ಬೆಂಗಳೂರು: ದುಡ್ಡೆ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಅಂತ ಪಾಠ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ.
ಇಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಒಂದು ಕಿ.ಮೀ ರಸ್ತೆ ಮಾಡಲು ಮಂಜೂರು ಮಾಡಬಹುದು. ಆದ್ರೆ ಅದನ್ನ ಬಿಸಿಲಿನಲ್ಲಿ ನಿಂತು ಅಚ್ಚು ಕಟ್ಟಾಗಿ ಮಾಡಬೇಕಾದ್ರೆ ಶ್ರಮ ಬೇಕು. ಪ್ರೊಡಕ್ಷನ್ ಮತ್ತು ಪ್ರೊಡಕ್ಟ್ಸ್ ಎರಡೂ ಸರಿಯಾಗಿ ಖಾಲಿಯಾಗಬೇಕು, ಅದನ್ನ ಮಾಡಲು ಸ್ಕಿಲ್ಸ್ (SKILL ) ಬೇಕು. ಸ್ಕಿಲ್ಸ್ ಸೈನ್ಸ್ ವಿಷಯ ಈಗ ಅಧ್ಯಯನ ಮಾಡಲು ಅವಕಾಶ ಇದೆ. ಸ್ಕಿಲ್ ಎಲ್ಲರಿಗೂ ಸಿಗುವಂತೆ ಆಗಬೇಕು. ಸ್ಕಿಲ್ ಡೆವಲಪ್ಮೆಂಟ್ ಮತ್ತು ಜೀವನೋಪಾಯ ಎರಡು ಸೇರಿಸಿ ಯೋಜನೆ ರೂಪಿಸಲಾಗಿದೆ.ದೇಶದಲ್ಲಿ ಹೈ ಟೆಕ್ನಾಲಜಿ ಬಳಸಿ ಕೆಲಸ ಮಾಡುವ ಯೋಜನೆ ಕರ್ನಾಟಕದಲ್ಲಿ ಇದೆ ಎಂದರು.
ಇನ್ನು ಕರ್ನಾಟಕದಲ್ಲಿ IT ಟೆಕ್ನಾಲಜಿ ಇದೆ. ಆರು ಇಂಜಿನಿಯರಿಂಗ್ ಕಾಲೇಜುಗಳನ್ನ IIT ಮಾದರಿಯಲ್ಲಿ ಅಪ್ಗ್ರೇಡ್ ಮಾಡಲಾಗ್ತಿದೆ. ದೇಶದಲ್ಲಿ ಕೆಲವೇ ಕೆಲವು IIT ಇದೆ. ನಾವು ಇಲ್ಲಿರೋ ಇಂಜಿನಿಯರಿಂಗ್ ಕಾಲೇಜನ್ನೇ IIT ಮಾದರಿಯಲ್ಲಿ ಮಾಡಬೇಕಿದೆ. ಈ ವರ್ಷವೇ ಕಾಲೇಜು ಪ್ರಾರಂಭಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ತನ್ನ ಆಸ್ಟ್ರೇಲಿಯಾ ಸ್ನೇಹಿತನ ಜೀವನದ ಘಟನೆ ಬಗ್ಗೆ ವಿವರಿಸಿದ ಅವರು, ಒಂದು ಪೇಪರ್ ತೆಗೆದುಕೊಂಡು ನೇರ ಗೆರೆ ಎಳೆಯೋದು ಎಲ್ಲರೂ ಮಾಡ್ತಾರೆ. ಅದನ್ನ ವಿಭಿನ್ನವಾಗಿ ಮಾಡೋದು ಕಲೆ. ಯಾವ ರೀತಿ ಜ್ಞಾನ ಕದಿಯಲು ಸಾಧ್ಯವಿಲ್ಲ, ಕೌಶಲ್ಯ ಕೂಡ
ಪೇಟೆಂಟ್ ಪಡೆಯಲು ಸಾಧ್ಯವಿಲ್ಲ. ನನ್ನ ಸ್ನೇಹಿತನೊಬ್ಬ ಷೇರಿನಲ್ಲಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡ. ಬಳಿಕ ಕಾರ್ಪೆಂಟರ್ ಆಗಿ ಬಳಿಕ ಆತನ ಬುದ್ದಿ ಕೌಶಲ್ಯವನ್ನು ಬಳಸಿ, ಈಗ ಮತ್ತೆ ಶ್ರೀಮಂತ ಆಗಿದ್ದಾನೆ ಎಂದರು.