ಬಾಗಲಕೋಟೆ : ಜನ ಹೊಯ್ಕೊಂಡು ಬಡದಾಡುತ್ತಿದ್ದಾರೆ. ಜನರ ಸಂಕಷ್ಟದ ಜೀವನ ಹೋಯ್ದಡುತ್ತಿದೆ. ಈಗ ಸಿದ್ದರಾಮೋತ್ಸವ ಬೇಕಿತ್ತಾ..? ಎಂದು ಬಾಗಲಕೋಟೆಯಲ್ಲಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಜನ ಹೊಯ್ಕೊಂಡು ಬಡದಾಡುತ್ತಿದ್ದಾರೆ, ಜನರ ಬದುಕು ನಡೆಸಲು ಸಂಕಷ್ದಲ್ಲಿದ್ದಾರೆ, ಈಗ ಉತ್ಸವ ಬೇಕಾ..? ಸಿದ್ದರಾಮೋತ್ಸವ ಬರುತ್ತೋ, ಶಿವಕುಮಾರೋತ್ಸವ ಬರುತ್ತೋ ನಾಳೆ ಪರಮೇಶ್ವರ ಉತ್ಸವ ಬರುತ್ತೋ ಬರಲಿ. ನೋಡೋಣ ಉತ್ಸವದಲ್ಲಿ ನಾಲ್ಕು ಜನ ಬಂದು ಅಲ್ಲಿ ಊಟ ಮಾಡಿ ಹೋಗ್ತಾರೆ ಅಂದ್ರೆ ಮಾಡಲಿ ಎಂದು ಹೇಳಿದರು.
ನಮ್ಮಲ್ಲಿ ಏನಿದ್ರೂ ಬಿಜೆಪಿ ಉತ್ಸವ, ಕಮಲದ ಉತ್ಸವ ಇರುತ್ತೆ. ನಮ್ಮಲ್ಲಿ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ರಾಜ್ಯದಲ್ಲಿ ತುಂಬ ಪ್ರವಾಹ ಇದೆ, ಜನ ಹೊಯ್ಕೊಂಡು ಬಡದಾಡುತ್ತಿದ್ದಾರೆ. ಜನರ ಸಂಕಷ್ಟದ ಜೀವನ ಹೋಯ್ದಡುತ್ತಿದೆ..ಈಗ ಸಿದ್ದರಾಮೋತ್ಸವ ಬೇಕಿತ್ತಾ..? ಈ ಸಮಯದಲ್ಲಿ ಸಿದ್ದರಾಮೋತ್ಸವ, ಉತ್ಸವ ಬೇಕಾ..? ಶಿವಕುಮಾರ್ ಉತ್ಸವಕ್ಕೂ ಪತ್ರ ಬರೆದಿದ್ದಾರೆ. ಈ ಮಧ್ಯೆ ಕೇಂದ್ರದ ಕಾಂಗ್ರೆಸ್ ವರಿಷ್ಠರಿಂದಲೂ ಸೂಚನೆ ಬರುತ್ತೆ. ಡಿಕೆಶಿ ಅವರೇ ಇದೊಂದು ಸಕಾ೯ರಿ ಕಾಯ೯ಕ್ರಮ ಅಂತ ಅನೌನ್ಸ್ ಮಾಡಬೇಕಂತ ಸೂಚನೆ ಬರುತ್ತೆ ಎಂದರು.
ಇನ್ನು, ರಾಹುಲ್ ಗಾಂಧಿ ಬರ್ತಾರೆ ಅಂತ ಹೇಳುಬೇಕು ಅಂತ ಸೂಚನೆ ಬರುತ್ತೆ. ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ನೀವೆ ನೋಡಿ. ಸಿದ್ದರಾಮಯ್ಯನಂತಹ ಹಿರಿಯರೇ ಹೀಗೆ ಮಾಡ್ತಾರೆ ಅಂದ್ರೆ ಏನು ಹೇಳಬೇಕು. ಚುನಾವಣೆ ಇನ್ನೂ ಒಂದು ವರ್ಷ ಇದೆ. ಯಾವ ಪುರುಷಾರ್ಥಕ್ಕೂ ಇದನ್ನು ಮಾಡುತ್ತಿಲ್ಲ, ಇದರಲ್ಲಿ ನಾನಾ ನೀನಾ ಎಂಬ ಎರಡಷ್ಟೇ ಇರೋದು. ಇದು ಬೇರೇನು ಇಲ್ಲ. ಸಿಎಂ ಎರಡೇ ದಿನದಲ್ಲಿ 4 ಜಿಲ್ಲೆ ಓಡಾಡಿದ್ರು. ಪ್ರವಾಹ ಸಂದರ್ಭದಲ್ಲಿ ಪರಿಹಾರ ನೀಡಲಾಗಿದೆ. ಕಷ್ಟ ಕಾಲದಲ್ಲಿ ಜನರ ಬಳಿ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.