ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಮಹಿಳೆ ವಾಪಾಸ್ ಕಾರಿಗೆ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ. ಪುನಃ ಹಣ ವಾಪಸ್ ಕೊಟ್ಟದ್ದು ಹೇಳೋದಿಲ್ಲಾ ನೀವು ಎಂದರು. ನಾವು ಮಾನವೀಯತೆ ದೃಷ್ಟಿಯಿಂದ ಕೊಟ್ಟಿದ್ದು. ಅವರ ಕಷ್ಟಕ್ಕೆಲ್ಲಾ ಆಗುತ್ತೆ ಅಂತ ಅಲ್ಲ. ಏನಾದ್ರೂ ಆದಾಗ ಸಕಾ೯ರದಿಂದ 1 ಲಕ್ಷ , 2 ಲಕ್ಷ ಪರಿಹಾರ ಕೊಡ್ತೀವಿ. ಸತ್ತದೋವರಿಗೂ ಪರಿಹಾರ ಕೊಟ್ಟಿತಿ೯ವಿ. ಆದರೆ, ಸತ್ತೋದವರು ವಾಪಸ್ ಬರ್ತಾರಾ. ಮಾನವೀಯತೆಯಿಂದ ಪರಿಹಾರ ನೀಡಿದ್ದು ಇದೆ. ಕಷ್ಟದಲ್ಲಿರೋರಿಗೆ ಅನುಕೂಲ ಆಗಲಿ ಅಂತ ಮಾಡಿದ್ದೀವಿ ಎಂದು ಹೇಳಿಕೆ ನೀಡಿದರು.
”ನಾನು ಮಾನವೀಯತೆಯಿಂದ ಹಣ ನೀಡಿದ್ದೇನೆ. ಆ ಮಹಿಳೆಯನ್ನು ಯಾರೋ ಎತ್ತಿ ಕಟ್ಟಿದ್ದಾರೆ. ಹಾಗಾದರೆ ಮೃತಪಟ್ಟವರು ಎದ್ದು ಬರುತ್ತಾರೋ?” ಎಂದು ಸಿದ್ದರಾಮಯ್ಯ ಘಟನೆಯ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಆಗಮಿಸಿದ ಸಿದ್ದರಾಮಯ್ಯ. ನಗರದ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇದೇ ವೇಳೆ ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಭೇಟಿ ಮಾಡಿದ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಸಿದ್ದರಾಮಯ್ಯ ಆಗಮಿಸಿದ ಹಿನ್ನೆಲೆ ಡಿಸಿ ಸುನೀಲಕುಮಾರ್, ಎಸ್.ಪಿ.ಜಯಪ್ರಕಾಶ್ ಉಪಸ್ಥಿತಿಯಲ್ಲಿದ್ದರು.