Wednesday, January 1, 2025

ಸಿದ್ದರಾಮೋತ್ಸವ ಸಮಾರಂಭಕ್ಕೆ ಖರ್ಚು ಮಾಡುತ್ತಿರುವ ಹಣ ಎಷ್ಟು ಗೊತ್ತಾ..?

ಬೆಂಗಳೂರು : ನನಗೆ ಹುಟ್ಟಿದ ದಿನಾಂಕನೇ ಗೊತ್ತಿಲ್ಲ. ನಾನು ಹುಟ್ಟು ಹಬ್ಬವೇ ಆಚರಿಸಲ್ಲ ಎನ್ನುತ್ತಲ್ಲೇ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಸಿದ್ದರಾಮಯ್ಯ ಬರ್ತಡೇ ಸೆಲೆಬ್ರೇಷನ್ ಪ್ರೋಗ್ರಾಂಗೆ ಬರೋಬ್ಬರಿ 50 ಕೋಟಿಗೂ ಹೆಚ್ಚು ಖರ್ಚು ಆಗುತ್ತಿದೆ. ಬರ್ತಡೇ ಖರ್ಚು- ವೆಚ್ಚಗಳ ಬಗ್ಗೆ ಪಟ್ಟಿ ಮಾಡಿರುವ ಅಮೃತ ಮಹೋತ್ಸವ ಸಮಿತಿ ಯಾರು ಯಾರು ಎಷ್ಟೆಷ್ಟು ಇನ್ವೆಸ್ಟ್ ಮಾಡಬೇಕೆಂದು ಸಮಿತಿ ಪಟ್ಟಿ ರೆಡಿ ಮಾಡಿದ್ದಾರೆ.

ಸಿದ್ದರಾಮೋತ್ಸವ ಸಮಾರಂಭಕ್ಕೆ ಸಿದ್ದು ಅತ್ಯಾಪ್ತರು ಹಣ ಹೂಡಿಕೆ ಮಾಡಲಿದ್ದಾರೆ. ಸಿದ್ದು ಅತ್ಯಾಪ್ತರು ಸಮಾರಂಭಕ್ಕೆ ಕೆ ಜೆ ಜಾರ್ಜ್, ಆರ್.ವಿ.ದೇಶಪಾಂಡೆ, ಕೆ ಎನ್ ರಾಜಣ್ಣ,ಜಮೀರ್ ಅಹ್ಮದ್, ಬೈರತಿ ಸುರೇಶ್,ಎಂ ಬಿ ಪಾಟೀಲ್,ಸತೀಶ್ ಜಾರಕಿಹೊಳಿ,ಶ್ಯಾಮನೂರು ಶಿವಶಂಕರಪ್ಪ,ಹೆಚ್ ಸಿ ಮಹದೇವಪ್ಪ ಪ್ರಮುಖರು ಇನ್ವೆಸ್ ಮಾಡಲಿದ್ದಾರೆ.

ಇನ್ನು, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಪ್ರಮುಖ ಖಾತೆ ನಿರ್ವಹಿಸಿಕೊಂಡಿದ್ದ ಮಾಜಿ ಸಚಿವರೇ ಕೋಟಿ ಕೋಟಿ ಇನ್ವೆಸ್ಟ್ ಮಾಡಲಿದ್ದು, ಕೇವಲ ರಾಜಕಾರಣಿ ಅಲ್ದೇ ಖ್ಯಾತ ಉದ್ಯಮಿದಾರರು ಕೂಡ ಹಣ ಹೂಡಿಕೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಕೈ ಟಿಕೆಟ್ ಆಕಾಂಕ್ಷಿಗಳಿಂದ ಕೂಡ ಹಣ ಹೂಡಿಕೆ ಮಾಡಲಿದ್ದು, ಮುಂದೆ ಸಿದ್ದರಾಮಯ್ಯ ಸಿಎಂ ಆದ್ರೆ ಸಚಿವರಾಗಬೇಕೆಂದು ಮಹಾದಶೆ ಹೊಂದಿರುವ ನಾಯಕರಿಂದಲೂ ಹಣ ಹೂಡಿಕೆ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES