ಕಲಬುರಗಿ : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ತಾಲ್ಲೂಕಿನಲ್ಲಿ 13 ಮನೆಗಳು ಕುಸಿದಿವೆ. ಜಮೀನುಗಳು ಜಲಾವೃತವಾಗಿದ್ದು, ಜನರ ಬದುಕು ಅಕ್ಷರಶಃ ದುಸ್ತರವಾಗಿದೆ. ಕಾಳಗಿ ತಾಲೂಕು ಮತ್ತು ಚಿತ್ತಾಪುರ ತಾಲೂಕಿನಲ್ಲಿ ಮಳೆಯಿಂದ ಇಬ್ಬರ ಸಾವನ್ನಪ್ಪಿದ್ರೆ, ಜಿಲ್ಲೆಯಲ್ಲಿ ಕಳೆದ 12 ದಿನಗಳಲ್ಲಿ 18 ಜಾನುವಾರುಗಳು ಸಾವನ್ನಪ್ಪಿವೆ.
ಜೇವರ್ಗಿ ತಾಲೂಕಿನ ಹರನೂರ ಗ್ರಾಮದ ಶಾಲೆ ಕೋಣೆಯ ಮೇಲ್ಚಾವಣಿ ಕುಸಿತ ವಾಗಿದೆ. ಇನ್ನೊಂದು ವಾರ ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಅಫಜಲಪುರ ತಾಲೂಕಿನಲ್ಲಿ ಹಾನಿಗೊಳಗಾದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿನ ಮಳೆ ಅವಾಂತರದ ಬಗ್ಗೆ ಮಾಹಿತಿ ಪಡೆದುಕೊಂಡರು. ಅನಾಹುತ ಸಂಭವಿಸದಂತೆ ಎಚ್ಚರದಿಂದ ಇರಲು ಅಧಿಕಾರಿಗಳಿಗೆ ಸೂಚನೆ ನೀಡಿದರು.