Tuesday, November 5, 2024

ರಾಷ್ಟ್ರ ಲಾಂಛನ ನವೀಕರಣಕ್ಕೆ ಡಿಕೆಶಿ ವಿರೋಧ

ಮೈಸೂರು: ರಾಷ್ಟ್ರ ಲಾಂಛನ ನವೀಕರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ಹೊಸ ವಿವಾದ ಸೃಷ್ಟಿಸಿದೆ. ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ. ಈ ರೀತಿಯ ಲಾಂಛನವನ್ನು ಅನಾವರಣ ಮಾಡಿದ್ದು ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದೆ.

ಮೌನ ಮತ್ತು ಘರ್ಜನೆ ನಡುವಿನ‌ ವತ್ಯಾಸದ ಬಗ್ಗೆ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೌನ ನೋಟಿನಲ್ಲಿ, ಕಾಯಿನ್‌ನಲ್ಲಿ ಗಾಂಧಿ. ಸ್ವಾತಂತ್ರ್ಯ ತಂದುಕೊಟ್ಟಾಗ ಯಾವ ಲಾಂಛನ ಬಂತೋ ಅದೇ ಇರಬೇಕೆ ಹೊರತು ಬೇರೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ ಅದು ಶಾಂತಿಯ ಸಿಂಹ, ಇದು ಘರ್ಜನೆ ಸಿಂಹ.ಅದು ಆಗಬಾರದು, ಈ ದೇಶದಲ್ಲಿ ಶಾಂತಿ ಇರಬೇಕು. ಮೊದಲು ಯಾವ ಲಾಂಛನ ಇತ್ತೋ ಅದೇ ಲಾಂಛನ ಮುಂದುವರೆಯಬೇಕು ಎಂದು ಹೊಸ ರಾಷ್ಟ್ರ ಲಾಂಛನದ ನವೀಕರಣಕ್ಕೆ ವಿರೋಧ ತೋರಿದರು.

ರಾಷ್ಟ್ರ ಲಾಂಛನದಲ್ಲಿನ ಸಿಂಹಗಳು ಸೌಮ್ಯ ಭಾವನೆಗಳನ್ನು ಹೊರಹೊಮ್ಮಿಸುವುದಕ್ಕೆ ಹೆಸರಾಗಿವೆ. ಆದರೆ, ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ಯನ್ನು ಬಿಂಬಿಸಿದಂತೆ ಕಾಣಿಸುತ್ತಿವೆ ಎಂದು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಟ್ವೀಟ್ ಮಾಡಿದೆ

RELATED ARTICLES

Related Articles

TRENDING ARTICLES