Monday, December 23, 2024

ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ: ಎಚ್.ಸಿ.ಮಹದೇವಪ್ಪ

ಬೆಂಗಳೂರು: ನಾವು ಹೊಗಳು ಭಟ್ಟರೂ ಅಲ್ಲ, ವ್ಯಕ್ತಿ ಪೂಜೆನೂ ಮಾಡುತ್ತಿಲ್ಲ. ಪಕ್ಷದ ಚಿಹ್ನೆ ಬಳಸಿ‌ ಜನ್ಮದಿನ ಆಚರಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಅಮೃತ‌ ಮಹೋತ್ಸವ ಸಮಿತಿ ಸದಸ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ, ತಪ್ಪು ಸಂದೇಶ ಕೊಡುವ ಉದ್ದೇಶ ಇಲ್ಲ. ಸಿದ್ಧರಾಮೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯರ ವೈಭವೀಕರಣಕ್ಕೆ ಅಲ್ಲ ಎಂದರು.

ವ್ಯಕ್ತಿ ಪೂಜೆಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಸಿದ್ದರಾಮಯ್ಯ ಹೋರಾಟ ದಾಖಲು ಮಾಡುವ ಕೆಲಸ. ಹೋರಾಟ ಯಾವಾಗಲೂ ಚರಿತ್ರೆ ನಿರ್ಮಾಣ ಮಾಡಲಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸ ಗಮನಿಸುತ್ತೇವೆ. ಸಿದ್ದರಾಮಯ್ಯ ಮಂಡಿಸಿದ 13 ಬಜೆಟ್ ಗಳ ಬಗ್ಗೆ ಅವಲೋಕನ ಮಾಡುವುದು. 135 ಭರವಸೆಗಳನ್ನು ಈಡೇರಿಸಿದ ಸಿದ್ದರಾಮಯ್ಯ ಅವರ ಕೆಲಸ ನೋಡಬೇಕಾಗಿದೆ ಎಂದರು.

ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. ಸಾರ್ಥಕ ಸಾರ್ವಜನಿಕ ಬದುಕು ಪೂರೈಸಿರುವ ಸಿದ್ದರಾಮಯ್ಯ ಅವರ ಬಗ್ಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಈ ಸಮಾವೇಶ ಮಾಡುತ್ತಿದ್ದೇವೆ ಎಂದರು.

RELATED ARTICLES

Related Articles

TRENDING ARTICLES