Sunday, January 19, 2025

ಡಾಲಿ ಜೊತೆ ಯಶಾ ಶಿವಕುಮಾರ್ ಮಾನ್ಸೂನ್ ರಾಗಕ್ಕೆ ಹೆಜ್ಜೆ

ಕರಾವಳಿಯ ಕಥೆಯನ್ನು ಮಾನ್ಸೂನ್​ ಟೈಮ್​​ನಲ್ಲಿ ತೆರೆಯ ಮೇಲೆ ನೋಡೋದೆ ಚೆಂದ. ಇದೀಗ ಮಂಗಳೂರು ಸೀಮೆಯ ಮಾನ್ಸೂನ್​ ರಾಗ ಸಿನಿಮಾ ತಯಾರಾಗ್ತಿದೆ. ಟಗರು ಡಾಲಿ ಸ್ಪೆಷಲ್​​ ರೆಟ್ರೋ ಗೆಟಪ್​​ನಲ್ಲಿ ಕಾಣಿಸ್ತಿದ್ದಾರೆ. ಇನ್ನೂ ಬೈರಾಗಿಯಲ್ಲಿ ಮಿಂಚಿದ್ದ ಯಶಾ ಮ್ಯೂಸಿಕ್​ ಡ್ಯಾನ್ಸ್​ ಮೂಲಕ ಮಳೆಯಲ್ಲಿ ಮಿಂದು ತೊಪ್ಪೆಯಾಗಿದ್ದಾರೆ. ಯೆಸ್​​.. ಈ ಹಾಡು, ಸಿನಿಮಾ ಬಗ್ಗೆ ಗೊತ್ತಿರದ ಇಂಟ್ರೆಸ್ಟಿಂಗ್​​​ ಮಾಹಿತಿ ತಿಳಿಸಿಕೊಡ್ತೀವಿ.

ಡಾಲಿ ಜೊತೆ ಯಶಾ ಶಿವಕುಮಾರ್ ಮಾನ್ಸೂನ್ ರಾಗಕ್ಕೆ ಹೆಜ್ಜೆ

ವೈರಲ್​ ಆಯ್ತು ಮಳೆಕುಣಿತ.. ಮ್ಯೂಸಿಕ್​ ಡ್ಯಾನ್ಸ್​​​​ ತಕಧಿಮಿತ..!

ರಚಿತಾ ಚಾಲೆಂಜಿಂಗ್​ ರೋಲ್​​.. ಯಶಾ ಆ್ಯಟಿಟ್ಯೂಡ್​ ರೂಲ್​

ಚಂಡೆ, ವಯೊಲಿನ್​ ಜುಗಲ್ಬಂದಿ.. ಸೀಳಿನ್ ಮ್ಯೂಸಿಕ್​ ಚಿಂದಿ..!

ಟಗರು ಸಿನಿಮಾ ನಂತ್ರ ಡಾಲಿ ಧನಂಜಯ ಅವರ ನಸೀಬು ಫುಲ್​ ಚೇಂಜ್​ ಆಗಿದೆ. ರತ್ನನ್​ ಪ್ರಪಂಚ ಸಿನಿಮಾ ನಂತ್ರ ಬೈರಾಗಿಗೆ ಬಹುಪರಾಕ್​​ ಎಂದಿದ್ದು,  ರಾಜ್ಯಾದ್ಯಂತ ಶಿಳ್ಳೆ ಚಪ್ಪಾಳೆಯ ಸುರಿಮಳೆಯಾಗಿದೆ. ಅಂಗೈಯಲ್ಲಿ ಬ್ಯಾಕ್​​ ಟು ಬ್ಯಾಕ್​ ಹಿಟ್​​ ಸಿನಿಮಾಗಳ ಸರದಾರನಾಗಿ ಮಿಂಚ್ತಾ ಇರೋ ಡಾಲಿಯ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಮಾನ್ಸೂನ್​ ರಾಗ.

ಕರಾವಳಿ ಸೀಮೆಯ 60ರ ದಶಕದ ಕಥೆಯನ್ನು ರೆಟ್ರೋ ಸ್ಟೈಲ್​ನಲ್ಲಿ ವಿಭಿನ್ನವಾಗಿ ತೋರಿಸಲು ಹೊರಟಿದೆ ಚಿತ್ರತಂಡ. ಹಿಂದೆಂದೂ ನೋಡಿರದ ರೀತಿಯಲ್ಲಿ ಮಾನ್ಸೂನ್​ ರಾಗ ಸಿನಿಮಾ ಮಾನ್ಸೂನ್​ ವೇಳೆಗೆ ಹೊಸ ಫೀಲ್​ ಕೊಡೋಕೆ ಬರ್ತಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್​​ ಹಾಗೂ ಯಶಾ ಶಿವಕುಮಾರ್​ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಸ್ಯಾರಿಯ ಹಾಟ್​​ ಲುಕ್​​ನಲ್ಲಿ ಪಡ್ಡೆ ಹೈಕಳ ದಿಲ್​​ ದೋಚಿದ್ದ ಮುದ್ದು ಗೊಂಬೆ ರಚಿತಾ ಒಂದ್ಕಡೆಯಾದ್ರೆ, ಬೈರಾಗಿ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿರೋ ಯಶಾ ಶಿವಕುಮಾರ್​ ಮ್ಯೂಸಿಕ್​ ಡ್ಯಾನ್ಸ್​ ಮೂಲಕ ಕಿಚ್ಚು ಹಚ್ಚಿದ್ದಾರೆ. ಚಂಡೆವಾದ್ಯ, ಮಳೆಕುಣಿತಕ್ಕೆ ಎಲ್ಲರ ಹೃದಯ ತೊಪ್ಪೆಯಾಗಿದೆ.

ಮಾನ್ಸೂನ್ ರಾಗ ಪಿರಿಯಾಡಿಕಲ್​​ ಸಿನಿಮಾ ಆಗಿರೋದ್ರಿಂದ ರೆಟ್ರೋ ಸ್ಟೈಲ್​​ನಲ್ಲಿ ಶೂಟಿಂಗ್​ ಮಾಡಲಾಗಿದೆ. ನಟಿ ಯಶಾ ಇಂಟ್ರಡಕ್ಷನ್​​​ಗೆ ಫ್ರೆಶ್​ ಫೀಲ್​ ಇರೋ ಮ್ಯುಸಿಕ್​ ಕಂಪೋಸ್​ ಮಾಡಿದ್ದಾರೆ ಮ್ಯುಸಿಕ್​ ಡೈರೆಕ್ಟರ್​ ಅನೂಪ್​ ಸೀಳಿನ್​​​. ಈ ಹಾಡಿನ ಟ್ಯೂನ್​ಗೆ ಫಿದಾ ಆಗಿರೋ ಫ್ಯಾನ್ಸ್​ ರಿಪೀಟ್​ ಮೋಡ್​ನಲ್ಲಿ ಆಲಿಸ್ತಿದ್ದಾರೆ. ಕರಾವಳಿಯಲ್ಲಿ ಫೇಮಸ್​ ಆಗಿರೋ ಚಂಡೆಯ ಸದ್ದು ಸಖತ್​ ಮಜಾ ಕೊಡ್ತಿದೆ. ಜತೆಗೆ ವಯಲಿನ್​ ಮ್ಯೂಸಿಕ್​ ಸಾಥ್​ ಕೊಟ್ಟಿದ್ದು ಕೇಳಲು ಇಂಪಾಗಿದೆ.

ಈ ಹಾಡಿನಲ್ಲಿ ಯಶಾ ಅವರ ಮಳೆಕುಣಿತ ಸಖತ್​ ವೈರಲ್ಲಾಗಿದೆ. ಮಾನ್ಸೂನ್​ ಟೈಮ್​​ನಲ್ಲಿ ಎಲ್ಲರ ಮೊಬೈಲ್​​ ಸ್ಟೇಟಸ್​​ಗಳಲ್ಲಿ ಯಶಾ ಡ್ಯಾನ್ಸ್​ ಸೌಂಡ್ ಮಾಡ್ತಿದೆ. ಒಂದೆರೆಡು ತುಳು ಸಾಲುಗಳು ಕೂಡ ಬಂದು ಹೋಗುತ್ತವೆ. ಮಾನ್ಸೂನ್​ ರಾಗ ಒಂದು ಮ್ಯೂಸಿಕಲ್​ ಸಿನಿಮಾ. ಇದು ಸಣ್ಣ ಝಲಕ್​ ಅಷ್ಟೆ ಅಂತಿದೆ ಚಿತ್ರತಂಡ. ಈ ಹಾಡಿನಲ್ಲಿ ಕುಣಿದಿರೋ ಯಶಾ ಆಟಿಟ್ಯೂಡ್​ ಹುಡುಗಿ ಪಾತ್ರ. ಹುಡುಗರನ್ನೇ ರೇಗಿಸೋ ರಗಡ್​ ರೋಲ್​ನಲ್ಲಿ ಮಿಂಚಿದ್ದಾರಂತೆ.

ಗ್ಲಾಮರಸ್​ ರೋಲ್​ಗಳಲ್ಲಿ ಸದ್ದು ಮಾಡ್ತಿರೋ ರಚಿತಾ ಚಾಲೆಂಜಿಂಗ್​ ರೋಲ್​ ಲೀಡ್​ ಮಾಡ್ತಿದ್ದಾರೆ. ಸಖತ್​ ಟಪ್​ ರೋಲ್​ ಇದಾಗಿದ್ದು ರಚಿತಾ ಒಪ್ಪುತ್ತಾರೋ ಇಲ್ವೋ ಅನ್ನೋ ಗೊಂದಲದಲ್ಲಿ ಇದ್ದ ಚಿತ್ರತಂಡಕ್ಕೆ ಓಕೆ ಮಾಡಿ ಆ್ಯಕ್ಟ್​ ಮಾಡಿದ್ದಾರೆ ಬುಲ್​ಬುಲ್​​ ಬೆಡಗಿ. ರಮೇಶ್‌ ಅರವಿಂದ್‌ ನಟನೆಯ ಪುಷ್ಪಕ ವಿಮಾನ ಚಿತ್ರ ಮಾಡಿದ್ದ ನಿರ್ದೇಶಕ ಎಸ್‌. ರವೀಂದ್ರನಾಥ್‌ ಮತ್ತು ನಿರ್ಮಾಪಕ ವಿಖ್ಯಾತ್‌ ಎರಡನೇ ಬಾರಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ವಿಂಟೇಜ್​ ಸಿನಿಮಾವಾಗಿರೋದ್ರಿಂದ ಎಲ್ಲಿಯೂ ಕಾಂಪ್ರಮೈಸ್ ಆಗದೆ ನಿರ್ಮಾಪಕ ವಿಖ್ಯಾತ ಬಂಡವಾಳ ಹೂಡಿದ್ದಾರೆ.

ಪೋರ್ಚಗೀಸರ ಕಾಲದ ಫೋರ್ಟ್​​ ಜಾಗಗಳಲ್ಲಿ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಗಿದೆಯಂತೆ. ಆಗಸ್ಟ್​ 12ಕ್ಕೆ ಮಾನ್ಸೂನ್​ ರಾಗ ಸಿನಿಮಾ ತೆರೆಗೆ ಬರಲಿದೆ. ಮಾಸ್​ ಮತ್ತು ಕ್ಲಾಸಿಕ್​ ಮಸಾಲೆಭರಿತ ಸಿನಿಮಾಗೆ ಪ್ರೇಕ್ಷಕರು ಓಕೆ ಅಂತಾರ..? ಜೊತೆಗೆ  ಬೆಂಗಳೂರಲ್ಲಿ ಕಟ್ಟೆಯ ಗುಡುಗು ಸಿಡಿಲು ಹೇಗಿರಲಿದೆ ಅಂತಾ ಕಾದು ನೊಡ್ಬೇಕು.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES