Thursday, September 19, 2024

PSI ಅಕ್ರಮ: ಮತ್ತೆ 3 ದಿನ ಅಮೃತ್​ ಪೌಲ್ CID ಕಸ್ಟಡಿಗೆ

ಬೆಂಗಳೂರು: ಪಿಎಸ್​ಐ ನೇಮಕಾತಿ ಪ್ರಕರಣದ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಅಮೃತ್​ ಪೌಲ್​ ಅವರನ್ನ ಮತ್ತೆ 3 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಕೋರ್ಟ್​ ನೀಡಿದೆ.

ಜುಲೈ 4ರಂದು ಅಮೃತ್​ ಪೌಲ್​ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಪಡೆದಿದ್ದರು. ಇಂದಿಗೆ ಅವಧಿಗೆ ಮುಗಿದ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅಮೃತ್​ಪೌಲ್ ಜೊತೆ ಇನ್ನುಳಿದ ನಾಲ್ವರು ಆರೋಪಿಗಳಾದ ಡಿವೈಎಸ್ಪಿ ಶಾಂಕಕುಮಾರ್, ಎಫ್​ಡಿಎ ಹರ್ಷ, ಆರ್​ಎಸ್​ಐ ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರನ್ನ ಹಾಜರುಪಡಿಸಿದ್ದರು. ಅಮೃತ್ ಪೌಲ್​ ಅವರು ಇಂದು ತಮ್ಮ ಐಫೋನ್​​ನ ಪಾಸ್​ವರ್ಡ್ ನೀಡಿದ್ದಾರೆ.

ಇನ್ನು ಇದನ್ನ ಈಗಾಗಲೇ ಫಾರ್ಮ್ಯಾಟ್ ಮಾಡಲಾಗಿದೆ. ಹೀಗಾಗಿ ಕ್ಲೌಡ್​ಗೆ ಹಾಕಿ ಡಾಟಾ ರಿಕವರಿ ಮಾಡಬೇಕು. ಅಲ್ಲದೆ ಅಮೃತ್ ಪಾಲ್​ಗೆ 1.36 ಕೋಟಿ ರೂಪಾಯಿ ನೀಡಿರುವುದಾಗಿ ಶಾಂತಕುಮಾರ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆ ನಡೆಸಬೇಕು. 6 ದಿನಗಳ ಕಾಲ ಅಮೃತ್​ ಪೌಲ್​ ಅವರನ್ನ ನಮ್ಮ ಕಷ್ಟಡಿಗೆ ನೀಡಬೇಕು ಎಂದು ಕೋರ್ಟ್​ಗೆ ಸಿಐಡಿ ಅಧಿಕಾರಿಗಳು ಮನವಿ ಸಲ್ಲಿಸಿದರು. ಹೀಗಾಗಿ ಮತ್ತಷ್ಟು ವಿಚಾರಣೆಗಾಗಿ ಮೂರು ದಿನ ಸಿಐಡಿ ವಶಕ್ಕೆ ನೀಡಿ ಕೋರ್ಟ್​​ ಆದೇಶಿಸಿದೆ.

RELATED ARTICLES

Related Articles

TRENDING ARTICLES