Wednesday, January 22, 2025

ರಾಜ್ಯದಲ್ಲಿ ಉಚಿತ 3ನೇ ಡೋಸ್‌ ಕೋವಿಡ್‌ ಲಸಿಕೆ ಆರಂಭ

ಬೆಂಗಳೂರು : ರಾಜ್ಯಾದ್ಯಂತ ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ ಇಂದಿನಿಂದ ಆರಂಭವಾಗಲಿದೆ.

ನಗರದಲ್ಲಿ 18-59 ವರ್ಷದವರಿಗೆ ಕೊರೋನಾ ಲಸಿಕೆ ಮೂರನೇ ಡೋಸ್‌ ವಿತರಣೆ ಮಾಡಲಾಗುತ್ತಿದ್ದು, ಈ ಹಿಂದೆ ಏಪ್ರಿಲ್‌ 10ರಿಂದ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಲಸಿಕೆಯನ್ನು ನೀಡಲಾಗಿದೆ.

ಇನ್ನು, ಉಳಿದವರಿಗೆ 225 ರು. ಶುಲ್ಕ ನಿಗದಿ ಆಗಿತ್ತು. ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ನೀಡಿ ಮೂರನೇ ಡೋಸ್‌ ಪಡೆದಿದ್ದಾರೆ. ಉಳಿದಂತೆ ಒಂದು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆಯದೆ ದೂರ ಉಳಿದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES