Wednesday, December 25, 2024

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಕೇಸ್​​ ಮಾಸುವ‌ ಮುನ್ನವೇ ಮತ್ತೊಂದು ಕೊಲೆ

ಹಾಸನ : ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಪ್ರಾಪ್ತ ಯುವಕರ ಕೈಯಲ್ಲಿ ಲಾಂಗು ಮಚ್ಚು. ಅವರ ಬಾಯಲ್ಲೆಲ್ಲಾ ಮರ್ಡರ್ ಮಾತುಗಳು. ಕಳೆದ ಎರಡು ವರ್ಷದಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 25ಕ್ಕೂ ಹೆಚ್ಚು ಕೊಲೆಗಳು, 40ಕ್ಕೂ ಹೆಚ್ಚು ಗಲಾಟೆ ಕೇಸ್​​ಗಳು ದಾಖಲಾಗಿವೆ. ಪೊಲೀಸರ ಭಯವಿಲ್ಲದೇ ಹಾಸನದಲ್ಲಿ ರೌಡಿಗಳದ್ದೇ ಕಾರುಬಾರಾಗಿದೆ.

ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಕೇಸ್ ಮಾಸುವ‌ ಮುನ್ನವೇ ಹಾಸನದಲ್ಲಿ ಮತ್ತೊಂದು ಮರ್ಡರ್ ಆಗಿದೆ. ಹೌದು, ಹಾಸನ ಜಿಲ್ಲಾದ್ಯಂತ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ, 80 ಕಿಲೋ‌ಮೀಟರ್ ಬಾಡಿ ತೆಗೆದುಕೊಂಡು ಹೋಗಿ ನದಿಗೆ ಬಿಸಾಕಿದ್ದಾರೆ. ಇದೀಗ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಮರ್ಡರ್​ಗಳು ನಡೆದಿದ್ದು, 40ಕ್ಕೂ ಹೆಚ್ಚು ಗಲಾಟೆ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ನಿತ್ಯವೂ ಸಣ್ಣಪುಟ್ಟ ಗಲಾಟೆಗಳು ನಡೀತಾನೇ ಇರ್ತಾವೆ. ಅಪ್ರಾಪ್ತ ಯುವಕರು ಕೂಡ ಲಾಂಗು, ಮಚ್ಚು ಇಟ್ಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಗೃಹಸಚಿವರು ಗಮನಹರಿಸಿ,
ಜಿಲ್ಲಾ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸೋ ಅಗತ್ಯವಿದೆ ಅಂತಾರೆ ಸಾರ್ವಜನಿಕರು.

ಕ್ರೈಂರೇಟ್ಸ್ ಕಂಟ್ರೋಲ್​​ಗೆ ಎಸ್ಪಿ ಹರಿರಾಮ್ ಶಂಕರ್ ಮುಂದಾಗಲೇ ಬೇಕಾಗಿದೆ. ಒಂದು ಮರ್ಡರ್ ಮಾಡಿ ಮೂರು ತಿಂಗಳಿಗೆ ಬೇಲ್ ತೆಗೆದುಕೊಂಡು ಮತ್ತದೇ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಭಯವೇ ಇಲ್ಲದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಅಲ್ಲದೇ ಇದಕ್ಕೆ ರಾಜಕಾರಣಿಗಳೇ ಪ್ರೋತ್ಸಾಹ ನೀಡುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿವೆ.

ಒಟ್ನಲ್ಲಿ, ಹಾಸನದಲ್ಲಿ ಪುಡಿರೌಡಿಗಳಿಂದ ಹಿಡಿದು ದೊಡ್ಡ ರೌಡಿಗಳವರೆಗೂ ಬಾಲ ಬಿಚ್ಚಿರೋದಂತೂ ಸುಳ್ಳಲ್ಲ. ನೂತನವಾಗಿ‌ ಅಧಿಕಾರ ಸ್ವೀಕರಿಸೋ ಎಸ್ಪಿ ಹರಿರಾಮ್ ಶಂಕರ್, ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗದೇ ಇದ್ದಲ್ಲಿ ಇವರ ಆಟಗಳು ಮತ್ತಷ್ಟು ಮುಂದುವರೆಯೋದ್ರ ಜೊತೆಗೆ ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡೋದ್ರಲ್ಲಿ ಅನುಮಾನವಿಲ್ಲ. ರೌಡಿಗಳ ಪುಂಡಾಟಕ್ಕೆ ಬ್ರೇಕ್ ಹಾಕಿ, ಸಾರ್ವಜನಿಕರು ನೆಮ್ಮದಿಯಾಗಿ ಇರುವಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕಿದೆ.

ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ

RELATED ARTICLES

Related Articles

TRENDING ARTICLES