Wednesday, January 1, 2025

ಸಿನಿಮಾ ನಟ ನಿರ್ದೇಶಕ, ನಿರ್ಮಾಪಕ ವೀರೇಂದ್ರ ಬಾಬು ಬಂಧನ

ಬೆಂಗಳೂರು : ಸ್ವಯಂಕೃಷಿ ಸಿನಿಮಾ ನಟ ನಿರ್ದೇಶಕ, ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಬಂಧಿಸಿದ್ದಾರೆ.

ನಗರದ ಕೊಡಿಗೆಹಳ್ಳಿ ಪೊಲೀಸರಿಂದ ಅರೋಪಿ ಅರೆಸ್ಟ್ ಮಾಡಿದ್ದು, ರಾಷ್ಟ್ರೀಯ ಜನಹಿತ ಪಕ್ಷ ಎಂದು ರಾಜಕೀಯ ಪಕ್ಷ ಕಟ್ಟಿದ್ದ ವೀರೇಂದ್ರ ಬಾಬು ಮುಂಬರುವ ಚುನಾವಣೆಯಲ್ಲಿ ಎಂಎಲ್ ಎ ಹಾಗು ಎಂಪಿ ಟಿಕೆಟ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾನೆ.

ಅದಲ್ಲದೇ, ಹಲವಾರು ಜನರಿಗೆ ಹಣ ಪಡೆದು ವಂಚನೆ ಮಾಡಿದ್ದು, ಸುಮಾರು ಒಂದು ಕೋಟಿ ಎಂಬತ್ತೆಂಟು ಲಕ್ಷ ವಂಚನೆ ಮಾಡಿದ್ದಾನೆ. ಬಾಬು ವಿರುದ್ದ ಬಸವರಾಜ್ ಘೋಷಾಲ್ ಎಂಬುವವರು ದೂರು ನೀಡಿದ್ದಾರೆ.

ಇನ್ನು, ಕರ್ನಾಟಕ ರಕ್ಷಣಾ ಪಡೆ ಎಂಬ ಸಂಘಟನೆ ಕಟ್ಟಿದ್ದ, ಈ ಸಂಘಟನೆಗೆ ಸಹ ತಾಲೂಕ್​ ಹಾಗು ಜಿಲ್ಲಾದ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಹಣ ಪಡೆದಿದ್ದಾನೆ. ಹಣವನ್ನು ಸರ್ಕಾರಿ ಶಾಲ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡ್ತಿವಿ ಎಂದಿದ್ದ ಸದ್ಯ ಅರೋಪಿಯನ್ನ ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES