Wednesday, January 22, 2025

ರಾಷ್ಟ್ರಕ್ಕೆ ಧೀಮಂತ ನಾಯಕ ಸಿಕ್ಕಿದ್ದಾರೆ: ಜಗ್ಗೇಶ್

ತುಮಕೂರು: ‘ಈವರೆಗೆ ರಾಷ್ಟ್ರ ಲಾಂಛನದಲ್ಲಿರುವ ಸಿಂಹ ಬಾಯಿ ಮುಚ್ಚಿಕೊಂಡಿತ್ತು. ಈಗ ಬಾಯಿ ತೆರೆದಿದೆ’ ಎಂದು ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್ ಅವರು ನೂತನ ಲಾಂಛನವನ್ನು ಟೀಕಿಸುವವರಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಸ್ತು ಸಂಗ್ರಹಾಲಯದಲ್ಲಿ ಇರುವ ರಾಷ್ಟ್ರ ಲಾಂಛನ ನೋಡಬೇಕು. ಅದರ ಯಥಾವತ್ ನಿರ್ಮಾಣ ಮಾಡಿ ನೂತನ ಸಂಸತ್ ಕಟ್ಟಡದ ಮೇಲೆ ಅನಾವರಣ ಮಾಡಲಾಗಿದೆ. ಮಾತನಾಡುವವರು (ಟೀಕಿಸುವವರು) ಶೇ 2ರಷ್ಟಿದ್ದರೆ, ಆರಾಧಿಸುವವರ ಸಂಖ್ಯೆ ಶೇ 98ರಷ್ಟು ಇದೆ. ನಾವು ದೊಡ್ಡದನ್ನು ನೋಡಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಇಷ್ಟು ದಿನಗಳ ಕಾಲ ಸಿಂಹ ಬಾಯಿ ಮುಚ್ಚಿಕೊಂಡಿತ್ತು. ಈಗ ತೆರೆಯುವಂತೆ ಮಾಡಿದ್ದಾರೆ. ಎದೆ ಉಬ್ಬಿಸಿ, ಮೆಚ್ಚಲೇಬೇಕಾದ ಒಂದು ವಿಚಾರವನ್ನು ಹೇಳಲೇಬೇಕು. ರಾಷ್ಟ್ರಕ್ಕೆ ಧೀಮಂತ ನಾಯಕ ಸಿಕ್ಕಿದ್ದಾನೆ. ಅವನೇ ನಿಜವಾದ ಸಿಂಹ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಣ್ಣಿಸಿದರು.

RELATED ARTICLES

Related Articles

TRENDING ARTICLES