Monday, December 23, 2024

ಸ್ಯಾಂಡಲ್​ವುಡ್​​ ಸ್ಟಾರ್​ ನಟಿ ಕೈ ಹಿಡಿತಾರಾ ಮನೋರಂಜನ್​​..?

ರವಿಚಂದ್ರನ್​ ಪುತ್ರ ಮನೋರಂಜನ್​​ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸದ್ಯದಲ್ಲೇ ಕ್ರೇಜಿಸ್ಟಾರ್​ ಪ್ರೇಮಲೋಕದಲ್ಲಿ ಮದ್ವೆ ಚಪ್ಪರ ಬೀಳಲಿದೆ. ಮದ್ವೆ ಊಟ ಹಾಕಿಸೋಕೆ ಕ್ರೇಜಿ ಕುಟುಂಬ ತಯಾರಾಗ್ತಿದೆ. ಇತ್ತೀಚೆಗೆ ಮಗಳ ಮದ್ವೆಯನ್ನು ಅದ್ಧೂರಿಯಾಗಿ ಮಾಡಿದ್ದ ಕ್ರೇಜಿಸ್ಟಾರ್​​ ಮತ್ತೊಂದು ಮದ್ವೆ ಸಡಗರಕ್ಕೆ ಸಜ್ಜಾಗಿದ್ದಾರೆ. ಸ್ಯಾಂಡಲ್​ವುಡ್​ ಸಾಹೇಬನಿಗೆ ಜತೆಯಾಗೋ ಚೆಲುವೆ ಯಾರ್​ ಗೊತ್ತಾ..?

ಕ್ರೇಜಿಸ್ಟಾರ್ ಮನೆಯಲ್ಲಿ ಮದ್ವೆ ಚಪ್ಪರ.. ಮುಹೂರ್ತ ಫಿಕ್ಸ್..!

ಸ್ಯಾಂಡಲ್​ವುಡ್​​ ಸ್ಟಾರ್​ ನಟಿ ಕೈ ಹಿಡಿತಾರಾ ಮನೋರಂಜನ್​​..?

ಆಗಸ್ಟ್​ ಅಂತ್ಯಕ್ಕೆ ಪ್ರೇಮಲೋಕದಲ್ಲಿ​ ಪಿ..ಪಿ..ಪೀ.. ಡುಂ..ಡುಂ..ಡುಂ

ಮಂಗಳವಾದ್ಯದ ನಾದಸ್ವರ.. ಸದ್ಯದಲ್ಲೇ ಮಾಂಗಲ್ಯಂ ತಂತು ನಾನೇನ

ಚಂದನವನದಲ್ಲಿ ಸಾಲು ಸಾಲು ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟ ಸೋಲಿಲ್ಲದ ಸರದಾರ ಕ್ರೇಜಿಸ್ಟಾರ್​ ರವಿಚಂದ್ರನ್. ಏಳು ಬೀಳುಗಳನ್ನು ತನ್ನ ಗೆಲುವೆಂದೇ ಸ್ವೀಕಾರ ಮಾಡೋ ಅಂಜದ ಗಂಡು. ಸಿನಿಮಾ ಬಿಟ್ಟು ಬೇರೆ ಪ್ರಪಂಚವನ್ನು ಕಲ್ಪನೆ ಕೂಡ ಮಾಡಿಕೊಳ್ಳದ ಕನಸುಗಾರನಿಗೆ ಮೂರು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚೆಗೆ ಮಗಳ ಮದ್ವೆಯನ್ನು ಸ್ಟಾರ್​ ಕಲಾವಿದರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡಿದ್ದ ರವಿಚಂದ್ರನ್​ ಮತ್ತೊಂದು ಮದ್ವೆಗೆ ಸಿದ್ಧತೆ ಮಾಡಿಕೊಳ್ತಿದ್ದಾರಂತೆ.

ಇಬ್ಬರು ಮಕ್ಕಳನ್ನು ಸ್ಯಾಂಡಲ್​​ವುಡ್​ಗೆ  ಗ್ರ್ಯಾಂಡ್ ಆಗಿ ಲಾಂಚ್ ಮಾಡಿದ್ದ ಕ್ರೇಜಿಸ್ಟಾರ್​, ಮಕ್ಕಳ​ ಮೇಲೆ ಅಪಾರವಾದ ಕನಸು ಕಂಡಿದ್ದಾರೆ. ಇಡೀ ಕುಟುಂಬವೇ ಸಿನಿಮಾವನ್ನ ಉಸಿರಾಗಿಸಿಕೊಂಡಿದೆ. ಮನೋರಂಜನ್​ ರವಿಚಂದ್ರನ್​​ ಈಗಾಗ್ಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಸಾಹೇಬನಾಗಿ ಎಂಟ್ರಿ ಕೊಟ್ಟ ಮನೋರಂಜನ್​​​, ಬೃಹಸ್ಪತಿಯಾಗಿ ಮೆರೆದು, ಮುಗಿಲ್​ಪೇಟೆಯ ಹಮ್ಮೀರನಾಗಿ ಮಿಂಚಿದ್ದಾರೆ.  ಇದೀಗ ಸಂಸಾರ ಸಾಗರದಲ್ಲಿ ಈಜೋಕೆ ರೆಡಿಯಾಗಿದ್ದಾರಂತೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡೋ ಹುಡುಗಿಯ ಕೈ ಹಿಡಿಯಲಿದ್ದಾರಂತೆ ಮನೋರಂಜನ್​.

ಶೀಘ್ರದಲ್ಲೇ ಕ್ರೇಜಿಸ್ಟಾರ್​ ಮನೆಯಲ್ಲಿ ಮಂಗಳವಾದ್ಯ ಮೊಳಗುವ ಮಾಹಿತಿ ಸಿಕ್ಕಿದೆ.ಈ ಕುರಿತು ರವಿಚಂದ್ರನ್​ ಅಧಿಕೃತವಾಗಿ ಹೇಳದಿದ್ದರೂ ಬಲ್ಲ ಮೂಲಗಳ ಪ್ರಕಾರ ಮದ್ವೆಗೆ ಸಕಲ ಸಿದ್ಧತೆ ನಡೀತಿದೆಯಂತೆ. ಮನೋರಂಜನ್​ಗೆ ಸಂಗಾತಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡೋ ಹುಡುಗಿಯನ್ನು ಫಿಕ್ಸ್​ ಮಾಡಲಾಗಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಮನೋರಂಜನ್​.

2019ರಲ್ಲಿ ಮಗಳ ಮದ್ವೆ ಮುಗಿದ ನಂತ್ರ ಕ್ರೇಜಿ ಕುಟುಂಬಲದಲ್ಲಿ ಯಾವ ಸಂಭ್ರಮದ ಕಾರ್ಯಕ್ರಮವೂ ನಡೆದಿರಲಿಲ್ಲ. ಇತ್ತೀಚೆಗೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ರವಿಚಂದ್ರನ್​ ಅವ್ರ ತಾಯಿ ಕೂಡ ಇಹಲೋಕ ತ್ಯಜಿಸಿದ್ದರು. ಈ ನೋವಿನಿಂದ ಹೊರ ಬರೋಕೆ ಕ್ರೇಜಿಸ್ಟಾರ್​ ತುಂಬಾ ದಿನಗಳ ಸಮಯ ತೆಗೆದುಕೊಂಡ್ರು. ಇವೆಲ್ಲಾ ಘಟನೆಗಳ ನಂತ್ರ ಮತ್ತೊಮ್ಮೆ ರಣಧೀರನ ಫ್ಯಾಮಿಲಿಯಲ್ಲಿ ಸಡಗರದ ಘಳಿಗೆ ಬಂದಿದೆ.

ಇತ್ತ ತ್ರಿವಿಕ್ರಮ ಸಿನಿಮಾ ಮೂಲಕ ಲಾಂಚ್​ ಆದ ವಿಕ್ರಮ್​ ರವಿಚಂದ್ರನ್​​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬ್ಯಾಕ್​​ ಟು ಬ್ಯಾಕ್​​ ಹಿಟ್​ ಸಿನಿಮಾಗಳಲ್ಲಿ ಬ್ಯುಸಿ ಇರೋ ರವಿಚಂದ್ರನ್​ ಕೂಡ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿ ನಿರತರಾಗಿದ್ದಾರೆ. ಇದೆಲ್ಲದರ ನಡುವೆ ರವಿಚಂದ್ರನ್​, ಮಗನ ಮದ್ವೆಗೆ ತಯಾರಿ ನಡೆಸಿದ್ದಾರೆ. ಮಗಳ ಮದ್ವೆಯನ್ನ ಎಲ್ರೂ ನಾಚುವಂತೆ ಮಾಡಿದ್ದ ರವಿಚಂದ್ರನ್​, ಹಿರಿಯ ಮಗನ ಮದ್ವೆಗೆ ಯಾರನ್ನೆಲ್ಲಾ ಕರೀತಾರೆ..? ಮದ್ವೆ ಸಂಭ್ರಮ ಹೇಗಿರುತ್ತೆ..? ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES