Saturday, January 11, 2025

ಮಹಾ ಮಳೆ ಚಿಕ್ಕೋಡಿ ಉಪವಿಭಾಗದ 9 ಸೇತುವೆಗಳು ಜಲಾವೃತ

ಬೆಳಗಾವಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದ ಎಂಟು ಸೇತುವೆಗಳು ಮುಳಗಡೆಯಾಗಿದ್ದು 18 ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ – ಯಡೂರ ಸೇತುವೆ, ಮಾಂಜರಿ – ಬಾವನಸೌಂದತ್ತಿ ಬ್ರಿಜ್ ಕಮ್ ಬ್ಯಾರೇಜ್ ಮುಳಗಡೆ ಹಾಗೂ ದೂದಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ – ದತ್ತವಾಡ ಸೇತುವೆ ಸಂಚಾರಕ್ಕೆ ಬಂದ ಇದೆ.

ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ – ಭೋಜ ಸೇತುವೆ, ಕುನ್ನೂರ – ಬಾರವಾಡ ಸಂಪರ್ಕ ಸೇತುವೆ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿರುವ ಭೋಜವಾಡಿ – ಕುನ್ನೊರ, ಜತ್ರಾಟ – ಭೀವಶಿ, ಸಿದ್ನಾಳ – ಅಕ್ಕೋಳ, ಮಮದಾಪೂರ – ಹುನ್ನರಗಿ ಸೇತುವೆ ಸಂಚಾರಕ್ಕೆ ಬಂದ ಇದೆ.

ಕರ್ನಾಟಕ – ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಾಯಬಾಗ ತಾಲೂಕಿನ ಕುಡಚಿ – ಕಾಗವಾಡ ತಾಲೂಕಿನ ಉಗಾರ ಸೇತುವೆ ಮುಳಗಡೆ ಹಂತಕ್ಕೆ ತಲುಪಿದ್ದು ಇನ್ನೂ ಎರಡು ಅಡಿ ನೀರಿನ ಒಳ ಹರಿವಿನಲ್ಲಿ ಏರಿಕೆಯಾದರೆ ಕುಡಚಿ – ಉಗಾರ ಸೇತುವೆ ಕೂಡಾ ಮುಳಗಡೆಯಾಗಬಹುದು.

ಮಹಾರಾಷ್ಟ್ರದ ಘಟ್ಟ ಪ್ರದೇಶಕ್ಕೆ ಹೋಲಿಸಿದರೆ ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ, ಹುಕ್ಕೇರಿ ಚಿಕ್ಕೋಡಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿರುವುದು ವರದಿಯಾಗಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 88,5000 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 23,760 ಕ್ಯೂಸೆಕ್ ನೀರು ಹೀಗೆ ಒಟ್ಟು 1,12,260 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹೀಗೆ ಮಳೆ ಮುಂದುವರೆದರೆ ಮತ್ತೆ ಕೃಷ್ಣಾ ನದಿ ಏರಿಕೆಯಾಗಬಹುದು

RELATED ARTICLES

Related Articles

TRENDING ARTICLES