Wednesday, January 22, 2025

ಬಡ ಮಕ್ಕಳ ಆಹಾರದ ಮೇಲೆ ಕೇಂದ್ರ ಸರ್ಕಾರದ ಕಣ್ಣು: ಡಿ.ಕೆ.ಸುರೇಶ್

ಬೆಂಗಳೂರು : ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ಆಕ್ರೋಶ ಹೊರಹಾಕಿದರು.

ಮೊಟ್ಟೆ ವಿತರಣೆ ಬೇಡ ಎಂಬ ಕೇಂದ್ರದ ನಿಲುವು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಡ ಮಕ್ಕಳ ಆಹಾರಕ್ಕೆ ಕಣ್ಣು ಹಾಕಿದೆ. ಬಿಜೆಪಿ ಅಜೆಂಡಾ ಮುಂದೆ ತರ್ತಿದೆ. ಮಕ್ಕಳ ಪೌಷ್ಠಿಕಾಂಶ ವಿಚಾರದಲ್ಲೂ ರಾಜಕೀಯ ತರಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾಡಿದರು.

ಇದೇ ವೇಳೆ ರಾಜ್ಯದಲ್ಲಿ ಅತಿವೃಷ್ಠಿ ಹಿನ್ನೆಲೆಗೆ ಪ್ರತಿಕ್ರಿಯಿಸಿ, ಸಚಿವರಿಗೆ ಬಿಜೆಪಿ ಸಭೆ ಮುಖ್ಯವಾಯ್ತೇ ? ರಾಜ್ಯದಲ್ಲಿ ತೀವ್ರಮಳೆಯಾಗುತ್ತಿದೆ. ಕಳೆದ ಬಾರಿ ಆಗಿರುವ ನಷ್ಟಕ್ಕೆ‌ಪರಿಹಾರ ಕೊಡ್ತಿಲ್ಲ. ಇಲ್ಲಸಲ್ಲದ ಸಬೂಬುಗಳನ್ನ ಹೇಳ್ತಾರೆ. ಅವರಿಗೆ ರೈತರನ್ನ ಕಂಗಾಲು ಮಾಡಬೇಕು ಅಷ್ಟೇ. ಅವರಿಗೆ ಬೇಕಾಗಿರೋದು ಕಮೀಷನ್, ಒಎಂಆರ್ ಶೀಟ್ ತಿದ್ದೋದಷ್ಟೇ. ರೈತರ ಪಂಪ್ ಸೆಟ್ ಮನೆಗಳು ಬಿದ್ದಿವೆ. ಅದಕ್ಕೆ ಪರಿಹಾರ ಇಲ್ಲ ಅಂತ ಅಧಿಕಾರಿಗಳು ಸಬೂಬು ಹೇಳ್ತಾರೆ..ಇನ್ನೂ ಈಗ ಇವರು ಎಲ್ಲಿಂದ ಪರಿಹಾರ ನೀಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES