ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳು ಡೇಂಜರ್ ತಾಣವಾಗಿ ಮಾರ್ಪಟ್ಟಿವೆ. ಪ್ರಯಾಣಿಕರೇ ನಮ್ಮ ಸೇಫ್ಟಿ ಅನ್ನೋ ಬಿಎಂಆರ್ಸಿಲ್ ಮಾತು ಹೆಸರಿಗೆ ಮಾತ್ರ ಸೀಮಿವಾಗಿದೆ. ನಿಲ್ದಾಣಗಳಲ್ಲಿ ಪದೇ ಪದೇ ದರಂತಗಳು ನಡೆದರು ನಮ್ಮ ಮೆಟ್ರೋ ಎಚ್ಚೆತ್ತುಕೊಳ್ತಿಲ್ಲ.
ಒಂದ್ಕಡೆ ಫುಲ್ ರಷ್. ಮೆಟ್ರೋ ಇಳಿಯೋಕೆ ಹತ್ತೋಕೆ ನೂಕಾಟ. ಜನ್ರನ್ನ ನಿಯಂತ್ರಿಸೋಕೆ ಹರಸಾಹಸ ಪಡ್ತಿರೋ ಸೆಕ್ಯುರಿಟಿ ಸಿಬ್ಬಂದಿ. ಇದು ಮೆಟ್ರೋ ನಿರ್ಮಾಣ ವೇಳೆ ನಮ್ಮ ಮೆಟ್ರೋ ನಿಗಮ ಮಾಡಿದ ಕೊಂಚ ಎಡವಟ್ಟಿನ ಪರಿಣಾಮ. ಅಂದು ನಮ್ಮಲ್ಲಿಗೇನು ಸ್ಕ್ರೀನ್ ಡೋರ್ ಬೇಡ ಅಂತ ತೀರ್ಮಾನಿಸಿದ್ದ ಮೆಟ್ರೋ ಹಾಗೆ ಎಲ್ಲೋ ಲೈನ್ ಎಳೆದು ಸೆಕ್ಯುರಿಟಿ ನಿಲ್ಲಿಸಿ ಜನ್ರ ನಿಯಂತ್ರಣಕ್ಕೆ ಮುಂದಾಗಿತ್ತು. ಆದ್ರೆ ಈಗ ಆ ತಪ್ಪಿನ ಪರಿಣಾಮ ರಷ್ ಆದ ವೇಳೆ ಜನ್ರನ್ನ ನಿಯಂತ್ರಿಸೋಕೆ ಮೆಟ್ರೋಗೆ ಕಷ್ಟವಾಗ್ತಿದೆ. ಹೀಗಾಗಿ ಪ್ರಯಾಣಿಕರ ಸೇಫ್ಟಿ ಹಿತದೃಷ್ಟಿಯಿಂದ ಸ್ಕ್ರೀನ್ ಡೋರ್ ಅಳವಡಿಕೆಗೆ ನಮ್ಮ ಮೆಟ್ರೋ ನಿರ್ಲಕ್ಷ್ಯ ವಹಿಸಿದೆ.
ಬೇರೆ ಬೇರೆ ದೇಶಗಳ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಜನರು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಕಾಲುಜಾರಿ ಬೀಳುವ ಘಟನೆಗಳು ಸಂಭವಿಸಿವೆ. ಅದೇ ರೀತಿ ನಮ್ಮ ಮೆಟ್ರೋದಲ್ಲೂ 2012ರಲ್ಲಿ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿದ್ದ. ಈ ರೀತಿ ಘಟನೆ ಮತ್ತೆ ನಡೆಯದಂತೆ ಎಚ್ಚರ ವಹಿಸಲು ಪ್ರತಿ ಸ್ಟೇಷನ್ ಒಳಗೆ ಬಾಗಿಲು ಅಳವಡಿಸಬೇಕಿದೆ. ಸದ್ಯ ಅಂಡರ್ ಗ್ರೌಂಡ್ ನಿಲ್ದಾಣದಲ್ಲಿ ಎರಡು ಟ್ರ್ಯಾಕ್ಗಳ ನಡುವೆ ಅಂತರ ಕಡಿಮೆ ಇದೆ. ಕೆಲ ನಿಲ್ದಾಣಗಳಲ್ಲಿ ಪೀಕ್ ಅವರ್ಸ್ನಲ್ಲಿ ಅತಿಹೆಚ್ಚು ಜನದಟ್ಟಣೆ ಉಂಟಾಗ್ತಿದೆ. ಹೀಗಾಗಿ ಸ್ಕ್ರೀನ್ ಡೋರ್ ಅಳಡಿಸಿ ಪ್ರಯಾಣಿಕರ ಹಿತ ಕಾಪಾಡಬೇಕು. ಆದ್ರೆ ಒಂದು ಮೆಟ್ರೋ ಸ್ಟೇಷನ್ಗೆ ಸ್ಕ್ರೀನ್ ಡೋರ್ ಆಳವಡಿಸಬೇಕು ಅಂದ್ರೆ ಬರೋಬ್ಬರಿ ನಾಲ್ಕರಿಂದ ಐದು ಕೋಟಿ ಖರ್ಚು ಆಗುತ್ತದೆ. ಹೀಗಾಗಿ ಸ್ಕ್ರೀನ್ ಡೋರ್ ಅಳವಡಿಕೆ ಕಷ್ಟ ಅಂತಾರೆ ನಮ್ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು.
ಮೆಟ್ರೋ ಬಾಗಿಲು ಬರುವ ಜಾಗದಲ್ಲಿ ಸ್ವಯಂಚಾಲಿತವಾಗಿ ತೆರೆಯುವ ಬಾಗಿಲು ಇರುತ್ತದೆ. ಇದರಿಂದಾಗಿ ಪ್ರಯಾಣಿಕರು ಗಾಜಿನ ಪರದೆಯ ಹಿಂದೆಯೇ ನಿಂತು ರೈಲಿಗಾಗಿ ಕಾಯಬೇಕಾಗುತ್ತದೆ. ಆಗ ಪ್ಲಾಟ್‌ಫಾರಂನಿಂದ ಮುಂದೆ ಹೋಗುವ ಪ್ರಸಂಗವೇ ಬರುವುದಿಲ್ಲ. ಮೆಟ್ರೋ ಸ್ಟೇಶನ್ನಿಂದ ಯಾವುದೇ ವ್ಯಕ್ತಿಯೂ ಹಳಿಗೆ ಹಾರೋದಕ್ಕೆ ಆಗೋದಿಲ್ಲ. ಸ್ಕ್ರೀನ್ ಡೋರ್ ಪ್ರಯಾಣಿಕರ ಹಿತದೃಷ್ಟಿಯಿಂದ ಒಳ್ಳೆಯದು. ಆದ್ರೆ ನಮ್ಮ ಮೆಟ್ರೋ ಮಾತ್ರ ಸ್ಕ್ರೀನ್ ಡೋರ್ ಆಳವಡಿಕೆ ಲೆಕ್ಕಾಚಾರ ಹಾಕ್ತಿದೆ.
ಒಟ್ಟಿನಲ್ಲಿ ಮೊದಲ ಹಂತದ ಕಾಮಗಾರಿ ವೇಳೆ 300 ಕೋಟಿ ಹಣ ಉಳಿಸಿದಕ್ಕೆ ಇದು ನಿಗಮಕ್ಕೆ ದೊಡ್ಡ ತಲೆನೋವಾಗಿದೆ. ಅಂದು ಮಾಡಿದ ಕಾಸ್ಟ್ ಕಟಿಂಗ್ಗೆ ಇಂದು ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬಂದಿದೆ. ಆದ್ರೂ ಜನ್ರ ಸೇಫ್ಟಿಗಿಂತ ಹಣ ದೊಡ್ಡ ವಿಷ್ಯಅಲ್ಲ ಅಂತ ಮೆಟ್ರೋ ಅರಿತುಕೊಂಡ ಪ್ರಯಾಣಿಕರ ಹಿತ ಕಾಪಾಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು