ಮೈಸೂರು : ಕಬಿನಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ 38000 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಟ್ಟಿದ್ದರಿಂದ ನದಿ ಪಾತ್ರ ಜನರಲ್ಲಿ ಆತಂಕ ಹೆಚ್ಚಿದೆ.
ಕೇರಳದ ವೈನಾಡುವಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹೆಚ್.ಡಿ.ಕೋಟೆ ಕಬಿನಿ ಅಣೆಕಟ್ಟು ಭರ್ತಿಯಾಗಿದೆ. ಹೀಗಾಗಿ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಜಲಾಶಯಕ್ಕೆ 34417 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 38000 ಕ್ಯೂಸೆಕ್ಸ್ ನೀರು ಕಬಿನಿಯಿಂದ ಹೊರಕ್ಕೆ ಬಿಡಲಾಗಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿ.ಇದ್ದು, ಇಂದಿನ ಮಟ್ಟ 2282 ನೀರು ಸಂಗ್ರಹವಾಗಿದೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಕಪಿಲಾ ನದಿ ಪಾತ್ರದಲ್ಲಿ ಆತಂಕ ಹೆಚ್ಚಿದೆ. ನಂಜನಗೂಡಿನ ಕಪಿಲಾ ಸ್ನಾನ ಘಟ್ಟ, ಮಂಟಪ ಜಲಾವೃತವಾಗಿದ್ದು, ನಂಜನಗೂಡಿನಲ್ಲಿ ಶ್ರೀಪರಶುರಾಮ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ ಹಿನ್ನಲೆಯಲ್ಲಿ ಪಟ್ಟಣದಲ್ಲಿನ ನದಿ ಸಮೀಪದ ಬಡಾವಣೆಗಳು, ಜಮೀನುಗಳಿಗೂ ನೀರು ನುಗ್ಗಿದೆ.