ಇಡೀ ಭಾರತೀಯ ಚಿತ್ರರಂಗವೇ ತುದಿಗಾಲಲ್ಲಿ ಕಾಯುತ್ತಿರೋ ಸಿನಿಮಾ ವಿಕ್ರಾಂತ್ ರೋಣ. 3ಡಿ ವರ್ಷನ್ನಲ್ಲಿ ಕಮಾಲ್ ಮಾಡೋಕೆ ರಾ.ರಾ.ರಕ್ಕಮ್ಮ ರೆಡಿಯಾಗಿದ್ದಾಳೆ. ರಕ್ಕಮ್ಮನ ಕಿಕ್ಕಿನ ಮತ್ತಿನಲ್ಲಿ ಕಳೆದು ಹೋಗಿದ್ದ ಪ್ರೇಕ್ಷಕರು, ರಾಜಕುಮಾರಿ ಮೆಲೋಡಿ ಟ್ಯೂನ್ಗೆ ಇಂಪ್ರೆಸ್ ಆಗಿದ್ದರು. ಇದೀಗ ಅಲೆಮಾರಿ ಫಕೀರನಾಗಿ ವಿಕ್ರಾಂತ್ ರೋಣ ಎಂಟ್ರಿ ಕೊಟ್ಟಿದ್ದಾನೆ. ಹಳ್ಳಿಮುಕ್ಕನ ಹೊಸ ಹಾಡು ಹೇಗಿದೆ ಗೊತ್ತಾ..?
ಫಕೀರನಾಗಿ ವಿಕ್ರಾಂತ್ ರೋಣ ಹಳ್ಳಿ- ಹಳ್ಳಿ ಅಲೆದಾಟ..!
ಅಮ್ಮನ ಹುಡುಕಿ ಹೊರಟ ಹಳ್ಳಿಮುಕ್ಕನ ಸಾಂಗ್ ವೈರಲ್
ನಿನ್ನ ಗೂಡಿಗೆ ಬೇಗ ಬಾ ಎಂದು ಅಮ್ಮನ ಅಳಲು..!
ಸಂಚಿತ್ ಹೆಗಡೆ ಮಧುರ ದನಿಯಲ್ಲಿ ಸಾಂಗ್ ಹಿಟ್
ಸದ್ಯ ಬಜಾರಲ್ಲಿ ಚಾಲ್ತಿಯಲ್ಲಿರೋದು ಒಂದೇ ಹೆಸರು, ವಿಕ್ರಾಂತ್ ರೋಣ. ಯೆಸ್.. ರೋಣನ ಆರ್ಭಟ ಮುಗಿಲು ಮುಟ್ಟಿದೆ. ಗುಮ್ಮ ಬೆಚ್ಚಿ ಬೆವರಿಳಿಸೋಕೆ ಸಜ್ಜಾಗಿ ನಿಂತಿದ್ದಾನೆ. ಯಾವುದೋ ನಿಗೂಢ ಜಗತ್ತಿಗೆ ನಿಮ್ಮನ್ನೆಲ್ಲಾ ಕರೆದುಕೊಂಡು ಹೋಗೋಕೆ ಇಡೀ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಹಾರರ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಕ್ಷಣಕ್ಷಣಕ್ಕೂ ಮೈನವಿರೇಳಿಸುವ ಮಹಾದೃಶ್ಯಕಾವ್ಯದ ಅನಾವರಣವಾಗಲಿದೆ.
ವಿಕ್ರಾಂತ್ ರೋಣದ ಸ್ಪೆಷಲ್ ಅಪ್ಡೇಟ್ ಬಗ್ಗೆ ಕೂತೂಹಲದಿಂದ ಎದುರು ನೋಡ್ತಿದ್ದ ಫ್ಯಾನ್ಸ್ಗಳಿಗೆ ಮತ್ತೊಂದು ಲಡ್ಡು ಬಂದು ಬಾಯಿಗೆ ಬಿದ್ದಿದೆ. ರಕ್ಕಮ್ಮನ ಗುಂಗಿನಲ್ಲಿ ತೇಲ್ತಾ ಇರೋ ಅಭಿಮಾನಿಗಳನ್ನು, ಅಮ್ಮನ ಜೋಗುಳದಲ್ಲಿ ತಣ್ಣಗೆ ಮಲಗಿಸಿದ್ದ ವಿಕ್ರಾಂತ್ ರೋಣ, ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಹಳ್ಳಿಮುಕ್ಕನಾಗಿ ಫಕೀರನ ರೀತಿ ಅಲೆದಾಟದ ಹಾಡು ರಿಲೀಸ್ ಆಗಿದೆ. ಅಂಕುಡೊಂಕಿನ ಫಕೀರ ಲಿರಿಕಲ್ ಸಾಂಗ್ ಧೂಳೆಬ್ಬಿಸ್ತಾ ಇದ್ದು, ಅಮ್ಮ, ಮಗನಿಗಾಗಿ ಕಾದು ಕುಳಿತ ವಾತ್ಸಲ್ಯದ ದೃಶ್ಯವಿದೆ.
ಅಂಕು ಡೊಂಕು ದಾರಿಯಲ್ಲಿ ಅಮ್ಮನ ನೋಡೋಕೆ ನಿರೂಪ್ ಭಂಡಾರಿ ಬರ್ತಾ ಇದ್ದಾರೆ. ಇತ್ತ ಹಾಡಿನಲ್ಲಿ ಅಮ್ಮ ಮಗನನ್ನು ನೋಡಲು ಶಬರಿಯಂತೆ ಕಾದು ಕುಳಿತಿದ್ದಾಳೆ. ಇದು ನಿನ್ನದೇ ಗೂಡು ದಯವಿಟ್ಟು ಬೇಗ ಬಾ ಎಂದು ಅಂಗಲಾಚ್ತಿದ್ದಾಳೆ. ಅಮ್ಮನ ನೋಡೋ ಖುಷಿಯಲ್ಲಿ, ಕಚ್ಚಾ ರಸ್ತೆಯಲ್ಲಿ, ಜೀಪ್ ಮೇಲೇರಿ, ಹೊಲ ಗದ್ದೆಗಳ ನಡುವೆ ಸಖತ್ ಜೋಶ್ನಲ್ಲಿ ಓಡೋಡಿ ಬರ್ತಿದ್ದಾರೆ ನಿರೂಪ್ ಭಂಡಾರಿ.
ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸಿಂಗ್ಗೆ 100 % ಮಾರ್ಕ್ಸ್ ಕೊಟ್ಟಿರೋ ಅಬಿಮಾನಿಗಳು ಈ ಹಾಡಿನ ಗುಂಗಲ್ಲಿದ್ದಾರೆ. ಈ ಫಕೀರ ಹಾಡಿಗೆ ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸಂಚಿತ್ ಹೆಗಡೆ, ಚಿನ್ಮಯಿ ಶ್ರೀಪಾದ, ಅನೂಪ್, ಅಜನೀಶ್ ಹಿನ್ನೆಲೆ ಗಾಯನವಿದೆ. ಲಾಲಿ ಹಾಡಿನ ನಂತ್ರ ಹೇ ಫಕೀರಾ ಸಿಕ್ಕಾಪಟ್ಟೆ ವೀವ್ಸ್ ಪಡೆದುಕೊಂಡು ದಾಖಲೆ ಬರಿತಿದೆ.
ಜಾಕ್ ಮಂಜು ನಿರ್ಮಾಣದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ವಿಕ್ರಾಂತ್ ರೋಣ ಫ್ಯಾಂಟಸಿ ಜಗತ್ತನ್ನು ತೆರೆದಿಡಲಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೊದಲ ಬಾರಿಗೆ ಒಟ್ಟು ಆರು ಭಾಷೆಗಳಲ್ಲಿ ಸಂಚಲನ ಮೂಡಿಸಲಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಟ್ಟಿದ್ದಾರೆ. ಟ್ರೈಲರ್ ನೋಡಿದವ್ರು ಕ್ಲೀನ್ ಬೋಲ್ಡ್ ಆಗಿದ್ದು, ಜುಲೈ 28ಕ್ಕೆ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆ ಬಿಟ್ಟು ಕಾಯ್ತಿದ್ದಾರೆ. ಸದ್ಯ ಫಕೀರನ ಆಲಾಪನೆಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ