Saturday, April 20, 2024

ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್​ನಲ್ಲಿ ರಿಷಿ ಸುನಕ್ ಮುನ್ನಡೆ

ಬ್ರಿಟನ್ : ಪ್ರಧಾನಿ ಅಭ್ಯರ್ಥಿ ರೇಸ್​ನಲ್ಲಿ ಭಾರತೀಯ ಮೂಲದ ಮಾಜಿ ಚಾನ್ಸಿಲರ್ ರಿಷಿ ಸುನಕ್ ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕನ್ಸರ್ವೇಟೀವ್ ಪಕ್ಷದ ಸಂಸದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಮತಗಳು ಅಂದರೆ 88 ಮತಗಳು ರಿಷಿ ಸುನಕ್ ಪರವಾಗಿ ಚಲಾವಣೆಯಾಗಿದೆ. ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳ ಸಂಖ್ಯೆ 8 ರಿಂದ 6 ಕ್ಕೆ ಇಳಿಕೆಯಾಗಿದೆ. ಹೊಸದಾಗಿ ನೇಮಕಗೊಂಡಿರುವ ಚಾನ್ಸಿಲರ್ ನದೀಮ್ ಜಹಾವಿ ಹಾಗೂ ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಕನಿಷ್ಠ ಅಗತ್ಯವಿರುವ 30 ಸಂಸದರ ಬೆಂಬಲವನ್ನು ಪಡೆಯುವಲ್ಲಿ ವಿಫಲರಾಗಿದ್ದು ಪ್ರಧಾನಿ ರೇಸ್​ನಿಂದ ಹೊರಬಂದಿದ್ದಾರೆ.

ಪ್ರಧಾನಿ ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಅವರು ನಿರಂತರತೆ ಕಾಯ್ದುಕೊಂಡಿದ್ದು, ಮೊದಲ ಹಂತದ ಮತದಾನದ ಫಲಿತಾಂಶದ ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಸಂತಸ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಪ್ರಧಾನಿ ಹುದ್ದೆಯಲ್ಲಿ ಅಂತಿಮವಾಗಿ ಇರಲಿರುವ ಮೂವರು ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಕೂಡಾ ಒಬ್ಬರಾಗಿರಲಿದ್ದಾರೆ.

RELATED ARTICLES

Related Articles

TRENDING ARTICLES