Monday, December 23, 2024

ಬಿಗ್​ ಬಾಸ್ ಅಭಿಮಾನಿಗಳಿಗೆ ಗುಡ್​​ನ್ಯೂಸ್​

ಭಾರತದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ ಕೂಡ ಒಂದು. ಈಗಾಗ್ಲೇ ಕನ್ನಡದಲ್ಲಿ ಎಂಟು ಸೀಸನ್​​​ಗಳನ್ನು ಭರ್ಜರಿಯಾಗಿ ಮುಗಿಸಿರುವ ಖಾಸಗಿ ವಾಹಿನಿ ಒಂಬತ್ತನೇ ಸೀಸನ್​​​ ನಡೆಸಲು ತುದಿಗಾಲಲ್ಲಿ ನಿಂತಿದೆ. ಕಿಚ್ಚ ಸುದೀಪ್​​ ನಿರೂಪಣೆಯಲ್ಲಿ ಸೆನ್ಷೇಷನ್​ ಕ್ರಿಯೇಟ್​​ ಮಾಡಿರೋ ಬಿಗ್​ ಬಾಸ್​​ ಈ ಬಾರಿಯೂ ನಿರೀಕ್ಷೆಗೂ ಮೀರಿ ಕುತೂಹಲ ಹುಟ್ಟಿಸಿದೆ. ಈ ಬಾರಿಯ ಬಿಗ್​​ ಬಾಸ್​ ಹೇಗೆಲ್ಲಾ ಇರಲಿದೆ. ಯಾರೆಲ್ಲಾ ಭಾಗವಹಿಸಬಹುದು ಅನ್ನೋ ಪ್ರಶ್ಮೆಗೆ ಇಲ್ಲಿದೆ ಉತ್ತರ.

ನಸೀಬು ಚೆನ್ನಾಗಿದ್ರೆ ಒಂದೇ ದಿನದಲ್ಲಿ ಸ್ಟಾರ್​ ಆಗಬಹುದು. ಇದಕ್ಕೆ 100% ವೇದಿಕೆ ಅಂದ್ರೆ ಕನ್ನಡದ ಬಿಗ್​ ಬಾಸ್​​​. ಒಟ್ಟು 8 ಸೀಸನ್​ಗಳಲ್ಲಿ ಎಲೆಮರೆಯ ಕಾಯಿಯಾಗಿದ್ದ ಅನೇಕ ಕಲಾವಿದರು ಇಂದು ಸ್ಟಾರ್​​​​ಗಳಾಗಿದ್ದಾರೆ. ಗೆದ್ದವರು ಮಾತ್ರವಲ್ಲದೇ ಸ್ಪರ್ಧೆ ಮಾಡಿದ್ದ ಎಲ್ಲರೂ ಲಕ್ಷಾಂತರ ಫಾಲೋವರ್ಸ್​​ ಹೊಂದಿದ್ದಾರೆ. ಆ ಸಾಮರ್ಥ್ಯ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್​​​​​ಗೆ ಇದೆ. ಈ ಶೋ ಶುರುವಾಗ್ತಿದ್ದಂತೆ, ಮನೆಕೆಲಸ ಬಿಟ್ಟು ಟಿವಿ ಮುಂದೆ ಕೂರ್ತಿದ್ದ ಹುಚ್ಚು ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಸಿಕ್ಕಿದೆ. ಬಿಗ್​ ಬಾಸ್​ 9ನೇ ಸೀಸನ್​​​ ಪ್ರೋಮೋ ಶೂಟ್​ ಆಗಿದೆ.

ಸಿನಿಮಾ, ಸೀರಿಯಲ್​​ನ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಿದ್ದ ಬಿಗ್​​​ಬಾಸ್​​, ಈ ಬಾರಿ ಸಖತ್ ಡಿಫರೆಂಟ್​ ಆಗಿ ಮೂಡಿ ಬರ್ತಿದೆ. ಕಾಂಟ್ರವರ್ಸಿ ಕ್ರಿಯೇಟ್​​ ಮಾಡೋ ಪಂಟರಿಗಾಗಿ ಹದ್ದಿನ ಕಣ್ಣಲ್ಲಿ ಹುಡುಕ್ತಾ ಇದೆ. ಇದರಲ್ಲಿ ಯ್ಯೂಟ್ಯೂಬ್​​ ಸ್ಟಾರ್ಸ್​​​, ಇನ್​​​ಸ್ಟಾಗ್ರಾಮ್​ ರೀಲ್ಸ್​​ ಸ್ಟಾರ್​​, ಫೇಸ್​​ಬುಕ್​ನಲ್ಲಿ ಸದ್ದು ಮಾಡೋ ವಿವಾದಾತ್ಮಕ ವ್ಯಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ. ಈ ಬಾರಿ ಯಾರಿಗೆಲ್ಲಾ ಚಾನ್ಸ್​ ಸಿಗುತ್ತೋ ಅನ್ನೋ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.


ಪ್ರತಿ ಬಾರಿಯಂತೆ ಈ ಸಲವೂ ಕೂಡ ಸಖತ್​ ಕ್ರಿಯೇಟಿವ್​ ಪ್ರೋಮೋ ಶೂಟ್​ ಮಾಡಲಾಗಿದೆ. ಈ ಕುರಿತು ಬ್ಯುಸಿನೆಸ್​ ಹೆಡ್​​ ಪರಮೇಶ್ವರ್​ ಗುಂಡ್ಕಲ್​ ಸೋಶಿಯಲ್​ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್ಲಾಗಿದ್ದು, ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯರಿಗೂ ಕಾತರ ಹೆಚ್ಚಾಗಿದೆ. ಈ ಬಾರಿ ಬಿಗ್​ ಬಾಸ್​ ಮನೆ ಎಷ್ಟು ಲಕ್ಸುರಿಯಾಗಿರುತ್ತೆ, ಏನೆಲ್ಲಾ ಗೇಮ್ಸ್​​ ಇರಲಿದೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಈ ಬಾರಿ ಬಿಗ್​ ಬಾಸ್​ ಎರಡು ಸೀಸನ್​ಗಳಲ್ಲಿ ನಡೆಯಲಿದೆ ಎನ್ನಲಾಗ್ತಿದೆ. ಜೊತೆಗೆ ಈ ಬಾರಿಯ ಬಿಗ್​ಬಾಸ್​​ ಓಟಿಟಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗ್ತಿದೆ. ಒಂದನ್ನು ಮಿನಿ ಸೀಸನ್​ ಮಾಡಿ ಓಟಿಟಿಯಲ್ಲಿ ಪ್ರಸಾರ ಮಾಡಿದ್ರೆ, ಇನ್ನೊಂದನ್ನು ಟಿವಿಯಲ್ಲಿ ಪ್ರಸಾರ ಮಾಡೋ ಪ್ಲಾನ್​​ ಮಾಡಿಕೊಂಡಿದೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಮಿನಿ ಬಿಗ್​ಬಾಸ್​​, ಮೆಗಾ ಬಿಗ್​ಬಾಸ್​​ ಹಾವಳಿ ಜೋರಾಗಿರೋದಂತೂ ಪಕ್ಕಾ. ಭರ್ಜರಿ ಮನರಂಜನೆಯ ಜೊತೆಗೆ ಪ್ರತಿನಿತ್ಯವೂ ತಾಜಾ ತಾಜಾ ಅನುಭವ ಸಿಗಲಿದೆ. ಅಂತೂ ಬಿಗ್​ಬಾಸ್​ ಆರಂಭಕ್ಕೆ ಫೈನಲ್​ ಡೇಟ್​ ಫಿಕ್ಸ್​ ಆಗಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES