ರಾಮಾರ್ಜುನ ಅವತಾರದಲ್ಲಿ ಜಗಮಗಿಸಿದ್ದ ಅನೀಶ್ ಹಳ್ಳಿ ಹುಡುಗನಾಗಿ ಬೆಂಕಿ ಅವತಾರದಲ್ಲಿ ಸಿಡಿಯೋಕೆ ಸಜ್ಜಾಗಿದ್ದಾರೆ. ಅಣ್ಣ ತಂಗಿ ಎಮೋಷನ್ ಜೊತೆಗೆ ಮುದ್ದಾದ ಪ್ರೇಮಕಥೆಯ ಮಿಕ್ಸ್ ಮಸಾಲ ಸಿನಿಮಾ ಇದು. ಚಿತ್ರದ ಟ್ರೈಲರ್, ಪೋಸ್ಟರ್ಗಳು ಗಟ್ಟಿ ಕಥೆಯ ಸಾರಾಂಶವನ್ನು ಒತ್ತಿ ಒತ್ತಿ ಹೇಳುತ್ತಿವೆ. ಯೆಸ್.. ಬೆಂಕಿ ಟೀಮ್ ಕಡೆಯಿಂದ ಮತ್ತೊಂದು ಬೆಚ್ಚಿ ಬೆವರಿಳಿಸೋ ವೀಡಿಯೋ ರಿಲೀಸ್ ಆಗಿದೆ.
ರಿಲೀಸ್ಗೂ ಮುನ್ನ ರಿವೀಲ್ ಆಯ್ತು ಬೆಂಕಿ ಹಾರರ್ ಸೀಕ್ವೆನ್ಸ್
ಹಳ್ಳಿ ಹುಡುಗನ ಬೆಂಕಿ ಗೆಟಪ್.. ಥ್ರಿಲ್ಲರ್ ಲವ್ಸ್ಟೋರಿ ಮಿಕ್ಸಪ್
ಭೂತ ಬಂಗಲೆಯೊಳಗೆ ಆಪ್ತಮಿತ್ರನ ಕಾಟ, ಪೀಕಲಾಟ..!
ಅಣ್ಣ – ತಂಗಿ ಎಮೋಷನ್ ಜತೆ ಮುದ್ದು ಗುಮ್ಮನ ಭಯ
ಮಾಸ್ ಸಿನಿಮಾಗಳ ಮೂಲಕ ಚಿರಪರಿಚಿತರಾದ ಅನೀಶ್ ಮೊದಲ ಬಾರಿಗೆ ಕ್ಲಾಸಿಕ್ ಹಳ್ಳಿ ಗೆಟಪ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹೆಗಲ ಮೇಲೆ ಟವೆಲ್, ಕಾಲಲ್ಲಿ ಸಿಂಪಲ್ ಪಾದರಕ್ಷೆ, ವೈಟ್ ಪಂಚೆಯಲ್ಲಿ, ಪಕ್ಕಾ ಜವಾರಿ ಹಳ್ಳಿ ಹೈದನಾಗಿದ್ದಾರೆ. ಅನೀಶ್ ಹೀರೋ ಆಗಿ ಇದು ಹತ್ತನೇ ಸಿನಿಮಾ. ಎಲ್ಲಾ ಕಥೆಗಳು ಸಿಟಿ ಬ್ಯಾಕ್ಡ್ರಾಪ್ನಲ್ಲಿ ಸಾಗ್ತಾ ಇದ್ವು. ಆದ್ರೆ, ಇದು ಪಕ್ಕಾ ಹಳ್ಳಿಯ ನಾಟಿ ಸೊಗಡಿನ ಕಥೆಯಾಗಿದೆ.
ಕಥೆ ಕೇಳಿದ ತಕ್ಷಣ ಓಕೆ ಮಾಡಿದ ಅನೀಶ್,ಸಿಕ್ಕಾಪಟ್ಟೆ ಇಷ್ಟ ಪಟ್ಟು ಮಾಡಿದ್ದಾರೆ. ಇಂತಹ ಕಥೆಗಾಗಿ ಕಾಯ್ತಿದ್ದ ಅನೀಶ್ಗೆ ಇದು ಸಖತ್ ಸ್ಪೆಷಲ್ ಸಿನಿಮಾವಾಗಿದೆ. ಹೊಸತನದ ಪಾತ್ರ, ಹೊಸತನದ ಕಥೆ, ಹಾಗೂ ಮಾತಿನ ಶೈಲಿ, ಬಾಡಿ ಲಾಂಗ್ವೇಜ್ ಎಲ್ಲವೂ ಹೊಸದಾಗಿ ಬದಲಾಯಿಸಿಕೊಂಡು ಹೊಸ ಗೆಸ್ಟರ್ನಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ ಅನೀಶ್. ಲವ್,ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಇರೋ ಬೆಂಕಿ ಚಿತ್ರತಂಡದಿಂದ ಹೊಸ ವೀಡಿಯೋ ರಿವೀಲ್ ಆಗಿದೆ. ಸದ್ಯ ಈ ವೀಡಿಯೋ ತುಣುಕು, ಬೆಂಕಿ ತರಹ ಎಲ್ಲಾ ಕಡೆ ಹಬ್ಬಿ ವೈರಲ್ ಆಗ್ತಿದೆ
ಅನೀಶ್ಗೆ ನಾಯಕಿಯಾಗಿ ಸಂಪದ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. ಈ ವಾರ ರಾಜ್ಯಾದ್ಯಂತ ತೆರೆಗೆ ಬರೋಕೆ ಸಿದ್ಧವಾಗಿರೋ ಬೆಂಕಿ ಸಿನಿಮಾ ಭಯಂಕರವಾಗಿ ಬೆಚ್ಚಿ ಬೀಳಿಸಲಿದೆ. ಬೆಂಕಿ ಹೆಸರಿಗೆ ತಕ್ಕಂತೆ ಮಾಸ್ ಸಿನಿಮಾವಲ್ಲ, ಅಣ್ಣ ತಂಗಿಯ 100 % ಸೆಂಟಿಮೆಂಟ್ ಇರೋ ಕಥೆ. ತಂಗಿಯನ್ನು ಶತ್ರುಗಳು ಕೆಣಕಿದ್ರೆ ಅಣ್ಣ ಅನೀಶ್ ಬೆಂಕಿಯಾಗಿತ್ತಾರೆ ಹೊತ್ತಿ ಉರಿಯೋ ಅವನ ಕೋಪಕ್ಕೆ ಯಾರಲ್ಲಾ ಸುಟ್ಟು ಭಸ್ಮ ಆಗ್ತಾರೆ ಅನ್ನೋದೆ ಕಥೆ. ಜೊತೆಜೊತೆಗೆ ಆಪ್ತಮಿತ್ರ ನೆನಪಿಸೋ ಹಾರರ್ ಥ್ರಿಲ್ಲರ್ ಎಲಿಮೆಂಟ್ ಸೂಪರ್ ಆಗಿದೆ.
ಬೆಂಕಿ ಚಿತ್ರತಂಡದಿಂದ ಸ್ನೀಕ್ ಪೀಕ್ ವೀಡಿಯೋ ರಿಲೀಸ್ ಆಗಿದ್ದು ಹಳೆ ಭೂತ ಬಂಗಲೆಯೊಳೆಗೆ ದೆವ್ವಕ್ಕೆ ಸವಾಲಾಕೋ ಭಯಾನಕ ದೃಶ್ಯಗಳಿವೆ. ಸಿನಿಮಾದಲ್ಲಿ ಮುದ್ದು ,ಮುದ್ದಾಗಿ ಕಾಣೋ ದೆವ್ವ ನಿಮಗೆ ಹೇಗೆ ಭಯ ಹುಟ್ಟಿಸುತ್ತೋ ಅನ್ನೋದೆ ಥ್ರಿಲ್ಲಿಂಗ್. ಇದ್ರ ಜತೆಯಲ್ಲಿ ತಂಗಿ ಓದಿನಲ್ಲಿ ದೊಡ್ಡ ಸಾಧನೆ ಮಾಡಬೇಕು ಅಂತಾ ಕನಸು ಕಂಡಿರೋ ಅಣ್ಣ, ಹೇಗೆ ಅವಳಿಗಾಗಿ ತಾಪತ್ರಯ ತೆಗೆದುಕೊಂಡಿದ್ದಾನೆ ಅನ್ನೋದು ಇನ್ನೂ ಫನ್ನಿಯಾಗಿದೆ. ಅಣ್ಣ ತಂಗಿಯ ಶಿವಣ್ಣ-ರಾಧಿಕಾ ಕಾಂಬಿನೇಷನ್ ನೆನಪು ಮಾಡಿದ್ರು ಕೂಡ, ಆ ಸಿನಿಮಾ ಬೀಟ್ ಮಾಡೋ ಎಲೆಮೆಂಟ್ಸ್ ಇರುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.
ಎ.ಆರ್. ಶಾನ್ ನಿರ್ದೇಶನದಲ್ಲಿ ಬೆಂಕಿಯ ಜ್ವಾಲೆ ಉಗ್ರವಾಗಿದೆ. ಸಿಲ್ವರ್ ಸ್ಕ್ರೀನ್ ಮೇಲೆ ನಿರ್ದೇಶಕನ ಕರಾಮತ್ತು ನೋಡೋಕೆ ಕ್ಷಣಗಣನೆ ಶುರುವಾಗಿದೆ. ರವಿಕುಮಾರ್, ಶ್ರೀಕಾಂತ್, ನಂದೀಶ್ ಸಹಭಾಗಿತ್ವದ ನಿರ್ಮಾಣದಲ್ಲಿ ಅಧ್ಬುತವಾಗಿ ಸಿನಿಮಾ ಮೂಡಿ ಬಂದಿದೆ. ಹಳ್ಳಿಯ ಸೌಂದರ್ಯಕ್ಕೆ ಇನ್ನಷ್ಟು ರಂಗು ತುಂಬಿದ್ದಾರೆ ಕ್ಯಾಮೆರಾ ಮ್ಯಾನ್ ವೀನಸ್ ನಾಗರಾಜ್ ಮೂರ್ತಿ. ಆನಂದ ರಾಜ್ ವಿಕ್ರಮ್ ಮ್ಯೂಸಿಕ್ ಕಂಪೋಸಿಂಗ್ ಇಂಪಾಗಿದೆ. ವಿಂಕ್ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ಬೆಂಕಿ ಚಿತ್ರಕ್ಕೆ ಪವರ್ ಟವಿ ಕಡೆಯಿಂದ ಆಲ್ ದಿ ಬೆಸ್ಟ್.
ರಾಕೇಶ್ ಅರುಂಡಿ, ಫಿಲ್ಮ್ ಬ್ಯೂರೊ, ಪವಟ್ ಟಿವಿ