ಬೆಂಗಳೂರು : ವರ್ತಕರು, ಕಾರ್ಮಿಕ ಸಂಘಟನೆಗಳು ನಾಳೆ ಯಶವಂತಪುರ APMC ಯಾರ್ಡ್ ಬಂದ್ಗೆ ಕರೆ ನೀಡಿದೆ.
ಗೋಧಿ, ಅಕ್ಕಿ, ಬೇಳೆ ಕಾಳುಗಳಿಗೆ ಕೇಂದ್ರದಿಂದ 5% GST ಏರಿಕೆ ವಿಚಾರ ನಡೆಗೆ ವರ್ತಕರು, ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ನಾಳೆ ಯಶವಂತಪುರದ APMC ಯಾರ್ಡ್ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಯಾರ್ಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ನಾನ್ ಬ್ರಾಂಡೆಡ್ ವಸ್ತುಗಳ ವರ್ತಕರಿಗೆ ಸರ್ಕಾರದ ಹೊಸ ನಡೆಯಿಂದ ಬಹಳ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಬಂದ್ ಗೆ ಕರೆ ಕೊಟ್ಟ APMC ಯಾರ್ಡ್ ಕಾರ್ಮಿಕ ಸಂಘಟನೆಗಳು ರಾಜ್ಯದಾದ್ಯಂತ ತಮ್ಮ ಎಲ್ಲ ಚಟುವಟಿಕೆಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡಲಿದ್ದು, ಕೇಂದ್ರ ಸರ್ಕಾರ ಶೇ.5 ರಷ್ಟು ಜಿಎಸ್ಟಿ ತೆರಿಗೆಯನ್ನು ವಿಧಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾಡಿದ್ದಾರೆ.
ನಾಳಿನ ಪ್ರತಿಭಟನೆಗೆ ಸಾಥ್ ನೀಡಿರೋ ಸಂಘಟನೆಗಳು
1- ದಿ ಬೆಂಗಳೂರು ಹೋಲ್ ಸೇಲ್ ಫುಡ್ ಅಂಡ್ ಗ್ರೇನ್ಸ್ & ಪಲ್ಸಸ್
( ಮರ್ಚೆಂಟ್ಸ್ ಅಸೋಸಿಯೇಷನ್, ಎಪಿಎಂಸಿ ಯಶವಂತಪುರ)
2- ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಎಪಿಎಂಸಿ ಯಶವಂತಪುರ
3- ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್ ,ಬೆಂಗಳೂರು
4- ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್ . ಎನ್ಟಿ ಪೇಟೆ, ಬೆಂಗಳೂರು