Monday, December 23, 2024

5 ವರ್ಷಗಳ ನಂತರ ಸಿದ್ಧವಾದ ಶಿವಾನಂದ ಸ್ಟೀಲ್ ಬ್ರೀಡ್ಜ್..!

ಬೆಂಗಳೂರು : ಕಳೆದ 5 ವರ್ಷಗಳಿಂದ ನಗರದ ಶಿವನಾಂದ ಸರ್ಕಲ್ ಬಳಿ ಇರೋ ಸ್ಟೀಲ್ ಬ್ರೀಡ್ಜ್ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮೂರು ಸಿಎಂಗಳು ಬಂದು ಹೋದ್ರು, ಸ್ಟೀಲ್ ಬ್ರೀಡ್ಜ್ ಮಾತ್ರ ಓಪನ್ ಆಗಿರಲ್ಲಿಲ್ಲ. ಕೆಲ ಕಾನೂನಾತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಅರ್ಧಕ್ಕೆ ನಿಂತ್ತಿತ್ತು. ಆದ್ರೆ ಈಗ ನ್ಯಾಯಾಲಯದ ಆದೇಶದಂತೆ ಬ್ರೀಡ್ಸ್​​​ಗೆ ಮುಕ್ತಿ ನೀಡೋದಕ್ಕೆ ಬಿಬಿಎಂಪಿ ಸಜ್ಜಾಗಿದೆ.

ರೇಸ್‌ಕೋರ್ಸ್‌ ರಸ್ತೆಯಿಂದ ಶಿವಾನಂದ ವೃತ್ತದ ಮೂಲಕ ನೆಹರು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಹರೆಕೃಷ್ಣ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ 2017ರ ಜೂನ್‌ನಲ್ಲಿ ಉಕ್ಕಿನ ಮೇಲ್ವೇತುವೆ ಕಾಮಗಾರಿ ಆರಂಭಿಸಲಾಯಿತು. ಕೇವಲ 9 ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿ ವಿವಿಧ ಅಡತಡೆಗಳಿಂದಾಗಿ 5 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಮರಗಳ ತೆರವು, ಭೂಸ್ವಾಧೀನ, ಮೇಲ್ಸೇತುವೆಯ ವಿಸ್ತೀರ್ಣ ಹೆಚ್ಚಳ ಹಾಗೂ ಗುತ್ತಿಗೆದಾರರಿಂದ ಕಾಮಗಾರಿ ದರ ಪರಿಷ್ಕರಣೆ ಸೇರಿ ವಿವಿಧ ಕಾರಣಗಳಿಂದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಇನ್ನು ಮೇಲ್ವೇತುವೆಯಿಂದ ಶೇಷಾದ್ರಿಪುರ ಕಡೆಗೆ ಇಳಿಜಾರು ನಿರ್ಮಿಸಲು ಭೂಸ್ವಾಧೀನಕ್ಕೆ ಸ್ಥಳೀಯರಿಂದ 40 ಕೋಟಿ ರೂ.ಗೆ ಬೇಡಿಕೆ ಬಂದಿತ್ತು. ಇಷ್ಟೊಂದು ವೆಚ್ಚ ಪಾವತಿಸಲಾಗದೆ ಡೌನ್‌ಲ್ಯಾಂಪ್‌ನ ವಿನ್ಯಾಸವನ್ನು ಬದಲಿಸಲಾಯಿತು. ಈ ವಿನ್ಯಾಸದ ಬಗ್ಗೆ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಸೇತುವೆ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆಯಂತೆ.

ಇನ್ನೂ ಉಕ್ಕಿನ ಮೇಲ್ಸೇತುವೆಯ ರೈಲ್ವೆ ಅಂಡ‌ರ್ ಪಾಸ್‌ ಬದಿಯಲ್ಲಿ ಡೌನ್‌ಲ್ಯಾಂಪ್ ಶೇ. 5.5 ಮಾದರಿಯಲ್ಲಿ ನಿರ್ಮಿಸಲು ಭೂಸ್ವಾಧೀನಕ್ಕೆ ಸಮಸ್ಯೆ ಎದುರಾಯಿತು. ವೆಚ್ಚ ತಗ್ಗಿಸುವ ದೃಷ್ಟಿಯಿಂದ ಬಿಬಿಎಂಪಿ ಡೌನ್‌ಲ್ಯಾಂಪ್‌ನ ವಿನ್ಯಾಸದಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್‌ ಅನ್ವಯ ಇಳಿಜಾರನ್ನು ಶೇ.6.6 ಮಾಡಲು ಮರು ಯೋಜಿಸಿದ್ದು. ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಸರ್ಜಿ ಸಲ್ಲಿಸಿದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ಐಐಎಸ್‌ಸಿ ನೀಡಿದ ವರದಿಯಲ್ಲಿ ಪಾಲಿಕೆಯು ಮರು ಯೋಜಿಸಿದ ಡೌನ್‌ಲ್ಯಾಂಪ್ ನಿರ್ಮಾಣ ಯೋಗ್ಯವಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ, ಮೇಲ್ಸೇತುವೆ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ನೀಡಿದೆ ಎಂದು ಪಾಲಿಕೆ ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.

ಇನ್ನೂ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೇ.90 ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್‌ಲ್ಯಾಂಪ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿದ್ದು, ಶಿವಾನಂದ ವೃತ್ತದ ಉಕ್ಕಿನ ಮೇಲೇತುವೆ ಮೇಲೆ ಆಗಸ್ಟ್​​​15 ರಂದು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿರೋದು ಸಂತಸದ ವಿಷಯ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES