Wednesday, January 22, 2025

ಗಾಳಿಪಟ-2: ಭಟ್ಟರ ಬತ್ತಳಿಕೆಯಲ್ಲಿ ಮತ್ತೊಂದು ಎಣ್ಣೆ ಸಾಂಗ್;​ ರಿಲೀಸ್​ ಡೇಟ್​ ಫಿಕ್ಸ್​​​​

ಹಾಡು.. ಸಾಂಗ್​​​​.. ಲೆಕಾರ್ಡ್.. ಅಲ್ಜುನ್​ ಜನ್ಯಾ ಮ್ಯುಸಿಕ್​, ಯೋಗಲಾಜ್​ ಭಟ್​ ಲಿಲಿಕ್​, ವಿಜಯ್​ ಪ್ಲಾಕಾಶ್​ ಸಿಂಗಲ್​​​.. ಛೇ..! ಏನ್​ ಹೇಳ್ತಾ ಇದಾರೆ ಆ್ಯಂಕರ್ ಅಂತಾ ಕನ್ಫ್ಯೂಸ್​ ಆಗ್ತಾ ಇದೀರಾ..? ತಪ್​ ತಿಳಿಬೇಡಿ. ಗಾಳಿಪಟ ಗ್ಯಾಂಗ್​​ ಸಹವಾಸ ಮಾಡಿ ನಮ್​ ಬಾಯ್​ ಕೂಡ ತಡವರಿಸುತ್ತಾ ಇದೆ. ಯೆಸ್​​​..  ಡಾ.ಯೋಗರಾಜ್​ ಭಟ್ರ ಹತ್ತಿರ ಪೇಷೆಂಟ್​​ ಆಗಿ ಹೋದೋರ್​ ಕಥೆ ಹೇಳ್ತೀವಿ. ಜಸ್ಟ್​ ವಾಚ್​​

ಭಟ್ರ ನಾಲಗೆ ಹೊಳ್ಳಿಲ್ಲ.. ಗಣಿ- ದಿಗ್ಗಿ ಪವನ್​​​​​​​ಗೆ ಮಾತಿಲ್ಲ..!

ಡೈರೆಕ್ಟರ್ ಡಾಕ್ಟರ್ ಆದ್ರು.. ಹೀರೋಗಳು ಪೇಷೆಂಟ್ ಆದ್ರು..!

ಭಟ್ರ ಸಾಹಿತ್ಯಕ್ಕೆ ವಿಜಯ್​ ಪ್ರಕಾಶ್​​ ದನಿ.. ಸಖತ್​ ಕಾಂಬಿನೇಷನ್​

ಜುಲೈ14ಕ್ಕೆ ದೇವ್ಲೆ ದೇವ್ಲೆ ಎಣ್ಣೆ ಸಾಂಗ್​ ರಿಲೀಸ್​​​..ಫ್ಯಾನ್ಸ್​ ವೆಯ್ಟಿಂಗ್​​

ಭಟ್ರ ನಿರ್ದೇಶನದಲ್ಲಿ ಮುಗಿಲೆತ್ತರಕ್ಕೆ ಹಾರಾಡಿದ್ದ ಸಿನಿಮಾ ಗಾಳಿಪಟ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಯುವಮನಸ್ಸುಗಳನ್ನು ತಲ್ಲಣಗೊಳಿಸಿತ್ತು. ಚಿತ್ರದ ಕಥೆ, ಹಾಡುಗಳು ಮಂತ್ರಮುಗ್ಧಗೊಳಿಸಿದ್ದವು. ಗಣಿ, ದಿಗಂತ್​​​​ ಹಾಗೂ ರಾಜೇಶ್​​​ ಕಾಂಬಿನೇಷನ್​​​​ಗೆ ಫ್ರೇಕ್ಷಕರು ಫಿದಾ ಆಗಿದ್ದರು. ಭಟ್ರ ಕೈರುಚಿಯ ಸವಿಯನ್ನು ಕಂಡು ಚಿತ್ರರಸಿಕರು ಮಾಎಉ ಹೋಗಿದ್ರು. ಇದೀಗ ಸಿಕ್ಕಾಪಟ್ಟೆ ಕ್ರೇಜ್​​  ಕ್ರಿಯೇಟ್​ ಮಾಡಿರೋ ಗಾಳಿಪಟ2 ಸಿನಿಮಾ ತೆರೆಗೆ ಬರ್ತಾ ಇದೆ. ಅದಕ್ಕೂ ಮುನ್ನ ಭಟ್ರ ಲೇಖನಿಯ ಎಣ್ಣೆ ಸಾಂಗ್​ ಸದ್ದು ಮಾಡೋ ಸೂಚನೆ ಕೊಟ್ಟಿದೆ.

ಭಟ್ರ ಸಿನಿಮಾಗಳಂದ್ರೆ 100% ಕಿಕ್ಕು. ಲಾಜಿಕ್​ ಇಲ್ಲದೆ ಮ್ಯಾಜಿಕ್ ಮಾಡೋ ಸಿನಿಮಾ ಮಾಂತ್ರಿಕ. ಅವ್ರ ಹಾಡುಗಳಂತೂ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಷ್ಟೆ ಕರತಲಾಮಲಕ ಸಾಲುಗಳು. ಪ್ರೇಮಗೀತೆಗಳಿರಲಿ, ಐಟಂ ಸಾಂಗ್​​ ಇರಲಿ, ಭಟ್ರ ಲೇಖನಿಯ ವರ್ಚಸ್ಸೇ ಬೇರೆ. ಇದೀಗ ಭಟ್ರ ಬತ್ತಳಿಕೆಯಿಂದ ಎಣ್ಣೆ ಸಾಂಗ್​ ಬರ್ತಿದೆ. ಖಾಲಿ ಕ್ವಾಟ್ರು ಬಾಟ್ಲಯಂಗೆ ಲೈಫು, ನಾವ್​ ಮನೇಗೆ ಬರೋದಿಲ್ಲ ಹಾಡನ್ನು ಬರೆದಿದ್ದ ಭಟ್ರು, ಭಿನ್ನವಾಗಿ ಹೊಸ ಸಾಂಗ್ ಮಾಡಿದ್ದಾರೆ.

ಆದ್ರೆ ವಿಷ್ಯಾನೆ ಬೇರೆ ಇದೆ. ಡಾಕ್ಟರ್​​ ಅವತಾರದಲ್ಲಿ ಭಟ್ರು ಕಾಣಿಸಿಕೊಂಡಿದ್ದಾರೆ. ಅವರತ್ರ ಚಿಕಿತ್ಸೆ ಪಡೆಯೋಕೆ ಗಣಿ ಗ್ಯಾಂಗ್​ ಹೋಗಿದೆ. ಎಣ್ಣೆ ಹೊಡೆದ್ರೆ ನಾಲಿಗೆ ತಡವರಿಸುತ್ತೆ ಔಷದಿ ಕೊಡಿ ಪ್ಲೀಜ್​ ಅಂತಾ ಭಟ್ರನ್ನು ಕೇಳ್ತಿದ್ದಾರೆ ಗೋಲ್ಡನ್​ ಸ್ಟಾರ್​​. ಈ ಸನ್ನಿವೇಶದವ ವೀಡಿಯೋ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಕಾಮಿಡಿಯಾಗಿ ಮೂಡಿ ಬಂದಿದೆ.

ಗಾಳಿಪಟ 2 ಚಿತ್ರದ ಮೇಲೆ ಪ್ರೇಕ್ಷಕರು ಎಲ್ಲಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ದೋಸ್ತಿಗಳಾಗಿ ಗಣಿ, ದಿಗಂತ್​​, ಪವನ್​​ ಅಭಿನಯಿಸ್ತಿದ್ದಾರೆ. ಕಾಲೇಜ್​​​​​​ ಲೈಫು, ತರಲೆ, ತಮಾಷೆ, ಲವ್​ಸ್ಟೋರಿ, ಮನಮುಟ್ಟೋ ಎಮೋಷನ್​​​ ಕಟ್ಟಿಕೊಟ್ಟಿದ್ದಾರಂತೆ ಭಟ್ರು. ಮತ್ತೊಮ್ಮೆ ಗಾಳಿಪಟ ಸಿನಿಮಾ ಬೀಟ್​ ಮಾಡೋಕೆ ಸೀಕ್ವೆಲ್​ ಸಿನಿಮಾ ರೆಡಿಯಾಗಿದೆ.

ಈಗಾಗ್ಲೇ ಪರೀಕ್ಷೆನಾ ಬಡಿಯಾ ಸಾಂಗ್​​ನ ರಿಪೀಟ್​ ಮೋಡ್​ನಲ್ಲಿ ಕೇಳಿರೋ ಅಭಿಮಾನಿಗಳು ಸಿನಿಮಾದ ಮೇಲೆ ಬಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾನಾಡದ ಮಾತೆಲ್ಲವಾ ಹಾಡು ಕೂಡ ಸಿಕ್ಕಾಪಟ್ಟೆ ಹಿಟ್​ ಆಗಿದೆ. ಇದೀಗ ದೇವ್ಲೇ ಸಾಂಗ್​ ಸರದಿ. ಭಟ್ರ ಆಸ್ಪತ್ರೆಗೆ ಹೋಗಿರೋ ಗಣಿ ಗ್ಯಾಂಗ್​​ಗೆ ಎಣ್ಣೆ ಹೊಡೆದಾಗ ತಡವರಿಸೋ ಕಾಯಿಲೆಗೆ ಮದ್ದು ಏನು ಅನ್ನೋದನ್ನ ಹೇಳಿದ್ದಾರೆ.

ರಾಗೆ ಲಾ ಅಂತಾ ಹೇಳೋ ಕುಡುಕರ ನಾಡಗೀತೆಯಾಗಿ ದೇವ್ಲೇ ಸಾಂಗ್​ ಜುಲೈ 14 ಸಂಜೆ 05 ಗಂಟೆ 06 ನಿಮಿಷಕ್ಕೆ ರಿಲೀಸ್ ಆಗ್ತಿದೆ. ಭಟ್ರ ಕ್ಯಾಚಿ ಸಾಲುಗಳನ್ನು ಕೇಳಿದ್ದ ಅಭಿಮಾನಿಗಳಿಗೆ ಇದೊಂದು ಸೌಭಾಗ್ಯ. ಸೂರಜ್​ ಪ್ರೊಡಕ್ಷನ್​ ಅಡಿಯಲ್ಲಿ ಉಮಾ ಎಮ್​​ ರಮೇಶ್​ ರೆಡ್ಡಿ ಅವರು ಬಂಡವಾಳ ಹೂಡಿರೋ ಗಾಳಿಪಟ 2 ಆಗಸ್ಟ್​ 12ಕ್ಕೆ ತೆರೆಗೆ ಬರಲಿದೆ. ಅನಂತ್​ ನಾಗ್​​, ಬುಲೆಟ್​ ಪ್ರಕಾಶ್​​, ವೈಭವಿ ಶಾಂಡಿಲ್ಯ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅರ್ಜುನ್​ ಜನ್ಯಾ ಸಂಗೀತದ ಸ್ವರದಲ್ಲಿ ಮಿಂದೇಳಬೇಕಾದರೆ, ಭಟ್ರ ಕಥೆಯನ್ನು ಆನಂದಿಸಬೇಕಾದರೆ ಆಗಸ್ಟ್​ 12ರವರೆಗೂ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES