Monday, February 24, 2025

ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಬೋಧನೆ : ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಸುಸಜ್ಜಿತ ಸೌಕರ್ಯಗಳುಳ್ಳ ಒಂದೂವರೆ ಸಾವಿರ ಮಾದರಿ ಶಾಲೆಗಳನ್ನು ರೂಪಿಸಲು ಉದ್ದೇಶಿಸಲಾಗಿದೆ.’ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ವಿಷಯ ತಿಳಿಸಿದ್ದಾರೆ .

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಸೌಲಭ್ಯ ಜಾರಿಯಾಗಲಿದೆ. ಆಯ್ದ ಶಾಲೆಗಳನ್ನು ಗುರುತಿಸಿ ಅವುಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಪಠ್ಯದಲ್ಲಿ ರಾಷ್ಟ್ರೀಯತೆಯ ವಿಚಾರ ತುಂಬುವ ಪ್ರಯತ್ನ ಮಾಡಿದ್ದು ಕೆಲವರ ಕಣ್ಣು ಕೆಂಪಾಗಿಸಿದೆ. ಮಾತೃಭೂಮಿಯ ಬಗ್ಗೆ ಸ್ವಾಭಿಮಾನ ಮೂಡಿಸುವ ವಿಷಯ ಪುಸ್ತಕದಲ್ಲಿದ್ದರಿಂದ ವಿರೋಧ ವ್ಯಕ್ತವಾಗಿದೆ. ಈ ಅಂಶಗಳನ್ನು ವಿರೋಧಿಸಲಾಗದೆ ಪಠ್ಯಪುಷ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನು ಗುರಿಯಾಗಿಸಿ ವಿರೋಧಿಗಳು ಟೀಕಿಸಿದ್ದಾರೆ ಎಂದರು.

ಇನ್ನು ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ರಾಜಕೀಕರಣಗೊಳಿಸಿದ್ದು ತಪ್ಪು. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಠ್ಯ ಪರಿಷ್ಕರಣೆ ಮಾಡಿದ್ದನ್ನು ವ್ಯವಸ್ಥೆಯ ಚೌಕಟ್ಟಿನೊಳಗೆ ಖಂಡಿಸಿದ್ದೆವು. ಅವರಂತೆ ಬೀದಿಗಿಳಿದು ಪ್ರತಿಭಟಿಸಲಿಲ್ಲ’ ಎಂದು ಸಚಿವ ನಾಗೇಶ್ ವಿಪಕ್ಷದವರನ್ನು ಕುಟುಕಿದರು.

RELATED ARTICLES

Related Articles

TRENDING ARTICLES