Monday, December 23, 2024

ಮುಖಕ್ಕೆ ಟೊಮ್ಯಾಟೊ ಹಚ್ಚುವುದರಿಂದ ಸಿಗುವ ಲಾಭಗಳೆಷ್ಟು ಗೊತ್ತಾ?

ಚರ್ಮದ ಕಾಂತಿರಹಿತ ಸಮಸ್ಯೆ ಎಲ್ಲರಲ್ಲಿಯೂ ಸಾಮಾನ್ಯವಾಗಿ  ಕಾಡುತ್ತದೆ, ಮುಖ ಕಳಕಳೆಯಿಂದ ಕೂಡಿರಬೇಕು ಅಂತ ಎಲ್ಲರೂ ಇಚ್ಚಿಸುತ್ತಾರೆ ಆದರೆ ಸೂರ್ಯನ ಬಿಸಿಲು ಹಾಗೂ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಮುಖದ ಕಾಂತಿ ಮಾಸಿಹೋಗಿ ಮೊಡವೆಗಳು ಮೂಡುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಟೊಮ್ಯಾಟೊ ರಾಮಬಾಣವಾಗಿದೆ.

ಈ ಸಮಸ್ಯೆಗಳನ್ನ ನಿವಾರಿಸಲು ಹೆಚ್ಚು ಶ್ರಮ ಪಡಬೇಕಾಗಿಲ್ಲ ಪ್ರತಿನಿತ್ಯ ಟೊಮ್ಯಾಟೊ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿ, ಚರ್ಮದ ಹಲವು ಸಮಸ್ಯೆಗಳನ್ನ ನಿವಾರಿಸುತ್ತದೆ. ಹಸಿ ಟೊಮ್ಯಾಟೊವನ್ನ ನೇರವಾಗಿ ಮುಖಕ್ಕೆ ಹಚ್ಚಬಹುದು ಅಥವಾ ಟೊಮ್ಯಾಟೊ ರಸವನ್ನ ಕೂಡ ಮುಖಕ್ಕೆ ಹಚ್ಚಬಹುದು.

ಟೊಮ್ಯಾಟೊ ಚರ್ಮವನ್ನ ಯಾವ ರೀತಿ ಉತ್ತಮಗೊಳಿಸುತ್ತದೆ ಹಾಗೂ ಟೊಮ್ಯಾಟೊವನ್ನ ಬಳಸುವ ರೀತಿ ಹೇಗೆ ತಿಳಿಯೋಣ.

  1. ಟೊಮ್ಯಾಟೊವನ್ನ ಮುಖಕ್ಕೆ ಹಚ್ಚುವುದರಿಂದ ಅದು ಮುಖದ ಚರ್ಮವನ್ನ ಎಫ್ಫೋಲಿಯೇಟ್ ಮಾಡುತ್ತದೆ . ಇದು ಸತ್ತ ಚರ್ಮವನ್ನ ತೆಗೆದುಹಾಕುವುದರ ಜೊತೆಗೆ ಮಂಕನ್ನ ನಿವಾರಿಸುತ್ತದೆ.
  2. ಎಫ್ಫೋಲಿಯೇಶನ್ ರಂಧ್ರಗಳನ್ನ ಆಳವಾಗಿ ಸ್ವಚ್ಚಗೊಳಿಸುತ್ತದೆ, ಚರ್ಮವನ್ನ ಆರೋಗ್ಯಕರವಾಗಿ ಇಟುವುದಲ್ಲದೆ ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ.
  3. ಟೊಮ್ಯಾಟೊ ಮುಖದಲ್ಲಿನ ಕಪ್ಪು ಕಲೆಗಳನ್ನ ಹಗುರಗಪೊಳಿಸಲು ಮತ್ತು ಚರ್ಮದ ಬಣ್ಣವನ್ನ ಸುಧಾರಿಸಲು ಸಹಾಯ ಮಾಡುತ್ತದೆ, ಇದು ತ್ವಚೆಯ ಹೊಳಪಿಗೆ ಕಾರಣವಅಗುತ್ತದೆ.
  4. ಟ್ಯಾನಿಂಗ್ ಮಾರ್ಕ್ಸ್ ಕೂಡ ಟೊಮ್ಯಾಟೊ ರಸವನ್ನ ಹಚ್ಚುವ ಮೂಲಕ ಕಡಿಮೆಯಾಗುತ್ತದೆ. ಚರ್ಮದ ಕಿರಿಕಿರಿಯು ಸಹ ಕಡಿಮೆಯಾಗುತ್ತದೆ. ಈ ಗುಣಗಳು ಮುಖದ ಕಾಂತಿಯನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ.
  5. ಇದು ಮುಖದ ಮೇಲಿರುವ ವಯಸ್ಸಾದ ಚಿಹ್ನೆಗಳನ್ನ ಸೂಕ್ಷ್ಮ ರೇಖೆಗಳು, ಕಪ್ಪು ಕಲೆಗಳನ್ನ ಕಡಿಮೆ ಮಾಡುತ್ತದೆ.

ಈ ಹಣ್ಣು ಕಾಲಜನ್ ಹೆಚ್ಚಿಸುವಲ್ಲಿ ಸಹಕಾರಿ. ಕಾಲಜನ್ ಚರ್ಮದಲ್ಲಿ ಇರುವ ಪ್ರೋಟಿನ್ ಆಗಿದ್ದು ಅದು ವಿನ್ಯಾಸವನ್ನ ಸುಧಾರಿಸುತ್ತದೆ ಮತ್ತು ಚರ್ಮವನ್ನ ಯೌವನವಾಗಿರಿಸುತ್ತದೆ.ಟೊಮೆಮೊದಲ್ಲಿರುವ ತೇವಾಂಶವು ಚರ್ಮವನ್ನ ಮೃದುವಾಗಿಸುತ್ತದೆ. ನೀವು ಟೊಮ್ಯಾಟೊವನ್ನ ನೇರವಾಗಿಯು ಮುಖಕ್ಕೆ ಹಚ್ಚಬಹುದು ಅಥವಾ ಪ್ಯಾಕ್ ಆಗಿ ಬಳಸಬಹುದು.

RELATED ARTICLES

Related Articles

TRENDING ARTICLES