Sunday, December 22, 2024

ಸಿದ್ದರಾಮಯ್ಯ ಗುಣಗಾನ ಮಾಡಿದ ಜಿ.ಪರಮೇಶ್ವರ್

ಬೆಂಗಳೂರು: ನಾನು ಸಿದ್ಧರಾಮಯ್ಯ ಅವರನ್ನು ಪೂರ್ಣ ಅರ್ಥ ಮಾಡಿಕೊಳ್ಳೋದಕ್ಕೆ ಆಗಿಲ್ಲ. ಜಸ್ಟ್ ಅರ್ಥ ಮಾಡಿಕೊಂಡಿದ್ದು ಕೇವಲ ಶೇ.50ರಷ್ಟು ಮಾತ್ರವೇ ಆಗಿದೆ. ಉಳಿದರ್ಧ ಅರ್ಥ ಮಾಡಿಕೊಳ್ಳೋಕೆ ಅವರು ಬಿಟ್ಟು ಕೊಟ್ಟೇ ಇಲ್ಲ ಎಂಬುದಾಗಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಇಂದು ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಾನು ಸಿದ್ದರಾಮಯ್ಯರನ್ನ ಪೂರ್ಣ ಅರ್ಥ ಮಾಡಿಕೊಳ್ಳಲು ಆಗಿಲ್ಲ. ಎಂಟು ವರ್ಷ ಒಟ್ಟಿಗೆ ಕೆಲಸ ಮಾಡಿದ್ದೇನೆ. ಆದರೂ ಅವರನ್ನ ಅರ್ಥ ಮಾಡಿಕೊಂಡಿದ್ದು ಕೇವಲ 50% ಮಾತ್ರವಾಗಿದೆ. 50% ಕಡಿಮೆಯಾದರೂ 60% ಪರ್ಸೆಂಟ್ ಅಂದುಕೊಳ್ತೇನೆ. ಉಳಿದ 40% ಅರ್ಥ ಮಾಡಿಕೊಳ್ಳೋಕೆ ಅವರು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದರು.

ಇನ್ನೂ ಅವರ ಸಾಮಾಜಿಕ ಬದ್ಧತೆ ಬಗ್ಗೆ ನನಗೆ ಮೆಚ್ಚುಗೆ ಇದೆ. ಕಾಂಗ್ರೆಸ್ ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಕ್ಷದ ಧ್ವಜ ಹಿಡಿಯಲು ಜನ ಇದ್ದಾರೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ಬಗೆಗಿನ ನಮ್ಮ ಬದ್ಧತೆಯನ್ನು ತೋರಿಸಬೇಕು. ಯಾವುದೆ ರೀತಿಯ ಅನುಮಾನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES