • ನಟೋರಿಯಸ್ ದೇಶಭಕ್ತನಾಗಿ ಅಖಿಲ್ ಅಕ್ಕಿನೇನಿ ವೈಲ್ಡ್ ರೈಡ್

ಯೆಸ್.. ಇದು ಮೋಸ್ಟ್ ಎಕ್ಸ್​ಪೆಕ್ಟೆಡ್ ಪ್ಯಾನ್ ಇಂಡಿಯಾ ಮೂವಿ ಏಜೆಂಟ್​ನ ಟೀಸರ್ ಝಲಕ್. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರೋ ಸೌತ್ ಮೂವಿಗಳ ಲಿಸ್ಟ್​ಗೆ ಈ ಏಜೆಂಟ್ ಕೂಡ ಸೇರಲಿದೆ. ಟಾಲಿವುಡ್​ನ ಕಿಂಗ್ ನಾಗಾರ್ಜುನ್​ರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿಯ ಮೊದಲ ಬಹುಭಾಷಾ ಸಿನಿಮಾ ಇದು.

ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿ ಎಲ್ಲರ ದಿಲ್ ಗೆದ್ದ ದಿಲ್ದಾರ್ ಹುಡ್ಗ, ಇದೀಗ ಆಲ್ ಇಂಡಿಯಾ ರಾ ಏಜೆಂಟ್ ಆಗಿ ಜಗಮಗಿಸಲಿದ್ದಾರೆ. ಚಿತ್ರದ ಮೇಕಿಂಗ್ ಕ್ವಾಲಿಟಿ, ಪಾತ್ರದ ಇಂಟೆನ್ಸ್ ಆ್ಯಕ್ಷನ್ ಹಾಗೂ ಎಮೋಷನ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಅದ್ರಲ್ಲೂ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಈ ಚಿತ್ರದ ಪ್ರಮುಖ ಪಾತ್ರವೊಂದನ್ನ ಪೋಷಿಸಿದ್ದು, ಏಜೆಂಟ್ ಅಖಿಲ್​ನ ಇಂಟ್ರಡ್ಯೂಸ್ ಮಾಡೋ ಪರಿ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ.

ನಟೋರಿಯಸ್ ಪೇಟ್ರಿಯಾಟ್ ಆಗಿ ಅಖಿಲ್ ಕಿಕ್ ಕೊಡಲಿದ್ದು, ರಾ ಏಜೆಂಟ್ ಪಾತ್ರಕ್ಕಾಗಿ ಆತನ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ಸ್ಮಾಲ್ ಟೀಸರ್​ನ ಒಂದೊಂದು ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ. ಹೃತಿಕ್ ರೋಷನ್​ರ ವಾರ್ ಸಿನಿಮಾನ ನೆನಪಿಸೋ ರೇಂಜ್​ಗೆ ಪ್ರೊಡಕ್ಷನ್ ರಿಚ್ ಆಗಿ ಮೂಡಿಬಂದಿದೆ. ಇನ್ನು ಅಖಿಲ್ ವೈಲ್ಡ್ ರೈಡ್ ಸೀಕ್ವೆನ್ಸ್ ಅಂತೂ ಕಣ್ಣಿಗೆ ಹಬ್ಬ ನೀಡಲಿದೆ. ಌಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ ನೀಡಲಿದೆ ಏಜೆಂಟ್.

ಅಂದಹಾಗೆ ಕಿಕ್, ರೇಸು ಗುರ್ರಂ ಖ್ಯಾತಿಯ ಸುರೇಂದರ್ ರೆಡ್ಡಿ ನಿರ್ದೇಶನದ ಸಿನಿಮಾ ಇದು. ಅವ್ರು ಕೈ ಹಾಕಿದ ಬಹುತೇಕ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್. ಏಜೆಂಟ್ ಕೂಡ ಸೌತ್​ನಿಂದ ನ್ಯಾಷನಲ್ ಇಂಟರ್​ನ್ಯಾಷನಲ್ ಲೆವೆಲ್​ಗೆ ಹೋಗ್ತಿರೋ ಮತ್ತೊಂದು ಕ್ವಾಲಿಟಿ ಸಿನಿಮಾ ಆಗಲಿದೆ. ಇನ್ನು ಈ ಚಿತ್ರದ ಟೀಸರ್​ನ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಲಾಂಚ್ ಮಾಡಿರೋದು ಹೆಮ್ಮೆಯ ವಿಷಯ.

ಕಿಚ್ಚ ಈಗಾಗ್ಲೇ ಆಲ್ ಇಂಡಿಯಾ ಕಟೌಟ್.. ಅದ್ರಲ್ಲೂ ಅಕ್ಕಿನೇನಿ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದ್ಯ ವಿಕ್ರಾಂತ್ ರೋಣ ಇಂಡಿಯನ್ ಸಿನಿದುನಿಯಾದಲ್ಲಿ ಚಾಲ್ತಿಯಲ್ಲಿದ್ದು, ಅವ್ರೇ ಸೂಕ್ತ ಅಂತ ಕಿಚ್ಚನಿಂದ ಟೀಸರ್​ನ ಲಾಂಚ್ ಮಾಡಿಸಲಾಗಿದೆ. ಮೇಕಿಂಗ್​ನ ನೋಡಿ ಸಿನಿಮಾಗೆ ಬೆಸ್ಟ್ ವಿಶಸ್ ಹೇಳಿರೋ ಕಿಚ್ಚ, ಅಖಿಲ್ ಹಾಗೂ ಮಮ್ಮುಕ್ಕರನ್ನ ಹಾಡಿ ಹೊಗಳಿದ್ದಾರೆ.

ತುಂಬಾ ದೊಡ್ಡ ಮಟ್ಟಕ್ಕೆ ಸಿನಿಮಾ ನಿರ್ಮಾಣವಾಗ್ತಿದ್ದು, ಕೊರೋನಾದಿಂದ ಪ್ರೊಡಕ್ಷನ್ ಕಾರ್ಯಗಳು ಕೊಂಚ ತಡವಾಗಿವೆ. ಹಾಗಾಗಿ ಆಗಸ್ಟ್​ನಲ್ಲಿ ತೆರೆಗೆ ಬರಲಿದೆ ಎನ್ನಲಾಗಿದ್ದ ಚಿತ್ರತಂಡ, ಇದೀಗ ರಿಲೀಸ್​ನ ಮತ್ತಷ್ಟು ಮುಂದೂಡಿವೆ. ಹೊಸ ರಿಲೀಸ್ ಡೇಟ್ ಹೊರಬೀಳಬೇಕಿದ್ದು, ಸಾಕ್ಷಿ ವೈದ್ಯ ಜೊತೆ ಅಖಿಲ್ ಆ್ಯಕ್ಷನ್ ಮೊಹಬ್ಬತ್ ಕಹಾನಿ ಇದೇ ವರ್ಷ ತೆರೆಗಪ್ಪಳಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES