Sunday, December 29, 2024

ಗೋಡೆ ಕುಸಿತ: ಇಬ್ಬರು ಯುವಕರು ದಾರುಣ ಸಾವು

ಬೆಂಗಳೂರು: ಬ್ಯಾಟರಾಯನಪುರದ ನೈಸ್ ರಸ್ತೆಯ ಕಿಮ್ಕೋ ಜಂಕ್ಷನ್ ಬಳಿ ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದು ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರು ವಾಲ್ಮೀಕಿನಗರದ 10ನೇ ಕ್ರಾಸ್​​ನ ಬಾಲ ಮತ್ತು 2ನೇ ಕ್ರಾಸ್​ನ ರಾಜಮಣಿ ಎಂದು ಗುರುತಿಸಲಾಗಿದೆ. ಇಬ್ಬರು ಮೂಲತಃ ತಮಿಳುನಾಡಿನವರು. ಕೆಲವು ವರ್ಷಗಳಿಂದ ಬೆಂಗಳೂರಿಗೆ ಬಂದು ವಾಲ್ಮೀಕಿನಗರದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಗಾರೆ ಕೆಲಸ, ಪೇಯ್ಟಿಂಗ್ ಸೇರಿದಂತೆ ಸಣ್ಣ ಪುಟ್ಟ ಕೆಲಸ‌ ಮಾಡಿಕೊಂಡಿದ್ದರು.

ಇವತ್ತು ಕೆಲಸವಿಲ್ಲದೆ ಬೆಳಗ್ಗೆಯೇ ಎಣ್ಣೆ ಏಟಿನಲ್ಲಿದ್ದ ರಾಜಮಣಿ ಹಾಗೂ ಬಾಲ ಸೇರಿದಂತೆ ನಾಲ್ವರನ್ನ ಯಾವುದೋ ವ್ಯಕ್ತಿ ಕೆಲಸಕ್ಕೆಂದು ಕರೆದೊಯ್ದಿನಂತೆ. ಆದ್ರೆ, ಕೆಲಸಕ್ಕೆ ಹೋದವ್ರು, ಗೋಡೆ ದುರಂತದಲ್ಲಿ ಸಿಲುಕಿ‌ ಸಾವನ್ನಪ್ಪಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಮೃತರ ಜೊತೆ ತೆರಳಿದ್ದ ಇಬ್ಬರನ್ನ ವಶಕ್ಕೆ ಪಡೆದಿರುವ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES