Monday, December 23, 2024

ಸಿಲಿಕಾನ್ ಸಿಟಿಯಲ್ಲಿ 58 ಹೊಸ ಆರೋಗ್ಯ ಕೇಂದ್ರ

ಬೆಂಗಳೂರು: ಆರೋಗ್ಯವೇ ಭಾಗ್ಯ ಅಂತಾ ಜನರ ಆರೋಗ್ಯದತ್ತ ಚಿತ್ತ ಹರಿಸಿರುವ ಬಿಬಿಎಂಪಿ ಈಗ ಬೆಂಗಳೂರು ಮಂದಿಗೆ ಗುಡ್​​ನ್ಯೂಸ್ ಕೊಟ್ಟಿದೆ. ಜನರ ಆರೋಗ್ಯ ಮತ್ತು ಕ್ಷೇಮಾಭಿೃವೃದ್ಧಿಗೆ ಒತ್ತು ಕೊಟ್ಟು ಬಿಬಿಎಂಪಿ ಈಗ ಜನರ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದೆ. ಅಷ್ಟಕ್ಕೂ ಬಿಬಿಎಂಪಿ ಮಾಡ್ತಿರೋ ಆ ಕೆಲಸ ಏನು?

ಧೂಳು, ಜಂಜಾಟದ ಬದುಕು ಟ್ರಾಫಿಕ್ ಕಿರಿಕಿರಿ ಹೀಗೆ ನಾನಾ ಕಾರಣಗಳಿಂದ ಕಂಗೆಟ್ಟು ಅಪಾರ ರೋಗಕ್ಕೆ ತುತ್ತಾಗುತ್ತಿರುವ ಸಿಲಿಕಾನ್ ಸಿಟಿ ಮಂದಿ ಆಸ್ಪತ್ರೆಯ ಕದ ತಟ್ಟುತ್ತಿರುವ ವಿಚಾರ ಹೊಸದೇನಲ್ಲ. ದೊಡ್ಡ ಆಸ್ಪತ್ರೆಗಳಿಗೆ ದುಡ್ಡು ಕೊಟ್ಟು ಸಾಕಾಗಿರುವ ಜನರ ಸಮಸ್ಯೆಗೆ ಇತಿಶ್ರೀ ಹಾಡೋಕೆ ಬಿಬಿಎಂಪಿ ಒಂದು ಪ್ಲಾನ್ ಮಾಡ್ತಿದೆ. ಆ ಪ್ಲಾನ್ ಹೆಸರೇ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ.

ಹೌದು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಈ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಪ್ಲಾನ್ ಒಳಗೊಂಡಿರುತ್ತದೆ. ಸರ್ಕಾರದ ಅನುದಾನದಿಂದ ಬೆಂಗಳೂರಿನಲ್ಲಿ ಕೂಡ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಆರಂಭ ಮಾಡಲು ಬಿಬಿಎಂಪಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಬಿಬಿಎಂಪಿ ಜಾಗ ಹುಡುಕುತ್ತಿದೆ.

BBMP ವ್ಯಾಪ್ತಿಯಲ್ಲಿ 243 ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ಕೇಂದ್ರದಲ್ಲಿ ಮನಸ್ಸಿನ ಸೀಮಿತ ಕಾಪಾಡಿಕೊಳ್ಳಲು ಯೋಗ ಕೇಂದ್ರಗಳು ಕೂಡ ಇರುತ್ತವೆ. ಹೈಪರ್ ಟೆನ್ಶನ್, ಶುಗರ್ ಇತ್ಯಾದಿ ಖಾಯಿಲೆಗಳಿಗೆ ಇಲ್ಲಿ ಟ್ರೀಟ್ಮೆಂಟ್ ಕೊಡಲಾಗುತ್ತದೆ. ಸದ್ಯ ಬಿಬಿಎಂಪಿ ಕಟ್ಟಡದಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಈಗಾಗಲೇ ಸ್ಥಳಗಳನ್ನು ಗುರುತು ಮಾಡಲಾಗಿದೆ ಅಂತಾ ಪಾಲಿಕೆಯ ವಿಶೇಷ ಆರೋಗ್ಯ ಇಲಾಖೆಯ ಆಯುಕ್ತ ಡಾ. ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಬರೊಬ್ಬರಿ 123 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಪಿಎಚ್‌ಸಿಗಳ ನಿರ್ಮಾಣ , ಹಳೆಯ 140 ಪಿಎಚ್‌ಸಿಗಳನ್ನ ಹೆಚ್ಚಿನ ಸೌಲಭ್ಯ ಕಲ್ಪಿಸಿ ಮೇಲ್ದರ್ಜೆಗೇರಿಸಲು ಸಿದ್ದತೆ ನಡೆಯುತ್ತಿದೆ . ಟೆಂಡರ್ ಪ್ರಕ್ರಿಯೆ 15 ದಿನಗಳೊಳಗೆ ಅಂತ್ಯಗೊಳ್ಳಲಿದ್ದು, ಆಗಸ್ಟ್ ವೇಳೆಗೆ ಕಾಮಗಾರಿ ಆರಂಭಗೊಳ್ಳಲಿದೆ. ಒಟ್ಟಿನಲ್ಲಿ ಜನರ ಆರೋಗ್ಯ ಮತ್ತು ಕ್ಷೇಮದ ದೃಷ್ಟಿಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವದ್ಧಿ ಕೇಂದ್ರ ಶುರು ಮಾಡಲು ಬಿಬಿಎಂಪಿ ಮುಂದಾಗಿದ್ದು ಆದಷ್ಟು ಬೇಗ ಈ ಪ್ರೊಜೆಕ್ಟ್ ಶುರು ಆಗಲಿ ಜನರಿಗೆ ನೆರವಾಗಲಿ.

ಶಶಿಧರ್ ಹಾಗೂ ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES