ಮಂಡ್ಯ : ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಮುಳುಗಡೆಯಾಗಿದೆ.
ಪಶ್ಚಿಮ ವಾಹಿನಿಗೆ ಪಿಂಡ ಪ್ರಧಾನ ಮತ್ತು ಅಸ್ತಿ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. ಪಶ್ಚಿಮ ವಾಹಿನಿಯ ನಾಗರಕಟ್ಟೆ, ಮಂಟಪಗಳು ಮುಳುಗಡೆಯಾಗಿದ್ದು, ನದಿ ಪಕ್ಕದ ದೇವಸ್ಥಾನಗಳು ಜಲಾವೃತವಾಗಿದೆ. ಈ ಹಿನ್ನೆಲೆ ಪಶ್ಚಿಮ ವಾಹಿನಿಗೆ ಪ್ರವಾಸಿಗರಿಗೆ ಹಾಗೂ ಜನರಿಗೆ ನಿರ್ಬಂಧ ಹೇರಲಾಗಿದೆ.
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬರ್ತಿದ್ದರು. ಕಾವೇರಿ ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಿ ಪಿಂಡ ಪ್ರಧಾನ ಮಾಡಲಾಗುತ್ತಿತ್ತು. ಇದೀಗ ಶ್ರೀರಂಗಪಟ್ಟಣ ಪುರಸಭೆ ಪಿಂಡ ಪ್ರಧಾನ, ಆಸ್ತಿ ವಿಸರ್ಜನೆಗೂ ನಿಷೇಧ ಹೇರಲಾಗಿದೆ. ಇನ್ನು, ಕೆಆರ್ಎಸ್ನ ಬೃಂದಾವನದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಬೋಟಿಂಗ್ ಪಾಯಿಂಟ್ನಲ್ಲಿ ಮೊಸಳೆ ಕಂಡು ಪ್ರವಾಸಿಗರು ಆತಂಕಗೊಂಡಿದ್ದಾರೆ.