Sunday, May 19, 2024

IAS ,IPS ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ಯಾ ಬಿಡಿಎ..?

ಬೆಂಗಳೂರು : ಕೆಂಪೇಗೌಡ ಬಡಾವಣೆಯಲ್ಲಿ 25 ಎಕರೆ ಭೂಮಿ ನೀಡುವಂತೆ ಮೆಟ್ರೋ ಪಾಲಿಟಿನ್ ಕೋ ಆಪರೇಟಿವ್ ಸೊಸೈಟಿ ಬಿಡಿಎಗೆ ಮನವಿ ಮಾಡಿದ್ದಾರೆ.

ಬಿಡಿಎನಲ್ಲಿ ಬಡವರಿಗೆ ಒಂದು ನಿವೇಶನ ಕೊಡೋಕೆ ನೂರಾರು ರೂಲ್ಸ್ ಇದೆ. ಐಎಎಸ್‌ ಐಪಿಎಸ್ ಅಧಿಕಾರಿಗಳಿಗೆ ಮತ್ತೆ ಭೂಮಿ ನೀಡೋಕೆ ಪ್ಲಾನ್ ರೆಡಿ ಆಗಿತ್ತು. ಐಎಎಸ್ ಐಪಿಎಸ್ ಅಧಿಕಾರಿಗಳು ಸದ್ಯಸರಾಗಿರುವ ಮೆಟ್ರೋಪಾಲಿಟನ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಗೆ ಮತ್ತೆ ಜಮೀನು ಹಂಚಿಕೆ ಮಾಡಲಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ 25 ಎಕರೆ ಭೂಮಿ ನೀಡುವಂತೆ ಮೆಟ್ರೋ ಪಾಲಿಟಿನ್ ಕೋ ಆಪರೇಟಿವ್ ಸೊಸೈಟಿ ಬಿಡಿಎಗೆ ಮನವಿ ಮಾಡಲಾಗಿದ್ದು, ಸೊಸೈಟಿ ಬೇಡಿಕೆ ಆಧಾರಿಸಿ ಬಿಡಿಎ ಆಡಳಿತ ಮಂಡಳಿ 25 ಎಕರೆ ಜಮೀನು ನೀಡೋಕೆ ಅಸ್ತು ನೀಡಿದ್ದಾರೆ.

ಆದರೆ, ಈ ಹಿಂದೇ ಐಎಎಸ್ ಐಪಿಎಸ್ ಅಧಿಕಾರಿಗಳ ಸೊಸೈಟಿ ಗೆ 25 ಎಕರೆ ಅರ್ಕಾವತಿ ಲೇಔಟ್ ನಲ್ಲಿ ಹಂಚಿಕೆ ಮಾಡಲಾಗಿದೆ. ಆದ್ರೆ ಇದೀಗ ಮತ್ತೆ ಕೆಂಪೇಗೌಡ ಬಡಾವಣೆಯಲ್ಲಿ 25 ಎಕರೆ ಜಮೀನು ನೀಡೋಕೆ ಬಿಡಿಎ ಬೋರ್ಡ್ ಸಮ್ಮತಿ ನೀಡಲಾಗಿದ್ದು, ಆಯಕಟ್ಟಿನ ಜಾಗದಲ್ಲಿ ಐಎಎಸ್ ಐಪಿಎಸ್ ಅಧಿಕಾರಿಗಳೇ ಇರುವದರಿಂದ ಸೊಸೈಟಿ ಬೇಡಿಕೆ ತ್ವರಿತವಾಗಿ ಅನುಮೋದನೆ ನೀಡಲಾಗಿತ್ತು. ಐಎಎಸ್ ಐಪಿಎಸ್ ಅಧಿಕಾರಿಗಳ ಸೊಸೈಟಿಗೆ ಹಂತ ಹಂತವಾಗಿ ಎಕರೆಗಟ್ಟಲೆ ಭೂಮಿ ನೀಡೋಕೆ ಬಿಡಿಎ ಚಿಂತನೆ ಮಾಡಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 100 ಎಕರೆ ಭೂಮಿ ನೀಡುವಂತೆ ಸೊಸೈಟಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES