Saturday, December 28, 2024

ಇಂದು ಎಲ್ಲೆಲ್ಲೂ ಗುರುಪೌರ್ಣಮಿ ಹಬ್ಬದ ಸಂಭ್ರಮ

ಬೆಂಗಳೂರು : ಕೊರೋನಾ ಕಾರಣದಿಂದ ಕಳೆದ 2 ವರ್ಷಗಳಿಂದ ಗುರು ಪೌರ್ಣಮಿ ಸಂಭ್ರಮ ಇರಲಿಲ್ಲ. ಆದ್ರೆ ಈ ಬಾರಿ ಬಹುತೇಕ ಎಲ್ಲಾ ಬಾಬಾ ದೇವಸ್ಥಾನಗಳಲ್ಲಿ ಅದ್ದೂರಿಯಾಗಿ ಗುರುಪೂರ್ಣಮಿ ಆಚರಿಸಲಾಯಿತು.

ಬೆಳಿಗ್ಗೆಯಿಂದ ವಿವಿಧ ಪೂಜೆ ಅಭಿಷೇಕ ಹಾಗೂ ಭಜನೆ ಮೂಲಕ ಪ್ರಾರ್ಥನೆ ಜರುಗಿದ್ದು, ಇಂದು ಬಾಬಾ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಬರುವ ಭಕ್ತರಿಗೆ ವಿಶೇಷ ಪ್ರಸಾದ ಹಾಗೂ ತೀರ್ಥ ವಿನಿಯೋಗ ಮಾಡಲಾಗಿದೆ.

ನಗರದ ವಿದ್ಯಾರಣ್ಯಪುರದಲ್ಲಿರುವಂತಹ ಸಾಯಿಬಾಬಾ ದೇವಸ್ಥಾನದಲ್ಲಿ ಇವತ್ತು ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಬೆಳಗ್ಗೆಯಿಂದ ಸಂಜೆವರೆಗೂ ಕೂಡ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES