Monday, May 12, 2025

ತುಂಗಭದ್ರಾ ಜಲಾಶಯ ಭರ್ತಿ

ಕೊಪ್ಪಳ : ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಜಲಾಶಯದಿಂದ 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರೋ 105 ಟಿಎಂಸಿ ಸಾಮಾರ್ಥ್ಯದ ಜಲಾಶಯ. ತುಂಗಭದ್ರಾ ಭೋರ್ಗರೆತಕ್ಕೆ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆಯಾಗಿದೆ. ಹಾಗೆನೇ ಬಳ್ಳಾರಿ ಜಿಲ್ಲೆಯ ಸಂಪರ್ಕ ಕಲ್ಪಿಸುವ ಗಂಗಾವತಿ- ಕಂಪ್ಲಿ ಸೇತುವೆ ಮುಳುಗಡೆಯಾಗಿದೆ.

ಸೇತುವೆ ಮುಳುಗಡೆಯಿಂದ ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿದ್ದು, ಸೇತುವೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಲವಾರು ಸ್ಮಾರಕ, ಸೇತುವೆ ಮುಳುಗಡೆಯಾಗಿದ್ದು, ಇನ್ನಷ್ಟು ಹೊರ ಹರಿವು ಹೆಚ್ಚಾದ್ರೆ ಜಮೀನುಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ.

RELATED ARTICLES

Related Articles

TRENDING ARTICLES