Monday, February 24, 2025

ಅಕ್ರಮ ಗೋವು,ಎಮ್ಮೆ ಸಾಗಣಿಕೆ; 8 ಮಂದಿ ಬಂಧನ

ಕೋಲಾರ: ಅಕ್ರಮವಾಗಿ ಗೋವು ಸಾಗಿಸುತ್ತಿದ್ದಾಗ 8 ಜನರನ್ನ ಬಂಧಸಿರೋ ಘಟನೆ ಕೋಲಾರದ ಕೆಜಿಎಫ್ ತಾಲೂಕಿನ ಕ್ಯಾಸಂಬಳಿ ಬಳಿ ನಡೆದಿದೆ.

ಆಂಧ್ರಪ್ರದೇಶದ ಕಡೆಯಿಂದ ಕರ್ನಾಟಕ ಗಡಿಭಾಗದ ಬಳಿ ಬಂದಿದ್ದ ಕ್ಯಾಂಟರ್​​ಗಳು ರಾಜ್ ಪೇಟ್ ರೋಡ್ ಮೂಲಕ ಕೇರಳ ಕಡೆಗೆ ಗೋವುಗಳನ್ನ ಸಾಗಿಸುತ್ತಿದ್ದರು.

ಕೇರಳದ ಗೋಮಾಂಸ ರಫ್ತು ಕೇಂದ್ರಕ್ಕೆ ಸಾಗಿಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಕದೀಮರು ಎರಡು ಟ್ರಕ್​​ಗಳಲ್ಲಿ ಹಸುಗಳು ಹಾಗೂ ಎಮ್ಮೆಗಳನ್ನ ಸಾಗಿಸುತ್ತಿದ್ದರು. ಸುಮಾರು 50ಕ್ಕೂ ಹೆಚ್ಚು ಹಸುಗಳು ಹಾಗೂ ಎಮ್ಮೆಗಳು ರಕ್ಷಣೆ ಮಾಡಲಾಗಿದೆ.

ಇನ್ನು ರಕ್ಷಿಸಿದ ಗೋವು ಮತ್ತು ಎಮ್ಮೆಗಳನ್ನು ಕ್ಯಾಸಂಬಳ್ಳಿ ಪೊಲೀಸರು ಗೋಶಾಲೆಗೆ ಬಿಟ್ಟಿದ್ದಾರೆ.

ಸದ್ಯ ಕ್ಯಾಸಂಬಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES