Wednesday, January 22, 2025

ವಾಯು ವಿಹಾರಿಗಳಿಗೆ ಬಿಬಿಎಂಪಿಯಿಂದ ಗುಡ್ ನ್ಯೂಸ್

ಬೆಂಗಳೂರು: ಬಿಬಿಎಂಪಿ ಅಂದ್ರೆ ಸದಾ ಒಂದಲ್ಲಾ ಒಂದು ವಿವಾದ ಮೈಮೇಲೆ ಎಳೆದು ಕೊಳ್ಳುತ್ತಲೇ ಇರುತ್ತೆ ಅನ್ನೋ ಬಾಯಿ ಮಾತಿದೆ. ಆದ್ರೆ ಆಗಾಗ ಸಾರ್ವಜನಿಕರಿಗೆ ಒಳ್ಳೆಯ ಕೆಲಸವನ್ನೂ ಕೂಡಾ ಮಾಡುತ್ತಿರುತ್ತದೆ. ಹಾಗಾದ್ರೆ ಈ ಒಳ್ಳೆಯ ಕೆಲಸವಾದ್ರು ಏನಂತೀರಾ?

ಬಿಬಿಎಂಪಿ ವಿಚಾರದಲ್ಲಿ ಪ್ರತಿದಿನ ಪಾಸಿಟಿವ್ ಸ್ಟೋರಿಗಿಂತ ನೆಗೆಟಿವ್ ಸ್ಟೋರಿಗಳಲ್ಲೇ ಬಾರಿ ಪ್ರಸಿದ್ದಿಯಾಗಿರೋದುಂಟು. ಆದ್ರೆ ಈ ಬಾರಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಾಗರೀಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಿಲಿಕಾನ್ ಸಿಟಿ ಜನ ಪ್ರತಿ ದಿನ ಟ್ರಾಫಿಕ್ ಕಿರಿ ಕಿರು ದೂಳು ಹೀಗೆ ನಾನಾ ಸಮಸ್ಯೆಗಳು ಹೆಚ್ಚು. ಇದ್ರಿಂದ ಕೆಲ ಜನ ಆರೋಗ್ಯ ಕಾಪಾಡಿಕೊಳ್ಳಲು ವಾಕಿಂಗ್ ಹಾಗೂ ಜಾಗಿಂಗ್ ಗಾಗಿ ಪಾಕ್೯ ಗಳ ಮೊರೆ ಹೋಗೋರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಕೆಲ ಜನರಿಗೆ ಬೆಳಿಗ್ಗೆ ಫ್ರೀ ಇದ್ರೆ ಇನ್ನೂ ಕೆಲ ಜನರಿಗೆ ಸಂಜೆ ವಾಕಿಂಗ್ ಮಾಡಲು ಸಮಯ ಇರೋದಿಲ್ಲ. ಇದ್ರಿಂದ ಪಾಕ್೯ ಗಳ ಓಪನ್ ಸಮಯದಲ್ಲಿ ಕೆಲ ಬದಲಾವಣೆ ಮಾಡಿದ್ದು.

ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೂ ಪಾರ್ಕ್ ಓಪನ್ ಗೆ ಅವಕಾಶ ನೀಡಿ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ಇದ್ರಿಂದ ವಾಯು ವಿಹಾರಿಗಳು ಸಂತಸವನ್ನ ವ್ಯಕ್ತಪಡಿಸಿದ್ದಾರೆ.

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿಸುಮಾರು 1200 ಕ್ಕೂ ಹೆಚ್ಚು ಪಾಕ್ ೯ ಗಳಿದ್ದು. ಇಷ್ಟು ದಿನ ಬೆಳಗ್ಗೆ 5 ರಿಂದ 10 ಗಂಟೆ ಸಂಜೆ 4 ರಿಂದ ರಾತ್ರಿ 8 ರ ವರೆಗೆ ಮಾತ್ರ ಪಾಕ್೯ ಗಳು ಓಪನ್ ಇರುತ್ತಿದ್ದವು. ಆದ್ರೆ ಈಗ ಬೆಳಿಗ್ಗೆ 5 ಗಂಟೆ ಯಿಂದ ರಾತ್ರಿ 8 ಗಂಟೆ ವರೆಗೂ ಓಪನ್ ಇರಲಿದ್ದು. ಉದ್ಯಾನವನಗಳ ನಿರ್ವಹಣೆಗೆ ಅಂತ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ಅವಕಾಶ ನಿಗದಿ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪಾಕ್೯ ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವ್ಯವಸ್ಥೆ ಯನ್ನೂ ಕೂಡಾ ಕಲ್ಪಿಸಲಾಗುತ್ತೆ ಅಂತ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾಂತ್ ಮನೋಹರ್ ವಾಯುವಿಹಾರಿಗಳಿಗೆ ಭರವಸೆ ನೀಡಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಕೆಲವು ಪಾಕ್೯ ಗಳನ್ನ ಬಿಬಿಎಂಪಿ ನಿರ್ವಹಣೆ ಮಾಡ್ತಿದ್ರೆ. ಕೆಲವನ್ನ ಬಿಡಿಎ ನಿರ್ವಹಣೆ ಮಾಡ್ತಿದೆ. ಅದೇ ರೀತಿ ಇನ್ನೂ ಕೆಲವು ಪಾಕ್೯ ಗಳನ್ನ ಖಾಸಗಿ ಸಂಘ ಸಂಸ್ಥೆಗಳು ಕೂಡಾ ನಿರ್ವಹಣೆ ಮಾಡ್ತಿದ್ದು. ಯಾವುದೇ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸದ್ಭಳಕೆ ಆದ್ರೆ ಒಳ್ಳೆಯದು

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES