Thursday, January 23, 2025

ಇನ್ನು ಮುಂದೆ ಮೊಬೈಲ್‌, ಕ್ಯಾಮರಾ ಕಂಡ್ರೆ ಸರ್ಕಾರಕ್ಕೆ ಹೊಸ ಭಯ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೋ -ವೀಡಿಯೋ ತೆಗೆಯುವುದಕ್ಕೆ ನಿಷೇಧ ಹೇರಿ ಕರ್ನಾಟಕ ಸರ್ಕಾರ ಆದೇಶ ಪ್ರಕಟಿಸಿದೆ. ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಅಥವಾ ವೀಡಿಯೋ ಮಾಡದಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ಕಚೇರಿಗಳ ಫೋಟೋ ಅಥವಾ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರ್ಬಳಕೆ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ವಿವಿಧ ಕಾರ್ಯಗಳ ನಿಮಿತ್ತ ಆಗಮಿಸುತ್ತಾರೆ. ಆದರೆ ಹೀಗೆ ಸರ್ಕಾರಿ ಕಚೇರಿಗಳಿಗೆ ಆಗಮಿಸಿದ ಸಂದರ್ಭಗಳಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಫೋಟೋ ಅಥವಾ ವಿಡಿಯೋಗಳನ್ನು ತೆಗೆದುಕೊಂಡು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರ್ಬಳಕೆ ಮಾಡಲಾಗ್ತಿದೆ ಎಂದು ಕಾರಣ ನೀಡಿ ಕರ್ನಾಟಕ ಸರ್ಕಾರ ಈ ಆದೇಶ ನೀಡಿದೆ.

ಅಲ್ಲದೇ ವಿಶೇಷವಾಗಿ ಮಹಿಳಾ ನೌಕರರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಉಲ್ಲೇಖಿಸಿ ಕರ್ನಾಟಕ ಸರ್ಕಾರ ಈ ಆದೇಶ ಪ್ರಕಟಿಸಿದೆ.

RELATED ARTICLES

Related Articles

TRENDING ARTICLES