Monday, December 23, 2024

ನಮ್ಮ ಪಕ್ಷದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅವಕಾಶ ಸಿಗುತ್ತದೆ : ಅಶ್ವಥ್ ನಾರಾಯಣ

ರಾಮನಗರ : ನಮ್ಮ ಪಕ್ಷದಲ್ಲಿ ಒಂದೇ ರೀತಿ ಕಾನೂನು ಇದೆ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.

ನಿಗಮ ಮಂಡಲಿಯಲ್ಲಿ ಬಿಎಸ್ವೈ ಬೆಂಬಲಿಗರಿಗೆ ಕೋಕ್ ವಿಚಾರವಾಗಿ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಅವರು ನಮ್ಮ‌ ನಾಯಕರು. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅವಕಾಶ ಸಿಗುತ್ತದೆ. ನಮ್ಮ ನಾಯಕರು ಯಡಿಯೂರಪ್ಪ ನವರು, ಅವರು ವ್ಯಕ್ತಿಗತವಾಗಿ ಯಾವತ್ತು ಇಲ್ಲ. ನಾನು ಪಕ್ಷದ ಕಾರ್ಯಕರ್ತ ಪಕ್ಷದ ನಾಯಕ ಅಂತಾ ಬಿಎಸ್ ವೈ ಇರೋದು. ಎಲ್ಲರನ್ನೂ ಜೊತೇಲಿ ಕರೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತದೆ ಎಂದರು.

ಇನ್ನು, ನಾವು ಎಲ್ಲರೂ ಒಗ್ಗಟ್ಟಾಗಿ, ಸಮಾಜದ ಹಾಗೂ ದೇಶದ ಕೆಲಸ ಮಾಡ್ತೀವಿ. ನಮ್ಮ ಪಕ್ಷದಲ್ಲಿ ಶಾಸಕರನ್ನು ಬಿಟ್ಟು ಅಧಿಕಾರ ಪೂರೈಸಿದ ಬೇರೆಯವರನ್ನು ಕೈ ಬಿಡಲಾಗಿದೆ. ನಮ್ಮ ಪಕ್ಷದಲ್ಲಿ ಒಂದೇ ರೀತಿ ಕಾನೂನು ಇದೆ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಯಾರೆಲ್ಲಾ ಅವಧಿ ಪೂರೈಸಿದ್ದಾರೆ ಅವರನ್ನು ಎಲ್ಲರನ್ನೂ ಕೈಬಿಡಲಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES