Friday, December 27, 2024

ಲಾಂಗ್ ಡ್ರೈವ್ ಹೋಗಿದ್ದ ಲವರ್ಸ್’ಗೆ ಹಲ್ಲೆ

ಬೆಂಗಳೂರು : ಲಾಂಗ್ ಡ್ರೈವ್ ಹೋಗಿದ್ದ ಲವರ್ಸ್’ಗೆ ಹಲ್ಲೆ ಮಾಡಿ ಸುಲಿಗೆ ಮಾಡಿದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಅನಿಲ್, ಕಿರಣ್, ಸುಬ್ರಹ್ಮಣ್ಯ ಬಂಧಿತ ಸುಲಿಗೆಕೋರರು ಜುಲೈ 9 ರಂದು ಮಾರತ್ತಹಳ್ಳಿಯಿಂದ ದೇವನಹಳ್ಳಿಗೆ FZ ಬೈಕ್ ನಲ್ಲಿ‌ ಲಾಂಗ್ ಡ್ರೈವ್ ಹೋಗುತ್ತಿದ್ದರು. ವಾಪಸ್ ಬರೋ ವೇಳೆ ದೇವನಹಳ್ಳಿ ಬೈಪಾಸ್ ಬಳಿ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿದ್ದ . ಈ ವೇಳೆ ಕಬ್ಬಿಣದ ರಾಡ್ ಹಿಡಿದು ಎಂಟ್ರಿಕೊಟ್ಟಿದ್ದ ಸುಲಿಗೆಕೋರರು, ಕಬ್ಬಿಣದ ರಾಡ್ ನಿಂದ ಕಿರಣ್ ಎಡಗಾಲಿಗೆ ಹೊಡೆದು ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕಸಿದಿದ್ರು. ನಂತರ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದು, ಹಣ ಕೊಡದಿದ್ರೆ ನಿನ್ನ ಲವ್ವರ್’ನ್ನ ಇಲ್ಲೆ ಮುಗಿಸ್ತೀವಿ ಎಂದು ಬೆದರಿಕೆ ನೀಡಿದ್ದಾನೆ.

ಇನ್ನು, ನನ್ನ ಬಳಿ ಹಣವಿಲ್ಲ ಎಟಿಎಂ ನಲ್ಲಿ ಡ್ರಾ ಮಾಡಿ ಕೊಡ್ತೀನಿ ಎಂದಿದ್ದ ಕಿರಣ್ ನಂತರ ಹುಡುಗಿಯನ್ನ ಇಬ್ಬರು ಸುಲಿಗೆಕೋರರು ಒತ್ತೆಯಾಳಿಗಿರಿಸಿಕೊಂಡಿದ್ದಾರೆ. ಕಡೆಗೆ ಕಿರಣ್ ಜೊತೆ ಒರ್ವ ಬೈಕ್ ನಲ್ಲಿ ತೆರಳಿ ದೇವನಹಳ್ಳಿ ವಿಜಿಪುರ ಕ್ರಾಸ್ ಬಳಿ ಎಟಿಎಂ ನಿಂದ 15 ಸಾವಿರ ಹಣ ಡ್ರಾ ಮಾಡಿದ್ದಾರೆ.

ಅದಲ್ಲದೇ, ಪಲ್ಲವಿ ಡಾಬದಲ್ಲಿ ತನ್ನಿಬ್ಬರು ಗೆಳೆಯರಿಗೆ ಊಟ ಮತ್ತು ಎಣ್ಣೆ ಪಾರ್ಸಲ್ ತೆಗೆದುಕೊಂಡಿದ್ದಾನೆ. ಕಡೆಗೆ ಆರೋಪಿಗಳಾದ ಅನಿಲ್ ಪವನ್ ಸುಬ್ರಮಣಿ ಕಿರಣ್ ಹಾಗೂ ಆತನ ಗೆಳತಿಯನ್ನ ಬಿಟ್ಟು ಕಳಿಸಿದ. ಘಟನೆ ನಂತರ ಯುವಕ ಕಿರಣ್ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

RELATED ARTICLES

Related Articles

TRENDING ARTICLES