ರೋಣನ್ ಪ್ರಪಂಚ ಪ್ರೇಕ್ಷಕರಿಗಾಗಿ ಓಪನ್ ಆಗೋಕೆ ಇನ್ನು ಜಸ್ಟ್ ಎರಡು ವಾರಗಳಷ್ಟೇ ಬಾಕಿಯಿದೆ. ಕೆಜಿಎಫ್ ಆರ್ಟ್ ಡೈರೆಕ್ಟರ್ ಕಲಾಕುಂಚದಲ್ಲಿ ಅವತಾರ್ನ ಮೀರಿಸೋ ಅಂತಹ ವನಸಿರಿ ತಲೆ ಎತ್ತಿದೆ. ಇಷ್ಟಕ್ಕೂ ಎಷ್ಟು ಸೆಟ್ಗಳಿವೆ..? ರೋಣನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋ ಆರ್ಟ್ ವರ್ಕ್ ಯಾವ ರೇಂಜ್ಗೆ ಇರಲಿದೆ ಅನ್ನೋದ್ರ ಪವರ್ಫುಲ್ ಎಕ್ಸ್ಕ್ಲೂಸಿವ್ ನಿಮ್ಮ ಮುಂದೆ.
ಅವತಾರ್ ಫೀಲ್ನಲ್ಲಿ ರೋಣನ ಫ್ಯಾಂಟಮ್ ವರ್ಲ್ಡ್ ಸೃಷ್ಠಿ
ಕೆಜಿಎಫ್ ಆರ್ಟ್ ಡೈರೆಕ್ಟರ್ನಿಂದ ನೈಜ ವನಸಿರಿ ಅನಾವರಣ
3 ಫ್ಲೋರ್ಗಳಲ್ಲಿ 15 ಸೆಟ್.. 2 ಅಡಿ ಗಿಡ 4 ಅಡಿ ಬೆಳವಣಿಗೆ
ಟೆಂಪಲ್, ಪೊಲೀಸ್ ಸ್ಟೇಷನ್ ಹಾಗೂ ಗೋಡೌನ್ ಸೆಟ್ಸ್..!
ವಿಕ್ರಾಂತ್ ರೋಣ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಇಂಡಿಯನ್ ಮೂವೀಸ್ನಲ್ಲಿ ಟಾಪ್ಲಿಸ್ಟ್ನಲ್ಲಿರೋ ಸಿನಿಮಾ. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ಬಾಲಿವುಡ್ ಗ್ಲಾಮರ್ ಡಾಲ್ ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾಗೆ ಒಂದು ತೂಕವಾದ್ರೆ, ಅಜನೀಶ್ ಮ್ಯೂಸಿಕ್ ಹಾಗೂ ಅನೂಪ್ ಡೈರೆಕ್ಷನ್ ಮತ್ತೊಂದು ತೂಕ.
ಈಗಾಗ್ಲೇ ರಿಲೀಸ್ ಆಗಿರೋ ಟೀಸರ್ಗಳು, ಟ್ರೈಲರ್ ಹಾಗೂ ಸಾಂಗ್ಸ್ ಮಾಡ್ತಿರೋ ಹಂಗಾಮದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವುಗಳ ಮೇಕಿಂಗ್ ಕ್ವಾಲಿಟಿ, ಅವತಾರ್ ಸಿನಿಮಾನ ಫೀಲ್ ಕೊಡ್ತಿವೆ. ಅಷ್ಟರ ಮಟ್ಟಿಗೆ ಹೊಸ ಪ್ರಪಂಚಕ್ಕೆ ನಿಮ್ಮನ್ನ ಕರೆದೊಯ್ಯಲಿವೆ. ಆದ್ರೆ ಅವತಾರ್ ಹಂಡ್ರೆಡ್ ಪರ್ಸೆಂಟ್ ಫ್ಯಾಂಟಸಿ ಮೂವಿ. ಇದು ಫ್ಯಾಂಟಮ್ ವರ್ಲ್ಡ್ ನಲ್ಲಿರೋ ಌಕ್ಷನ್ ಅಡ್ವೆಂಚರ್ ಪರಪಂಚ.
ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಶಿವಕುಮಾರ್ ಅವ್ರ ಆರ್ಟ್ ವರ್ಕ್. ಇಡೀ ಸಿನಿಮಾ ಬೃಹತ್ ಸೆಟ್ಗಳಲ್ಲೇ ಸೆರೆಹಿಡಿಯಲ್ಪಟ್ಟಿದ್ದು, ವಿಕ್ರಾಂತ್ ರೋಣನಿಗಾಗಿ ಒಂದು ಹೊಸ ಪ್ರಪಂಚವನ್ನೇ ಸೃಷ್ಠಿ ಮಾಡಿದ್ದಾರೆ ಕೆಜಿಎಫ್ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್. ಹೌದು.. ಹೈದ್ರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸುಮಾರು ಮೂರು ಫ್ಲೋರ್ಗಳಲ್ಲಿ ಹದಿನೈದು ಸೆಟ್ಗಳು ತಯಾರಾಗಿದ್ವು.
ಮೂರ್ನಾಲ್ಕು ಸಣ್ಣ ಸೆಟ್ಗಳು ಅನ್ನೋದು ಬಿಟ್ರೆ, ಹತ್ತರಿಂದ ಹನ್ನೆರಡು ಸೆಟ್ಗಳು ನಿರೀಕ್ಷೆಗೂ ಮೀರಿದಷ್ಟು ಬೃಹತ್ ಆಗಿ ನಿರ್ಮಿತವಾಗಿದ್ದವು. ದಟ್ಟವಾದ ಅರಣ್ಯ, ಪೊಲೀಸ್ ಸ್ಟೇಷನ್, ದೊಡ್ಡದೊಂದು ಗೋಡೌನ್, ಟೆಂಪಲ್ ಇವೇ ವಿಕ್ರಾಂತ್ ರೋಣ ಮೇಜರ್ ಸೆಟ್ಗಳು. ಅದ್ರಲ್ಲೂ ಕೊರೋನಾ ಲಾಕ್ಡೌನ್ ವೇಳೆ ಸಿನಿಮಾದ ಸೆಟ್ ವರ್ಕ್ ಹಾಗೂ ಶೂಟಿಂಗ್ ಸಖತ್ ಚಾಲೆಂಜಿಂಗ್ ಆಗಿತ್ತಂತೆ.
ಚೀನಾದಿಂದ ಆರ್ಟ್ ವಿಶ್ಯುವಲ್ ಪ್ಲಾಂಟ್ಸ್ನ ತರಿಸೋ ಪ್ಲಾನ್ನಲ್ಲಿದ್ದ ಶಿವಕುಮಾರ್ಗೆ ಕೊರೋನಾದಿಂದ ಎಲ್ಲವೂ ಉಲ್ಟಾ ಪಲ್ಟಾ ಆಯ್ತು. ಮೂರೂವರೆ ತಿಂಗಳ ಆ ಬೃಹತ್ ಸೆಟ್ಗಳ ನಿರ್ಮಾಣ ಕಾರ್ಯದಲ್ಲಿ ಕೊರೋನಾದಿಂದ ರಿಯಲ್ ಪ್ಲಾಂಟ್ಸ್ನ ಬಳಸುವಂತಾಯ್ತು. ಆದ್ರೆ ಒಂದು ತಿಂಗಳ ಗ್ಯಾಪ್ನಲ್ಲಿ ಎರಡು ಅಡಿ ಇದ್ದ ಗಿಡಗಳು ನಾಲ್ಕು ಅಡಿ ಅಷ್ಟು ಬೆಳೆದು ನಿಂತವು. ಆಗ ಮತ್ತೆ ಕ್ಯಾಮೆರಾಗೆ ಬೇಕಾಗುವಷ್ಟು ಸ್ಪೇಸ್ನ ಕ್ರಿಯೇಟ್ ಮಾಡೋಕೆ ಶಿವಕುಮಾರ್ ಅಂಡ್ ಟೀಂ ಹರಸಾಹಸ ಮಾಡಿದ್ದಾರೆ.
ನಿರ್ಮಾಪಕ ಜಾಕ್ ಮಂಜು ಈ ಸಿನಿಮಾನ ಕೋವಿಡ್ ಟೈಮಲ್ಲಿ ನಿರ್ಮಾಣ ಮಾಡೋಕೆ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಗ್ರೇಟ್. ಬಯೋ ಬಬಲ್ ಕ್ರಿಯೇಟ್ ಮಾಡಿ, ಕ್ರಿಕೆಟರ್ಸ್ನ ಕಾಪಾಡಿಕೊಳ್ಳುವಂತೆ ಇಡೀ ಫಿಲ್ಮ್ ಮೇಕಿಂಗ್ ತಂಡವನ್ನು ಕಾಪಾಡಿಕೊಂಡ್ರು. ಇದು ನಿಜಕ್ಕೂ ಅವ್ರಿಗಿರೋ ಸಿನಿಮಾ ಬದ್ಧತೆ ಹಾಗೂ ಪ್ಯಾಷನ್ನ ಕೈಗನ್ನಡಿಯಾಗಿದೆ. ಒಟ್ಟಾರೆ ಸಿನಿಮಾ ಇದೇ ಜುಲೈ 28ಕ್ಕೆ ವರ್ಲ್ಡ್ ವೈಡ್ ಆರಕ್ಕೂ ಅಧಿಕ ಭಾಷೆಗಳಲ್ಲಿ ತೆರೆಗಪ್ಪಳಿಸುತ್ತಿದ್ದು, ಸಖತ್ ಕಿಕ್ ಕೊಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ