Monday, November 18, 2024

ಮಾರಣಾಂತಿಕ ಕ್ರೀಡೆಗಳಲ್ಲಿ ಕಿಕ್ ಬಾಕ್ಸಿಂಗ್​ಗೆ ಅಗ್ರಸ್ಥಾನ

ಕ್ರೀಡೆ ಅಂದ ಮೇಲೆ ಏಳೋದು ಬೀಳೋದು, ಗಾಯಗೊಳ್ಳೋದು ಸಹಜ. ಆದರೆ, ಕೆಲವು ಕ್ರೀಡೆಗಳಿವೆ. ಅವುಗಳಲ್ಲಿ ಕ್ರೀಡಾಪಟುಗಳು ಗಾಯಗೊಳ್ಳೋದಲ್ಲ, ಪ್ರಾಣ ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಅಂತಹಾ ಅಪಾಯಕಾರಿ ಕ್ರೀಡೆಗಳು ಯಾವುವು? ಜತೆಗೆ ಇಂತಹಾ ಅಪಾಯಕಾರಿ ಕ್ರೀಡೆಗಳಲ್ಲಿ ಪ್ರಾಣ ಕಳೆದುಕೊಂಡವರು, ಗಂಭೀರವಾಗಿ ಗಾಯಗೊಂಡವರು ಇದ್ದಾರಾ?

ಜೀನ್ ಪಾಲ್​​​ ವ್ಯಾನ್​​ ಡಮ್ಮೆ. ಈತ ಹಾಲಿವುಡ್​​ನ ಪ್ರಖ್ಯಾತ ನಟ, ಮಾರ್ಷಲ್ ಆರ್ಟ್ಸ್​ನಲ್ಲಿ ಪ್ರವೀಣ. ಬೆಲ್ಜಿಯಂನಲ್ಲಿ ಜನಿಸಿದ ವ್ಯಾನ್ ಡಮ್ಮೆ ತನ್ನ ಕಿಕ್ ಬಾಕ್ಸಿಂಗ್ ಮೂಲಕವೇ ಜನಮನ ಗೆದ್ದ ನಟ. ವ್ಯಾನ್​​​ ಡಮ್ಮೆ ಬಾಕ್ಸಿಂಗ್​​​ ರಿಂಗ್​​ನಲ್ಲಿ ಇದ್ದಾನೆ ಅಂದ್ರೆ ಎದುರಾಳಿಗಳಿಗೆ ತೊಡೆ ನಡುಕ ಶುರುವಾಗೋದು. ವ್ಯಾನ್ ಡಮ್ಮೆ ರಿಂಗ್​​ನಲ್ಲಿ ಕಿರಾತಕನೇ ಸರಿ. ಆತನ ಪಂಚ್​ಗಳು ಪ್ರಾಣಾಂತಿಕ ಪಂಚ್​​ಗಳು. ವ್ಯಾನ್​​​ ಕೊಡುತ್ತಿದ್ದ ಒಂದೇ ಪಂಚ್​ಗೆ ಎದುರಾಳಿ ತಲೆ ಅದುರಿ, ಹಲ್ಲುಗಳು ಉದುರಿ ಕೆಳಗೆ ಉರುಳುತ್ತಿದ್ದ. ಕರಾಟೆ ಹಾಗೂ ಮಾರ್ಷಲ್ ಆರ್ಟ್ಸ್​​ನಲ್ಲಿ ಪ್ರಸಿದ್ಧಿ ಪಡೆದಿದ್ದ ವ್ಯಾನ್ ಡಮ್ಮೆ, ಹಾಲಿವುಡ್​ನಲ್ಲಿ ಕಿಕ್ ಬಾಕ್ಸಿಂಗ್​​​​​ ಆಧರಿತ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾನೆ. 70 ಹಾಗೂ 80ರ ದಶಕದಲ್ಲಿ ಕಿಕ್ ಬಾಕ್ಸಿಂಗ್ ಹಾಗೂ ಕರಾಟೆ ಕುರಿತ ಅದೆಷ್ಟೋ ಸಿನಿಮಾಗಳು ಬಂದ್ವು. ಅದರಲ್ಲೆಲ್ಲ ವ್ಯಾನ್ ಡಮ್ಮೆ ಮಿಂಚು ಹರಿಸಿದ್ದ. ಆದ್ರೆ ಈತ ಪಂಚ್​ಗೆ ಎದುರಾಳಿ ಪ್ರಾಣವೇ ಹೀಗುವಂಥ ಪ್ರಸಂಗಗಳು ಬರುತ್ತಿರಲಿಲ್ಲ ಕಾರಣ ಅಂಥಾ ಮುನ್ನೆಚ್ಚರಿಕೆಯನ್ನ ವ್ಯಾನ್ ಡಮ್ಮೆ ತೆಗೆದುಕೊಳ್ತಿದ್ದರು.

2014ರ ಮಾರ್ಚ್​​​ 16. ಈಗಲ್ಸ್ ಕ್ಲಬ್​​​ನಲ್ಲಿ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿತ್ತು. ಅಂದು ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದವನು ಹವ್ಯಾಸಿ ಕಿಕ್ ಬಾಕ್ಸರ್ ಡೆನ್ನಿಸ್ ಮನ್ಸನ್ ಜೂನಿಯರ್. ಎರಡನೇ ರೌಂಡ್​​​ನಲ್ಲೇ ಮನ್ಸನ್ ಬಹುತೇಕ ಸುಸ್ತಾಗಿದ್ದ. ಆದರೂ ಆತನ ಕೋಚ್ ಹಾಗೂ ಬಾಕ್ಸಿಂಗ್ ಅಫಿಶಿಯಲ್ಸ್ ಅವನನ್ನು ಮೂರನೇ ರೌಂಡ್​​​ಗೆ ಅಣಿಗೊಳಿಸುತ್ತಾರೆ. ಮೂರನೇ ರೌಂಡ್​​​ನಲ್ಲಿ ಮನ್ಸನ್​​ಗೆ ಬಿದ್ದ ಆ ಒಂದು ಹೊಡೆತ…ಅಷ್ಟೇ,, ಮೂಲೆಗೆ ಹೋಗಿ ಕುಳಿತ ಮಾನ್ಸನ್, ಅಲ್ಲೇ ಕುಸಿದ ಮತ್ತೆ ಮೇಲೇಳಲೇ ಇಲ್ಲ.

ಕಿಕ್ ಬಾಕ್ಸಿಂಗ್ ಮತ್ತು ಬಾಕ್ಸಿಂಗ್​​​ನಲ್ಲಿ ಹೀಗೆ ಮಾರಣಾಂತಿಕವಾದ ಪೆಟ್ಟು ತಿಂದ 10 ಪ್ರಮುಖ ಘಟನೆಗಳನ್ನು ನಾವು ಪಟ್ಟಿ ಮಾಡೋದಾದರೆ, ಮೊದಲನೆಯದ್ದು ಜಾನ್ ಜಾನ್ಸ್ ಟೋಯೆ ಎನ್ನುವ ಕಿಕ್ ಬಾಕ್ಸರ್ ತನ್ನ ಎದುರಾಳಿಯ ಕಾಲು ಮುರಿದು ಹಾಕಿದ್ದ. ಲೆಸ್ಲೆ ಸ್ಮಿತ್ ಎನ್ನುವ ಮಹಿಳಾ ಬಾಕ್ಸರ್, ಜೆಸ್ಸಿಕಾ ಎನ್ನುವ ಎದುರಾಳಿಯ ಕಿವಿ ಹರಿದುಹಾಕಿದ್ದಳು, ಮ್ಯಾಟ್ ಮೆಟ್ರಿಯಾನ್ ಹೋರಾಟದಲ್ಲಿ ತನ್ನ ಕಣ್ಣನ್ನೇ ಕಳೆದುಕೊಂಡಿದ್ದ. ಅಂಡರ್​​​ಸನ್ ಸ್ಲೇವಾನ ಕಾಲು ತಿರುಚಿಕೊಂಡಿತ್ತು. ಫ್ರಾಂಕ್ ಮಿರ್ ಎನ್ನುವ ಬಾಕ್ಸರ್ ತನ್ನ ಎದುರಾಳಿ ಟಿಮ್ ಸೆಲ್ವಿಯಾಸ್ ಕೈಗಳನ್ನು ತಿರುಚಿಬಿಟ್ಟಿದ್ದ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಬಹುಶಃ ಬಾಕ್ಸಿಂಗ್, ಕಿಕ್ ಬಾಕ್ಸಿಂಗ್ ಅಂಗಳದಲ್ಲಿ ಗಾಯಗೊಳ್ಳದ, ಮಾರಣಾಂತಿಕ ಪೆಟ್ಟು ತಿನ್ನದ ಬಾಕ್ಸರ್ ಇಲ್ಲವೇ ಇಲ್ಲ ಎನ್ನಬಹುದೇನೋ. 2019ರವರೆಗೆ ಬಾಕ್ಸಿಂಗ್ ಮತ್ತು ಕಿಕ್ ಬಾಕ್ಸಿಂಗ್​​ನಲ್ಲಿ ಇಡೀ ವಿಶ್ವದಲ್ಲಿ ಏಳು ಮಂದಿ ಮಾರಣಾಂತಿಕ ಹೊಡೆತ ತಿಂದು ಪ್ರಾಣ ಬಿಟ್ಟಿದ್ದಾರೆ. ಒಂಬತ್ತು ಮಂದಿ ಚೇತರಿಸಿಕೊಳ್ಳಲು ಸಾಧ್ಯವೇ ಆಗದ ಪರಿಸ್ಥಿತಿ ತಲುಪಿದ್ದಾರೆ.

ಹಾಗಾದ್ರೆ, ಕೇವಲ ಕಿಕ್ ಬಾಕ್ಸಿಂಗ್ ಮಾತ್ರ ಮಾರಣಾಂತಿಕ ಕ್ರೀಡೆಯೇ. ಇಲ್ಲಿ ಮಾತ್ರ ಕ್ರೀಡಾಪಟುಗಳು ಹೊಡೆತ ತಿಂದು ಪ್ರಾಣ ಕಳೆದುಕೊಳ್ಳುತ್ತಾರೆಯೇ ಅಂದ್ರೆ, ಖಂಡಿತ ಇಲ್ಲ. ಪ್ರಪಂಚದಲ್ಲಿ 10ಕ್ಕೂ ಹೆಚ್ಚು ಮಾರಣಾಂತಿಕ ಕ್ರೀಡೆಗಳಿವೆ. ಬುಲ್ ಫೈಟ್​, ಬೇಸ್ ಜಂಪಿಂಗ್, ಬಿಗ್ ವೇವ್ ಸರ್ಫಿಂಗ್, ಸ್ಕೀಯಿಂಗ್, ಕಾರ್ ರೇಸಿಂಗ್, ರಗ್ಬಿ ಮತ್ತು ಬಾಕ್ಸಿಂಗ್ ಇವುಗಳಲ್ಲಿ ಮುಂಚೂಣಿಯಲ್ಲಿವೆ. ಇವುಗಳನ್ನು ಮಾರಣಾಂತಿಕ ಕ್ರೀಡೆಗಳು ಅಂತಲೇ ಹೇಳಲಾಗುತ್ತದೆ. ಅದರಲ್ಲೂ ಬಾಕ್ಸಿಂಗ್ ಇದೆಯಲ್ಲ ಅದಂತೂ ನೇರ ಪರಿಣಾಮ ಬೀರುವ ಕ್ರೀಡೆ. ಈ ಕಿಕ್ ಬಾಕ್ಸಿಂಗ್, ಬಾಕ್ಸಿಂಗ್​​​​ನಿಂದಲೇ ಜನ್ಮ ತಳೆದಿದ್ದು ಅಲ್ವಾ. ಇದನ್ನ ಬಾಕ್ಸಿಂಗ್​​ನ ಮುಂದುವರಿದ ಭಾಗವೇ ಕಿಕ್ ಬಾಕ್ಸಿಂಗ್ ಎನ್ನಬಹುದು. ಒಂದು ಕಾಲದಲ್ಲಿ ಬಾಕ್ಸಿಂಗ್ ಪ್ರಪಂಚವನ್ನು ಆಳುತ್ತಿದ್ದ ಮೊಹಮ್ಮದ್ ಅಲಿಯನ್ನು ಯಾರೂ ಮರೆಯುವಂತೆಯೇ ಇಲ್ಲ. ಆದರೆ, ರಿಂಗ್​​​​ನಲ್ಲಿ ಬಿದ್ದ ಮಾರಣಾಂತಿಕ ಹೊಡೆತಗಳಿಂದಾಗಿ ಮಹಮ್ಮದ್ ಅಲಿ ಪಾರ್ಕಿನ್​​​​ಸನ್​​ಗೆ ತುತ್ತಾಗಿ ನರಳಿ ಪ್ರಾಣಬಿಟ್ಟರು. ಕರಾಟೆ, ಜ್ಯೂಡೋ ಲೋಕದ ದಂತಕಥೆ ಬ್ರೂಸ್ಲಿ ಬದುಕು ಕೂಡ ಹೀಗೆ ದುರಂತಮಯವಾಯ್ತು.

ಈಗ ಕರ್ನಾಟಕದ ಒಬ್ಬ ಪ್ರತಿಭಾವಂತ ಕ್ರೀಡಾಪಟು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ನಿಖಿಲ್ ಸಾವಿಗೆ ಟೂರ್ನಿ ಆಯೋಜಕರ ನಿರ್ಲಕ್ಷ್ಯ ಕಾರಣವೋ ಅಥವಾ ಇದು ಪೂರ್ವಯೋಜಿತ ಕೊಲೆಯೋ, ಇಲ್ಲವೇ ಆಕಸ್ಮಿಕವೋ ಗೊತ್ತಿಲ್ಲ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಆರೋಪಿಗಳನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗಲೇ ಸತ್ಯಾಂಶ ಏನು ಅಂತಾ ಗೊತ್ತಾಗೋದು. ಕಿಕ್ ಬಾಕ್ಸಿಂಗ್​ನಂಥ ಕ್ರೀಡೆಗಳ ಟೂರ್ನಿ ಆಯೋಜಿಸುವಾಗ ಎಷ್ಟು ಮುನ್ನೆಚ್ಚರಿಕೆ ವಹಿಸಿದ್ರೂ ಸಾಲದು. ಇದು ಈ ದಿನದ ವಿಶೇಷ.

ಪವರ್ ಟಿವಿ.. ಇದು ನಿಮ್ಮ ಶಕ್ತಿ.

RELATED ARTICLES

Related Articles

TRENDING ARTICLES