Monday, December 23, 2024

ಶಿಕ್ಷಣ ಸಚಿವರ ವಜಾಕ್ಕೆ ರುಪ್ಸಾ ಪತ್ರ: ಸಿಎಂ ವಿರುದ್ಧ ಕಾಂಗ್ರೆಸ್‌ ಕಿಡಿ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತಪ್ಪು ನಿರ್ಧಾರಗಳು ಮತ್ತು ನಡವಳಿಕೆ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದೆ. ಕನಿಷ್ಠ ಜ್ಞಾನವಿಲ್ಲದ, ವ್ಯಾಪಾರಿ ಮನೋಭಾವದ ಸಚಿವರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ ಪತ್ರ ಬರೆದಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಖಾಸಗಿ ಶಾಲೆಗಳಿಂದ ಅಸಮರ್ಥ ಶಿಕ್ಷಣ ಸಚಿವರನ್ನು ವಜಾಗೊಳಿಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಎಲ್ಲರೂ ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ ಎಂದರೆ ರಾಜ್ಯದ ಸಿಎಂ ಮೇಲೆ ಯಾರಿಗೂ ಭರವಸೆ ಇಲ್ಲವೆಂದರ್ಥ’ ಎಂದು ಟೀಕಿಸಿದೆ.

‘ಗುತ್ತಿಗೆದಾರರ ಸಂಘ, ಸಂತೋಷ್ ಪಾಟೀಲ್‌ರ ಪತ್ರಗಳು ಪ್ರಧಾನಿ ಕಚೇರಿಯ ಡಸ್ಟ್‌ಬಿನ್ ಸೇರಿದಂತೆ ಈ ಪತ್ರವೂ ಸೇರದೆ ಫಲ ನೀಡಲಿ ಎಂಬುದು ನಮ್ಮ ನಿರೀಕ್ಷೆ’ ಎಂದು ಕಾಂಗ್ರೆಸ್‌ ಟ್ವೀಟಿಸಿದೆ.

RELATED ARTICLES

Related Articles

TRENDING ARTICLES