Wednesday, January 22, 2025

ನರ್ತನ್ ಪ್ರಾಜೆಕ್ಟ್ ಪೋಸ್ಟ್​ಪೋನ್; ವಾಟ್ ನೆಕ್ಸ್ಟ್ ಯಶ್..?

ಕೆಜಿಎಫ್-2 ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ರಾಕಿಭಾಯ್ ಏನು ಮಾಡ್ತಾರೆ ಅಂದ್ರೆ ಚಾಪ್ಟರ್-3, ನರ್ತನ್ ಪ್ರಾಜೆಕ್ಟ್ ಅನ್ನೋ ಸುದ್ದಿ ಚಾಲ್ತಿಯಲ್ಲಿತ್ತು. ಆದ್ರೀಗ ಬಿಗ್ ಬ್ರೇಕಿಂಗ್ ನ್ಯೂಸ್​ವೊಂದು ಹೊರಬಿದ್ದಿದೆ. ಮಫ್ತಿ ಡೈರೆಕ್ಟರ್ ಜೊತೆಗಿನ ಸಿನಿಮಾ ಪೋಸ್ಟ್​ಪೋನ್ ಆಗಿದೆ. ಹಾಗಾದ್ರೆ ನ್ಯಾಷನಲ್ ಸ್ಟಾರ್ ಮುಂದಿನ ವೆಂಚರ್ ಯಾವುದು..?

ನರ್ತನ್ ಪ್ರಾಜೆಕ್ಟ್ ಪೋಸ್ಟ್​ಪೋನ್.. ವಾಟ್ ನೆಕ್ಸ್ಟ್ ಯಶ್..?

ಸದ್ಯಕ್ಕಿಲ್ಲ ಹೊಂಬಾಳೆಯ ಕೆಜಿಎಫ್ ಚಾಪ್ಟರ್-3 ಶುಭಾರಂಭ

ಶಂಕರ್ ಜೊತೆ ಕೈ ಜೋಡಿಸ್ತಾರಾ ಮಾಸ್ಟರ್​​ಪೀಸ್ ಯಶ್..?

ಅಂದು ಕಿರಾತಕ ಸೀಕ್ವೆಲ್, ರಾಣಾ ಕ್ಯಾನ್ಸಲ್.. ಇಂದು ನರ್ತನ್

ಗಾಡ್​ಫಾದರ್ ಇಲ್ಲಾ ಅಂದ್ರೂ ಇಂಡಸ್ಟ್ರಿಗೆ ಗಾಡ್ ಆದ ಒನ್ ಅಂಡ್ ಓನ್ಲಿ ಸಿನಿಸಂತ ಅಂದ್ರೆ ಅದು ನ್ಯಾಷನಲ್ ಸ್ಟಾರ್ ರಾಕಿಭಾಯ್ ಅನ್ನೋ ಆಲದಮರವಾಗಿ ಬೆಳೆದುನಿಂತ ರಾಕಿಂಗ್ ಸ್ಟಾರ್ ಯಶ್. ಹೌದು.. ಇವ್ರ ದೂರದೃಷ್ಟಿ, ಸಿನಿಮಾ ಪ್ಯಾಷನ್, ಅದಕ್ಕಾಗಿ ನಡೆಸಿದ ತಯಾರಿ, ಶ್ರಮ, ತಪಸ್ಸು ಎಲ್ಲದರ ಫಲ ಕೆಜಿಎಫ್ ಅನ್ನೋ ಮಾಸ್ಟರ್​ಪೀಸ್.

ಕನ್ನಡ ಸಿನಿಮಾವೊಂದು 1500 ಕೋಟಿ ಬ್ಯುಸಿನೆಸ್ ಮಾಡಿ, ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳನ್ನ ಸೆಡ್ಡು ಹೊಡೆಯಬಲ್ಲದು ಅನ್ನೋದಕ್ಕೆ ಎಕ್ಸಾಂಪಲ್ ಸೆಟ್ ಮಾಡಿದವ್ರು. ಟ್ರೆಂಡಿಂಗ್​ನಲ್ಲಿ ಇದ್ದುಕೊಂಡೇ ಬ್ರ್ಯಾಂಡ್ ಆದವ್ರು ರಾಕಿಭಾಯ್ ಯಶ್. ಸದ್ಯ ಇವ್ರ ರೇಂಜ್ ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್.

ಕೆಜಿಎಫ್-2 ಕ್ಲೈಮ್ಯಾಕ್ಸ್​ನಲ್ಲಿ ಚಾಪ್ಟರ್-3 ಸುಳಿವು ನೀಡಿದ್ದ ಹೊಂಬಾಳೆ ಫಿಲಂಸ್, ಯಶ್ ಮುಂದಿನ ಚಿತ್ರ ಚಾಪ್ಟರ್-3 ಆಗುತ್ತಾ ಅನ್ನೋ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದ್ರೀಗ ಆ ಕನಸು ಜೀವಂತ ಆದ್ರೂ, ಇನ್ನೂ ತಡವಾಗಿ ನನಸಾಗಲಿದೆ ಅನ್ನೋದನ್ನ ಖುದ್ದು ಹೊಂಬಾಳೆಯೇ ಬಿಟ್ಟುಕೊಟ್ಟಿತ್ತು. ವಾಟ್ ನೆಕ್ಸ್ಟ್ ಯಶ್ ಅಂದ್ರೆ, ಎಲ್ರೂ ನರ್ತನ್ ಕಡೆ ಬೆರಳು ಮಾಡಿ ತೋರಿಸಲಾರಂಭಿಸಿದ್ರು.

ಮಫ್ತಿ ಡೈರೆಕ್ಟರ್ ನರ್ತನ್ ಇಡೋ ಫ್ರೇಮ್​ಗೆ ನಮ್ಮ ಹೆಮ್ಮೆಯ ರಾಕಿಭಾಯ್ ಬಣ್ಣ ಹಚ್ಚಿ ಪೋಸ್ ಕೊಡ್ತಾರೆ ಎನ್ನಲಾಗಿತ್ತು. ಆದ್ರೀಗ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಸದ್ಯಕ್ಕೆ ಸೆಟ್ಟೇರುತ್ತಿಲ್ಲ ನರ್ತನ್ ಸಿನಿಮಾ. ಸ್ಕ್ರಿಪ್ಟ್​ನಲ್ಲಿ ಪದೇ ಪದೆ ಬದಲಾವಣೆಗಳು ಆಗ್ತಿರೋದ್ರಿಂದ ಆ ಚಿತ್ರ ಇನ್ನೂ ತಡವಾಗಲಿದೆ. ಹಾಗಾದ್ರೆ ಯಶ್ ನೈಂಟೀಥ್ ಪ್ರಾಜೆಕ್ಟ್ ಯಾವಾದಾಗಲಿದೆ ಅನ್ನೋದು ಸದ್ಯದ ಕುತೂಹಲ.

ಒಂದಷ್ಟು ಜನ ತಮಿಳಿನ ಮಾಸ್ಟರ್​ಮೈಂಡ್ ಡೈರೆಕ್ಟರ್ ಶಂಕರ್ ಹೆಸ್ರು ಹೇಳ್ತಿದ್ದಾರೆ. ಅದು ಸಾಧ್ಯವಾಗೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಸದ್ಯಕ್ಕೆ ನಿರ್ದೇಶಕ ಶಂಕರ್ ಫ್ರೀ ಇಲ್ಲ. ಮೆಗಾ ಪವರ್ ಸ್ಟಾರ್ ರಾಮ್​ಚರಣ್​ರ ಇನ್ನೂ ಹೆಸರಿಡದ ಹದಿನೈದನೇ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಿದ್ದಾರೆ. ಸಾಲದು ಅಂತ ಅರ್ಧಕ್ಕೆ ನಿಲ್ಲಿಸಿದ್ದ ಇಂಡಿಯನ್-2ನ ಮತ್ತೆ ಕಂಪ್ಲೀಟ್ ಮಾಡೋ ಮನಸ್ಸು ಮಾಡಿದ್ದಾರೆ.

ಅಲ್ಲಿಗೆ ರಾಮ್ ಚರಣ್ ಹಾಗೂ ಕಮಲ್ ಹಾಸನ್​ರ ಎರಡೂ ಬಿಗ್ ಬಜೆಟ್ ಪ್ರಾಜೆಕ್ಟ್​ಗಳನ್ನ ಕಂಪ್ಲೀಟ್ ಮಾಡೋವರೆಗೂ ಯಶ್ ಚಿತ್ರ ಶುರು ಮಾಡೋಕೆ ಸಾಧ್ಯವೇ ಇಲ್ಲ. ಇನ್ನು ಶಂಕರ್ ಜೊತೆಗಿನ ಯಶ್ ಸಿನಿಮಾ ಕನಸು ಕೂಡ ದೂರದು ಮಾತು. ಹಾಗಾದ್ರೆ ಮುಂದೇನು ಮಾಡ್ತಾರೆ ರಾಕಿಭಾಯ್..? ಯಾವ ಡೈರೆಕ್ಟರ್​ಗೆ ಡೇಟ್ಸ್ ಕೊಡ್ತಾರೆ..? ಇಷ್ಟಕ್ಕೂ ಯಶ್​ರ ಯೋಜನೆಗಳೇನು ಅನ್ನೋದೇ ನಿಗೂಢ.

ಕೆಜಿಎಫ್ ಮೊದಲ ಭಾಗದ ನಂತ್ರ ಮತ್ತೆ ಕಿರಾತಕ ಮಾಡೋಕೆ ಹೇರ್ ಸ್ಟೈಲ್ ಬದಲಾಯಿಸಿದ್ರು. ಅಷ್ಟೇ ಅಲ್ಲ, ದಿಲ್​ವಾಲಾ ಅನಿಲ್ ಜೊತೆ ಒಂದು ಶೆಡ್ಯೂಲ್ ಕೂಡ ಮಾಡಿ ಮುಗಿಸಿದ್ರು. ಅಣ್ತಮ್ಮಾಸ್ ಅಂತ ಕೈಬೀಸಿ ಕರೆದ ಸ್ಟಿಲ್ ಒಂದು ಸಖತ್ ವೈರಲ್ ಸಹ ಆಗಿತ್ತು. ಅದಾದ ಮೇಲೆ ಅದನ್ನ ಅಷ್ಟಕ್ಕೇ ಬಿಟ್ಟು ಚಾಪ್ಟರ್-2 ಕೈಗೆತ್ತಿಕೊಂಡಿದ್ರು. ಇನ್ನು ಹರ್ಷ ಜೊತೆ ಮಾಡಬೇಕಿದ್ದ ರಾಣಾ ಸಿನಿಮಾ ಕೂಡ ಕೈಬಿಟ್ರು ಯಶ್. ಆ ಟೈಟಲ್​ನ ಶ್ರೇಯಸ್ ಮಂಜುಗೆ ಕೊಟ್ಟುಬಿಟ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES