Monday, December 23, 2024

ಸುಶಾಂತ್​ಗೆ​​ ಡ್ರಗ್ಸ್​ ನೀಡಿದ್ದೇ ರಿಯಾ ಚಕ್ರವರ್ತಿ: NCB ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ನಟಿ ರಿಯಾ ಚಕ್ರವರ್ತಿ ತಮ್ಮ ಬಾಯ್​​​ಫ್ರೆಂಡ್ ಆಗಿದ್ದ ಬಾಲಿವುಡ್ ನಟ ಸುಶಾಂತ್ ರಜಪೂತ್ ಅವರಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ಮಾದಕವಸ್ತು ನಿಯಂತ್ರಣ ಬ್ಯೂರೊ ಆರೋಪ ಹೊರಿಸಿದೆ.

2020ರಲ್ಲಿ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ವಿಶೇಷ ಎನ್ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಕರಡು ಪ್ರತಿಯ ವಿವರಗಳು ಮಂಗಳವಾರ ಬಹಿರಂಗಗೊಂಡಿವೆ. ಸುಶಾಂತ್ ಸಿಂಗ್ ಅವರಿಗೆ ರಿಯಾ ಚಕ್ರವರ್ತಿ ಮಾದಕ ವಸ್ತು ಖರೀದಿಸಿ ಪೂರೈಸುತ್ತಿದ್ದರು ಎಂದು ಚಾರ್ಜ್ ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ.

ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸೋದರ ಶೋವಿಕ್ ಚಕ್ರವರ್ತಿ ಸೇರಿದಂತೆ 35 ಮಂದಿಯನ್ನು ಆರೋಪಟ್ಟಿಯಲ್ಲಿ ಹೆಸರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ನಲ್ಲಿ ರಿಯಾ ಚಕ್ರವರ್ತಿ ಬಂಧನಕ್ಕೊಳಗಾಗಿದ್ದರು. ಬಳಿಕ ಸುಮಾರು ಒಂದು ತಿಂಗಳ ನಂತರ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿತ್ತು.

ರಿಯಾ ಚಕ್ರವರ್ತಿ ಅವರು ಸಣ್ಣ ಪ್ರಮಾಣದ ಗಾಂಜಾವನ್ನು ಖರೀದಿಸಲು ಸುಶಾಂತ್ ಅವರಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ವೇಳೆ ರಿಯಾ ಚಕ್ರವರ್ತಿ ಮೇಲಿನ ಈ ಆರೋಪ ಸಾಬೀತಾದರೆ, 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

RELATED ARTICLES

Related Articles

TRENDING ARTICLES